UN NETWORKS
ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ ಹಾಗೂ ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘಗಳ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಸಾರ್ವಜನಿಕ ಕ್ರೀಡಾಕೂಟ ನಡೆಯಿತು.
ಪ್ರಗತಿಪರ ಕೃಷಿಕ ಹಾಗೂ ಪಂಚಾಯತ್ ಸದಸ್ಯ ಅಚ್ಯುತಗಟ್ಟಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ, ಕಳೆದ ಹಲವಾರು ವರ್ಷಗಳಿಂದ ಮಂಗಳ ಗ್ರಾಮೀಣ ಯುವಕ ಸಂಘ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಕ್ರೀಡಾಕೂಟಗಳು ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಾತಿ ಮತ ಭೇದವಿಲ್ಲದೆ ಪರಿಸರದ ಪ್ರತಿಯೊಬ್ಬರೂ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಣಾಜೆಯ ಸೀತಾರಾಮ ಗಟ್ಟಿ, ಮಹಾಬಲ ಗಟ್ಟಿ, ದಯಾನಂದ ಗಟ್ಟಿ, ಮಹಮ್ಮದ್ ಮನ್ಸೂರ್, ರಾಜೇಶ್ ಶೆಟ್ಟಿ, ಸುನೀಲ್ ಕುಮಾರ್ ಗಟ್ಟಿ, ಹಸನ್ ಕುಂಞ, ಅದ್ರಾಮ, ಹೆನ್ರಿ ಡಿ’ಸೋಜ, ಸುಧಾಕರ ಕೊಣಾಜೆ, ಅಬ್ಬಾಸ್, ಶೆರೀಫ್ ಕೋಡಿಜಾಲ್, ಚಂದ್ರಶೇಖರ ಪೂಜಾರಿ, ಸುಜಯ, ಉಮಾವತಿ, ಸುಜಾತ ಶೆಟ್ಟಿ, ಸುಚಿತ್ರಾ, ಗೀತಾ, ಮೀರಾ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಕೊಣಾಜೆ ಕಲ್ಲಿಮಾರ್ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ಯುವಕರು, ವಿದ್ಯಾರ್ಥಿಗಳು ತೊಡಗಿಸಿಕೊಂಡರು.


