Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ದೇರಳಕಟ್ಟೆ : ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ನ 15ನೇ ಶಾಖೆ ಉದ್ಘಾಟನೆ

UllalaVaniBy UllalaVaniAugust 3, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ದೇರಳಕಟ್ಟೆ: ಮಂಗಳೂರಿನ ಕುದ್ರೋಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ನ 15ನೇ ದೇರಳಕಟ್ಟೆ ಶಾಖೆ ದೇರಳಕಟ್ಟೆ ಜಂಕ್ಷನ್ ನ ಮೋರ್ ಸೂಪರ್ ಮಾರ್ಕೆಟ್ ಬಳಿ ಇರುವ ಸಿಟಿ ಸೆಂಟರ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

ದೇರಳಕಟ್ಟೆಯ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಅಧ್ಯಕ್ಷ ಯು.ಕೆ.ಮೋನು ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿ ದೇರಳಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹಿಂದೆ ಬಡವರಿಗೆ, ಹಣವಂತರಿಗೆ ಬ್ಯಾಂಕ್ ನ ಅವಶ್ಯಕತೆ ಇರಲಿಲ್ಲ. ಆದರೆ ಇಂದಿನ ಯುಗದಲ್ಲಿ ಬ್ಯಾಂಕ್ ಎಲ್ಲಾ ವರ್ಗದವರಿಗೆ ಅತೀ ಅವಶ್ಯಕ. ಆದರೆ ಸಾಲ ನೀಡುವಾಗ ಅವಶ್ಯಕತೆಗೆ ಅನುಗುಣವಾಗಿ ನೀಡಿ ಅದರ ಹಿನ್ನಲೆಯನ್ನು ಗಮನಿಸಿ ಸಾಲ ನೀಡಬೇಕಾಗಿದೆ. ಒಂದು ಹಂತದಲ್ಲಿ ಸರಿಯಾಗಿ ಸಾಲ ಪಾವತಿಯಾಗದ ಸಂದರ್ಭದಲ್ಲಿ ಚಕ್ರ ಬಡ್ಡಿ ಹಾಕದೆ ಬ್ಯಾಂಕ್‍ನ ಗ್ರಾಹಕರ ಹಿತ ಕಾಪಾಡುವ ಮನೋಭಾವ ಬ್ಯಾಂಕ್ ಆಡಳಿತ ಮಂಡಳಿಗೆ ಇರಬೇಕಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿದ ದೇರಳಕಟ್ಟೆ ಪಾನೀರಿನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ನ ಧರ್ಮಗುರು ರೆ.ಫಾ. ಡೆನಿಸ್ ಸುವಾರಿಸ್ ಮಾತನಾಡಿ ಸಮಾಜದ ಬೆಳವಣಿಗೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳೊಂದಿಗೆ ಕೋ ಅಪರೇಟಿವ್ ಬ್ಯಾಂಕ್ ಗಳು ಅಗತ್ಯ. ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಿನ ಜನರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಸಹಕಾರಿ ಬ್ಯಾಂಕ್ ಗಳು ಕಾರ್ಯಾಚರಿಸುತ್ತಿದೆ . ಇದರಿಂದ ಅಲ್ಲಿನ ಜನ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಸಣ್ಣ ಡೆಪಾಸಿಟ್ ಅನ್ನು ದೊಡ್ಡವರಿಗೆ ಮಾತ್ರ ಕಾಯದೆ ಸಣ್ಣ ಬಂಡವಾಳ ಹೂಡುವವರಿಗೆ ಆದ್ಯತೆ ನೀಡಬಹುದು. ಸರ್ವಧರ್ಮದ ಜನರ ಅನ್ಯೋನ್ಯತೆಯಿಂದ ಬಾಳುವ ದೇರಳಕಟ್ಟೆ ಪ್ರದೇಶದಲ್ಲಿ ಉತ್ತಮ ವ್ಯವಹಾರ ನಡೆಯುವುದರಲ್ಲಿ ಸಂದೇಹವಿಲ್ಲ ಎಂದರು. ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಮಾತನಾಡಿ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ವ್ಯತ್ಯಾಸ ಜನರಿಗೆ ಗೊತ್ತಿಲ್ಲ. ಸಮಾನಮನಸ್ಕರಿಂದ ಸ್ಥಾಪನೆಗೊಂಡ ಸಹಕಾರಿ ಸಂಘಗಳು ರಾಜ್ಯ ಸರಕಾರ ಮತ್ತು ರಿಸವ್ ್ ಬ್ಯಾಂಕ್ ಆಫ್ ಇಂಡಿಯಾ ದ ಇಲಾಖೆಗಳಿಂದ ನಿಯಂತ್ರಣಕ್ಕೆ ಒಳಪಟ್ಟ ವ್ಯವಸ್ಥೆಯಾಗಿದೆ. ಜಿಲ್ಲೆಯಾದ್ಯಂತ 840 ಸಹಕಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಗ್ರಾಮಾಂತರ ಭಾಗದಲ್ಲಿ ಡಿಸಿಸಿ ಸೇರಿದಂತೆ ಎಂಟು ಸಹಕಾರಿ ಸಂಘಗಳು ಕಾರ್ಯಾಚರಿಸುತ್ತಿದೆ.

