UN NETWORKS
ಮಲಪ್ಪುರಂ: ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯ ಅರಬಿಯ್ಯಾದಲ್ಲಿ ವಿದ್ಯಾರ್ಜನೆಗೈಯ್ಯುತ್ತಿರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳ ಒಕ್ಕೂಟವಾದ ದಕ್ಷಿಣ ಕನ್ನಡ ಸ್ಟೂಡೆಂಟ್ಸ್ ಫೋರಂ(ಡಿ.ಕೆ.ಎಸ್.ಎಫ್) ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಜಾಮಿಅಃ ಪ್ರೊಫೆಸರ್ ಶೈಖುನಾ ಸುಲೈಮಾನ್ ಫೈಝೀ ಚುಂಗತ್ತರ ಉದ್ಘಾಟಿಸಿದರು. ಶೈಖುನಾ ಹಂಝ ಫೈಝೀ ಹೈತಮೀ ಅಧ್ಯಕ್ಷತೆ ವಹಿಸಿದರು. ಶೈಖುನಾ ಲಿಯಾವುದ್ದೀನ್ ಫೈಝೀ, ಶೈಖುನಾ ಮುಹಮ್ಮದಲಿ ಶಿಹಾಬ್ ಫೈಝೀ ಕೂಮಣ್ಣ ಹಿತವಚನ ನೀಡಿದರು. ನೂರುಲ್ ಉಲಮಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಸೈದಲವೀ ಕೋ ತಂಙಳ್, ಪ್ರಧಾನ ಕಾರ್ಯದರ್ಶಿಯಾ ಉಬೈದ್ ಕಮಾಲಿ, ಕೋಶಾಧಿಕಾರಿ ಅಬ್ದುಲ್ಲಾ ಮಾಣಿಯೂರು ಶುಭಹಾರೈಸಿ ಮಾತನಾಡಿದರು.
ಅಬ್ದುಸ್ಸಮದ್ ಶನಿವಾರಸಂತೆ ಖಿರಾಅತ್ ಪಠಿಸಿದರು. ಅಹ್ಮದ್ ನಈಂ ಮುಕ್ವೆ ಸ್ವಾಗತಿಸಿ, ಅಬ್ದುಸ್ಸಮದ್ ಆನೆಮಹಲು ವಂದಿಸಿದರು.