ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಮೋದಿ ಸರಕಾರದ ಭೂಸ್ವಾಧೀನ ಸುಗ್ರೀವಾಜ್ಞೆ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ತೊಕ್ಕೊಟ್ಟು ಕ್ಲಿಕ್ ಸಭಾ ಭವನದಲ್ಲಿ ಜರಗಿದ ಉಳ್ಳಾಲ ಪುರಸಭೆ ವ್ಯಾಪ್ತಿಯ ಮನೆ ನಿವೇಶನ ರಹಿತರ ಹೋರಾಟ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
1894ರ ಬ್ರಿಟೀಷ್ ಕಾಲದ ಭೂಸ್ವಾಧೀನ ಕಾಯಿದೆಯನ್ನು ಅಖಿಲ ಭಾರತ ಮಟ್ಟದಲ್ಲಿ ರೈತ ಸಂಘ ಮತ್ತು ಎಡಪಕ್ಷಗಳ ತೀವ್ರತರವಾದ ಒತ್ತಡದಿಂದ 2013ರ ಬ್ರಿಟೀಷ್ ಕಾಲದ ಭೂಸ್ವಾಧೀನ ಕಾಯಿದೆಯನ್ನು ಅಖಿಲ ಭಾರತ ಮಟ್ಟದಲ್ಲಿ ರೈತ ಸಂಘ ಮತ್ತು ಎಡಪಕ್ಷಗಳ ತೀವ್ರತರವಾದ ಒತ್ತಡದಿಂದ 2013ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಯುಪಿಎ 2ನೇ ಸರಕಾರ ಜಾರಿಗೆ ತಂದಿತ್ತು. ಅಂದು ಅದನ್ನು ವಿರೋಧಪಕ್ಷ ಬಿಜೆಪಿ ಕೂಡಾ ಬೆಂಬಲಿಸಿತ್ತು. ಆದರೆ ಇದೀಗ ರೈತರ ಪಾಲಿಗೆ ದ್ರೋಹ ಬಗೆದ ಕೇಂದ್ರ ಸರಕಾರದ ವಿರುದ್ಧ ರಾಜಧಾನಿಯಲ್ಲಿ ಲಕ್ಷಾಂತರ ಜನರು ಸೇರಿ ಪ್ರತಿಭಟಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಉಳ್ಳಾಲ ಪುರಸಭೆ ಸಮಿತಿ ಅಧ್ಯಕ್ಷ ಪದ್ಮಾವತಿ.ಯಸ್ ಶೆಟ್ಟಿ ವಹಿಸಿದ್ದರು. ನಿವೇಶನ ರಹಿತರ ಉಳ್ಳಾಲ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಮುಖಂಡರುಗಳಾದ ವಿಲಾಸಿನಿ ತೊಕ್ಕೊಟ್ಟು, ರೋಹಿದಾಸ್ ಭಟ್ನಗರ, ಆಯಿಷಾ ಉಳ್ಳಾಲ ಉಪಸ್ಥಿತರಿದ್ದರು. ವಿಲಾಸಿನಿ ತೊಕ್ಕೊಟ್ಟು ವಂದಿಸಿದರು.







