UN NETWORKS
ಕೊಣಾಜೆ: ಕೊಣಾಜೆ ಮರಕಳಬೆಟ್ಟುವಿನ ಬಡ ಕೃಷಿಕರ ಗದ್ದೆಗಳನ್ನು ದತ್ತು ಪಡೆದ ಮಂಗಳೂರು ರಥಬೀದಿಯ ಡಾ|.ಪಿ.ದಯಾನಂದಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಭಾನುವಾರ ನಾಟಿ ಕಾರ್ಯ ನಡೆಸಿದರು.
ನಾಲ್ಕು ಎಕರೆಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸುರಿಯುತ್ತಿರುವ ಮಳೆಯ ನಡುವೆಯೂ ನಾಟಿ ಕಾರ್ಯ ನಡೆಸಿದರು. ಕಳೆದ ವರ್ಷವೂ ಕೊಣಾಜೆ ಗ್ರಾಮದ ಎರಡನೇ ವಾರ್ಡನ್ನು ದತ್ತು ಪಡೆದ ಇದೇ ಕಾಲೇಜಿನ ತಂಡ ಹಡಿಲು ಬಿದ್ದ ಗದ್ದೆಯಲ್ಲಿ ಉಳುಮೆ ನಡೆಸಿ ಕೃಷಿ ಕಾರ್ಯವನ್ನು ಪೂರೈಸಿ, ತಾವೇ ಬೆಳೆದ ಅಕ್ಕಿಯನ್ನು ಕಾಲೇಜಿನಲ್ಲಿ ಬಿಸಿಯೂಟ ಆರಂಭಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಮತ್ತು ಡಾ| ನವೀನ್ .ಎನ್ ಕೊಣಾಜೆ ವಿದ್ಯಾರ್ಥಿಗಳ ಜತೆಗೆ ಭಾಗವಹಿಸಿದ್ದರು.


