UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು ಬಳಿ ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಯುವತಿ ರೈಲಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ಸಂಭವಿಸಿದೆ.
ಕಂಕನಾಡಿ ನಿವಾಸಿ ಮಹಮ್ಮದ್ ಕುಂಞಿ ಎಂಬವರ ಪುತ್ರಿ ತಬಸ್ಸುಂ(23) ಎನ್ನುವವರು ಮೃತ ದುರ್ದೈವಿ. ವಿವಾಹಿತೆಯಾಗಿರುವ ಅವರು ಫಾರ್ಮಸಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.


