UN NETWORKS
ಮಲಪ್ಪುರಂ: ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯ ಅರಬಿಯ್ಯಾದಲ್ಲಿ ವಿದ್ಯಾರ್ಜನೆಗೈಯ್ಯುತ್ತಿರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳ ಒಕ್ಕೂಟವಾದ ದಕ್ಷಿಣ ಕನ್ನಡ ಸ್ಟೂಡೆಂಟ್ಸ್ ಫೋರಂ(ಡಿ.ಕೆ.ಎಸ್.ಎಫ್) ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಮಖ್ದೂಮಿ ಅಮ್ಮೆಮ್ಮಾರ್, ಉಪಾಧ್ಯಕ್ಷರುಗಳಾಗಿ ಸಯ್ಯದ್ ಮುಹ್ಯುದ್ದೀನ್ ತಂಙಳ್ ಕೊಣಾಜೆ, ಮುಹಮ್ಮದ್ ಆಸಿಫ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ನಈಂ ಮುಕ್ವೆ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಸ್ಸಮದ್ ಆನೆಮಹಲ್, ಮುಹಮ್ಮದ್ ಸ್ವಾಬಿರ್ ಈಶ್ವರಮಂಗಳ, ವರ್ಕಿಂಗ್ ಕಾರ್ಯದರ್ಶಿಯಾಗಿ ಅಬ್ದುಲ ಮಜೀದ್ ಕಲಂದರಿಯಾ, ಕೋಶಾಧಿಕಾರಿಯಾಗಿ ಮುಹಮ್ಮದ್ ತ್ವಯ್ಯುಬ್ ಬೊಳ್ಳೂರ್, ಲೆಕ್ಕ ಪರಿಶೋಧಕರಾಗಿ ಅಲಿ ಹಸನ್ ಕುಕ್ಕಾಜೆ, ಸಿರಾಜ್ ಮಣಿಮಜಲು ಆಯ್ಕೆಗೊಂಡರು. ಅದೇ ರೀತಿ ಉಪಸಮಿತಿಗಳಾದ ಮೀಡಿಯಾವಿಂಗ್ ಗೆ ಲುಕ್ಮಾನುಲ್ ಹಕೀಂ ಕೊೈಲ ಮತ್ತು ಜಾಬಿರ್ ಕೊಳಂಬೆ, ಪಬ್ಲಿಷಿಂಗ್ ಬ್ಯೂರೋಗೆ ಮುಹಮ್ಮದ್ ಸ್ವಾಬಿರ್ ಮತ್ತು ಹಂಝ ತೋಡಾರು, ದವಾ ವಿಂಗ್ಗೆ ಸಫ್ವಾನ್ ಸುಂಕದಕಟ್ಟೆ ಮತ್ತು ಮುಹಮ್ಮದ್ ಹಸನ್ ಸಾಲೆತ್ತೂರು ಚೈಯರ್ಮೇನ್, ಕನ್ವೀನರುಗಳಾಗಿ ಆಯ್ಕೆಯಾದರು.
ಕಾರ್ಯಕ್ರಮವನ್ನು ಜಾಮಿಅಃ ಪ್ರೊಫೆಸರ್ ಶೈಖುನಾ ಸುಲೈಮಾನ್ ಫೈಝೀ ಚುಂಗತ್ತರ ಉದ್ಘಾಟಿಸಿದರು. ಶೈಖುನಾ ಹಂಝ ಫೈಝೀ ಹೈತಮೀ ಅಧ್ಯಕ್ಷತೆ ವಹಿಸಿದರು. ಶೈಖುನಾ ಲಿಯಾವುದ್ದೀನ್ ಫೈಝೀ, ಶೈಖುನಾ ಮುಹಮ್ಮದಲಿ ಶಿಹಾಬ್ ಫೈಝೀ ಕೂಮಣ್ಣ ಹಿತವಚನ ನೀಡಿದರು. ನೂರುಲ್ ಉಲಮಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಸೈದಲವೀ ಕೋ ತಂಙಳ್, ಪ್ರಧಾನ ಕಾರ್ಯದರ್ಶಿಯಾ ಉಬೈದ್ ಕಮಾಲಿ, ಕೋಶಾಧಿಕಾರಿ ಅಬ್ದುಲ್ಲಾ ಮಾಣಿಯೂರು ಶುಭಹಾರೈಸಿ ಮಾತನಾಡಿದರು.
ಅಬ್ದುಸ್ಸಮದ್ ಶನಿವಾರಸಂತೆ ಖಿರಾಅತ್ ಪಠಿಸಿದರು. ಅಹ್ಮದ್ ನಈಂ ಮುಕ್ವೆ ಸ್ವಾಗತಿಸಿ, ಅಬ್ದುಸ್ಸಮದ್ ಆನೆಮಹಲು ವಂದಿಸಿದರು.


