UN NETWORKS
ಮುಡಿಪು: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಕ್ರಾಸ್ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ, ಆತನಿಂದ 1 ಕೆ.ಜಿ.300 ಗ್ರಾಂ ಗಾಂಜಾ ಹಾಗೂ 22.030 ರೂ ನಗದು, ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಮಹಮ್ಮದ್ ಅಜೀಜ್ ಎಂದು ಗುರುತಿಸಲಾಗಿದೆ. ಆರೋಪಿಯು ಕೋಲಾರದಿಂದ ಗಾಂಜಾವನ್ನು ತಂದು ನರಿಂಗಾನ ಬಳಿಯ ಕೊಲ್ಲರಕೋಡಿ ಬಳಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ದ ಈಗಾಗಲೇ ಮಂಗಳೂರು ನಗರದಲ್ಲಿ 4 ಗಾಂಜಾ ಮಾರಾಟ ಪ್ರಕರಣವು ದಾಖಲಾಗಿತ್ತು. ಅಲ್ಲದೆ ಈತನ ಜೊತೆಗಿದ್ದ ಇತರ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