ಸಹಕಾರ ಸಂಘ ಯಶಸ್ವಿಯಾಗಲು ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಂಬಿಕೆ ಮುಖ್ಯವಾಗಿದೆ. ಈವರೆಗೆ ಲೋಪದೋಷಗಳನ್ನು ಹೊಂದದೆ ಶ್ರೀ ಗೋಕರ್ಣನಾಥ ಸಹಕಾರಿ ಸಂಘ ಕಾರ್ಯಾಚರಿಸುತ್ತಿದೆ. ಹೊಸ ಚಿಂತನೆಗಳನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸದೇ ಇದ್ದಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕುಗಳಿಗೆ ಸ್ಥಾನಮಾನ ಸಿಗಲು ಅಸಾಧ್ಯ. ಇಂತಹ ಚಿಂತನೆಗಳನ್ನು ನಿರ್ದೇಶಕರು ಹೊಂದುವುದರ ಜೊತೆಗೆ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಿದೆ. ದೇರಳಕಟ್ಟೆ ಎಂದರೆ ಹಲವು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಪ್ರದೇಶ. ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಾರೆ. ಅವರ ಕಾಲಬುಡಕ್ಕೆ ಸೇವೆ ಒದಗಿಸುವ ಪ್ರಯತ್ನ ಶಾಖೆಯಿಂದ ಆರಂಭಿಸಬಹುದು. ವಿದ್ಯಾರ್ಥಿಗಳ ಹೆತ್ತವರ ಜೊತೆಗೆ ಸಂಪರ್ಕಿಸಿ ವಿದ್ಯಾರ್ಥಿಗಳ ಹಾಸ್ಟೆಲ್, ಶಿಕ್ಷಣ ಖರ್ಚು ಕಳುಹಿಸುವುದನ್ನು ತಮ್ಮ ಬ್ಯಾಂಕಿನಲ್ಲಿ ಖಾತೆ ತೆರೆದು ಆರಂಭಿಸಿ, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡಬಹುದು. ಈ ಮೂಲಕ ಖಾತೆದಾರರು ಹೆಚ್ಚಾಗುತ್ತಾರೆ ಎಂದರು.

ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗೋಪಾಲಕೃಷ್ಣ ಕೋಟ್ಯಾನ್ ಮಾತನಾಡಿ ಬ್ಯಾಂಕಿಂಗ್ ಸೇವೆ ಇಲ್ಲದ ಸಮಯದಲ್ಲಿ ಬಡ ಹಾಗೂ ಕೆಳ ವರ್ಗದ ಜನರಿಗೆ ಅನುಕೂಲವಾಗುವಂತೆ ಅವರಿಗೆ ಸೇವೆಯನ್ನು ಆರಂಭಿಸಿರುವ ಗೋಕರ್ಣನಾಥ ಬ್ಯಾಂಕ್ ಇದೀಗ 93 ವರ್ಷಗಳನ್ನು ಪೂರೈಸಿದೆ. ಪ್ರತಿ ವರ್ಷವೂ ಹಂತಹಂತವಾಗಿ ಬೆಳೆದು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಆಧುನಿಕ ವ್ಯವಸ್ಥೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಸೇಫ್ ಡೆಪಾಸಿಟ್ ಲಾಕರ್, ಮೊಬೈಲ್ ಬ್ಯಾಂಕಿಂಗ್, ಎನ್‍ಟಿಎಫ್‍ಎಸ್ ಇನ್ನಿತರ ಸೇವೆಗಳನ್ನು ಹೊಂದಿದೆ. ಎಟಿಎಂ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಎಲ್ಲಾ ರೀತಿಯಲ್ಲಿ ಸ್ಪಂಧಿಸುವ ಸಿಬ್ಬಂದಿ ವರ್ಗವನ್ನು ಬ್ಯಾಂಕ್ ಹೊಂದಿದೆ . ಜನ ಖಾತೆಗಳನ್ನು ತೆರೆದು ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವಂತೆ ಮಾಡಬೇಕಿದೆ ಎಂದರು.

ಬ್ಯಾಂಕ್ ನ ಗಣಕ ಯಂತ್ರಕ್ಕೆ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಚಾಲನೆ ನೀಡಿದರು. ದೇರಳಕಟ್ಟೆ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಗ್ರಾಮಚಾವಡಿ ಇಲ್ಲಿನ ಅಧ್ಯಕ್ಷ ಗಂಗಾಧರ ಪೂಜಾರಿ, ಸಿಟಿ ಸೆಂಟರ್ ಕಾಂಪ್ಲೆಕ್ಸ್‍ನ ಮಾಲಕ ಟಿ.ಎಂ. ಸುಹೇಬï ಕಾಸರಗೋಡು, ನಿರ್ದೇಶಕರಾದ ಸಂದ್ಯಾ ಕೆ. ಬಂಗೇರ, ಹೇಮಾ ದಾಮೋದರ ನಿಸರ್ಗ, ರಮಣಿ ಉಮೇಶ್ ಕೆ., ಲತಾ ಯು.ಎಸ್., ಉದಯ ಕುಮಾರ್, ಗಣೇಶ್ ಪೂಜಾರಿ, ಕೆ.ಗೋಪಾಲ ಅಂಚನ್, ಮಹಾಬಲ ಬಂಗೇರ ಎನ್., ರಮಾನಾಥ ಕೋಟೆಕಾರು, ಎಸ್,ಜಿ, ಜೀವನ್‍ದಾಸ್, ರಾಘವ ಸನಿಲ್, ಮಿತ್ರ ಹೆರಾಜೆ, ಜಯರಾಮ ಕಾರಂದೂರು, ಬಿ. ಭಾಸ್ಕರ ಉಪಸ್ಥಿತರಿದ್ದರು.

ಬ್ಯಾಂಕ್‍ನ ಉಪಾಧ್ಯಕ್ಷ ರಾಜೇಶ್ ಕುಮಾರ್ ಜಿ. ಸುವರ್ಣ ಸ್ವಾಗತಿಸಿದರು. ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಭರತ್ ಭೂಷಣ್ ಸುವರ್ಣ ಪ್ರಸ್ತಾವನೆಗೈದರು. ಸಿಬಂದಿ ಚಂದ್ರಶೇಖರ್ ಪುಂಜಂಗೋಡ್ ಕಾರ್ಯಕ್ರಮ ನಿರ್ವಹಿಸಿದರು. ಶಾಖಾಧಿಕಾರಿ ಜಯರಾಮ ಪೂಜಾರಿ ವಂದಿಸಿದರು.

 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026

ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

March 17, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

By UllalaVaniMarch 17, 20260

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಆದೇಶದಂತೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರ, ಪ್ರಾಂಶುಪಾಲರ ಸಂಘ ನಿರ್ಧಾರ

March 17, 2026

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026
1 2 3 … 1,836 Next
Automatic YouTube Gallery

ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ

ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
Now Playing
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ...
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
Now Playing
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ...
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ಜೈಲಿಗಟ್ಟಬೇಕು

ಕುತ್ತಾರಿನಲ್ಲಿ ಡಿವೈಎಫ್‌ಐ ಬಹಿರಂಗ ಸಭೆಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಕಿಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d