UN NETWORKS
ಉಳ್ಳಾಲ: ಕೇರಳದಿಂದ ಮಂಗಳೂರಿಗೆ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಮೂವರ ತಂಡವನ್ನು ಉಳ್ಳಾಲ ಪೊಲೀಸರು ತೊಕ್ಕೊಟ್ಟು ಕಲ್ಲಾಪು ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುತ್ತಾರು ಶಾಂತಿಭಾಗ್ ನಿವಾಸಿ ಮಹಮ್ಮದ್ ನೌಫಾಲ್ (25), ಮದನಿನಗರ ನಿವಾಸಿ ಮಹಮ್ಮದ್ ಖುರ್ಷಿದ್ ((20), ಮತ್ತು ಮುಡಿಪು ಕುಕ್ಕುದಕಟ್ಟೆ ನಿವಾಸಿ ಅಬ್ದುಲ್ ಆತಿಕ್ (19) ಬಂಧಿತರು.ಆರೋಪಿಗಳು ಆಲ್ಟೋ ಕಾರಿನಲ್ಲಿ ಉಪ್ಪಳದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ತಡೆಹಿಡಿದು ಬಂಧಿಸಿದ್ದಾರೆ.
ಆರೋಪಿಗಳ ಬಳಿಯಿದ್ದ 105 ಗ್ರಾಂ ಗಾಂಜಾ, ಕಾರು ಹಾಗೂ ರೂ.4,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಉಪನಿರೀಕ್ಷಕ ವಿನಾಯಕ ತೋರಗಲ್, ಎಎಸ್ ಐ ವಿಶ್ವನಾಥ ರೈ, ವಾಸುದೇವ, ಸುರೇಶ್, ಅಕ್ಬರ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.


