Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಆಶ್ರಮ ವಾಸಿಗಳ ಜತೆಗೆ ಹಬ್ಬ ಆಚರಿಸಿದ ಸಚಿವ ಖಾದರ್

UllalaVaniBy UllalaVaniJune 15, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ರಾಜ್ಯದ ನೂತನ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮೇಶ್ವರ ನೆಹರೂನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ವೃದ್ಧರಿಗೆ ಬಿರಿಯಾನಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ನೆಹರುನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ಅನಥಾಲಯದ ವಾಸಿಗಳಿಗೆ ಹಬ್ಬದ ಪ್ರಯುಕ್ತ ವಿತರಿಸಲಾಗುವ ಹಬ್ಬದೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಲ್ಲಿ ಮಾತನಾಡಿ ತ್ಯಾಗ, ಪ್ರೀತಿ ಸಹನೆಯ ಧ್ಯೋತಕವಾಗಿರುವ ಈದ್ ಉಲ್ ಫಿತ್ರ್ ಹಬ್ಬವನ್ನು ಇಂತಹ ಅನಾಥಾಲಯದಲ್ಲಿ ಆಚರಿಸುವ ಕಾರ್ಯ ಮಹತ್ವದ್ದಾಗಿದೆ. ಈ ಮೂಲಕ ಹಬ್ಬದ ಸಂದೇಶವನ್ನು ಉತ್ತಮವಾಗಿ ಸಮಾಜಕ್ಕೆ ಮನವರಿಕೆ ಮಾಡಬಹುದು. ಕಳೆದ ಮೂರು ವರ್ಷಗಳಿಂದ ಇಂತಹ ಮಹತ್ಕಾರ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೈಜೋಡಿಸಿರುವ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಕಾರ್ಯ ಶ್ಲಾಘನೀಯ. ಎಲ್ಲರೂ ಚಿಂತೆ ಹಾಗೂ ಕಷ್ಟದಿಂದಲೇ ಬಾಳುವವರು. ಆಶ್ರಮ ವಾಸಿಗಳು ಎಂದಿಗೂ ಅನಾಥರಲ್ಲ, ಅಲ್ಲದೆ ಕಷ್ಟಗಳನ್ನು ಚಿಂತಿಸದೆ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಅನಾರೋಗ್ಯದಿಂದ ಇರುವವರು ಗುಣಮುಖರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಮತ್ತೊಮ್ಮೆ ಬಾಳುವಂತವರಾಗಿ ಎಂದ ಅವರು ಪಶ್ಚಿಮ್ ರಿಹ್ಯಾಬ್ ಸೆಂಟರ್ ಸ್ಥಾಪಕರ ಕಾರ್ಯ ಮಾನವೀಯತೆಯ ಕಾರ್ಯ ಆಗಿದೆ ಎಂದರು.

ಟ್ಯಾಲೆಂಟ್ ರಿಸರ್ಚ್ ಪೌಂಡೇಷನ್‍ನ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ ಜನರ ಅಳಲು ಸ್ವೀಕರಿಸುವ , ತಕ್ಷಣವೇ ಸಮಸ್ಯೆಗಳಿಗೆ ಸ್ಪಂಧಿಸುವಂತಹ ಸಚಿವರಂತೆಯೇ ದೇಶಾದ್ಯಂತ ಮಂತ್ರಿಗಳಿದ್ದರೆ ಭಾರತ ಸೂಪರ್ ಪವರ್ ಆಗುವುದರಲ್ಲಿ ಸಂಶಯವಿಲ್ಲ. ಇಸ್ಲಾಂ ಧರ್ಮ ಪ್ರಕಾರ ಧರ್ಮದ ದಾರಿಯಲ್ಲಿ ಉತ್ತಮ ಕೆಲಸ ಮಾಡುವವರು ಮುಜಾಹಿದ್ ಗಳಾಗಿದ್ದಾರೆ. ಅದೇ ದಾರಿಯಲ್ಲಿ ಸಚಿವರಿದ್ದಾರೆ. ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಕೈಗೊಂಡಂತಹ ಕಾರ್ಯದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಸರಕಾರದ ವತಿಯಿಂದ ಏಕಾಂಗಿಯಾಗಿ ಸ್ಥಾಪಿಸಿ 90 ಜನ ವೃದ್ಧರ ಸೇವೆ ನಡೆಸುತ್ತಿರುವ ಪಶ್ಚಿಮ್ ರಿಹ್ಯಾಬ್ ಸೆಂಟರಿನ ಸ್ಥಾಪಕ ರೋಹಿತ್ ಅವರಿಗೆ ಸರಕಾರದಿಂದ ಸಹಕರಿಸಿ ಜಾಗದ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸಚಿವರಲ್ಲಿ ವಿನಂತಿಸಿಕೊಂಡರು.

ದೇರಳಕಟ್ಟೆ ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಅನಾಥರ ಕಾರ್ಯ ದೇವರ ಕಾರ್ಯವೆಂದು ತಿಳಿದುಕೊಂಡು ದಿನದ 24 ಗಂಟೆಗಳ ಕಾಲವೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೆಂಟರಿನ ಅಧ್ಯಕ್ಷರ ಹಾಗೂ ಸಿಬ್ಬಂದಿ ಕಾರ್ಯವನ್ನು ಪುರಸ್ಕರಿಸಬೇಕಿದೆ. ಯುವಸಮುದಾಯ ಇಂತಹ ಸೇವೆಯಲ್ಲಿ ತೊಡಗಿಸಿಕೊಂಡಾಗ ದೇಶದ ಅಭಿವೃದ್ಧಿಯೂ ಸಾಧ್ಯ ಎಂದರು.
ಪಶ್ಚಿಮ್ ರಿಹ್ಯಾಬ್ ಸೆಂಟರ್ ನ ಸ್ಥಾಪಕ ರೋಹಿತ್ ಸಾಲ್ಕ್‍ಟಸ್ ಮಾತನಾಡಿ ಹೆತ್ತವರನ್ನು ನೋಡಿಕೊಳ್ಳುವ ದಾರಿಯಲ್ಲಿ ಆರಂಭವಾದ ಸೆಂಟರ್ ಇದೀಗ 90 ಜನರನ್ನು ಸಲಹುವಂತಹ ಕೇಂದ್ರವಾಗಿ ಬೆಳೆದಿದೆ. ಸರಕಾರದಿಂದ ಸಹಕಾರ ದೊರೆತಲ್ಲಿ ಇನ್ನಷ್ಟು ಅನಾಥರನ್ನು ಸಲಹಬಹುದು ಅಲ್ಲದೆ ಇದೀಗ ಸಲಹುತ್ತಿರುವವರನ್ನು ಉತ್ತಮವಾಗಿ ಸಲಹಲು ಸಾಧ್ಯ. ಮುಡಿಪು ತಮ್ಮದೇ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅದಕ್ಕೆ ಎಲ್ಲಾ ದಾನಿಗಳ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಸ್ಥಾಪಕ ಉಪಾಧ್ಯಕ್ಷ ಉಮ್ಮರ್ ಫಾರುಕ್ ಪಟ್ಲ, ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಸಮಾಜ ಸೇವಕರಾದ ನವಾಜ್ , ಸುರೇಶ್ ಭಟ್ನಗರ, ಮೂಡಿಗೆರೆಯ ಪೊಲೀಸ್ ಅಧಿಕಾರಿ ಕೆ.ಎಂ ಶರೀಫ್ , ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ತೊಕ್ಕೊಟ್ಟು ಘಟಕದ ಅಧ್ಯಕ್ಷ ತೌಸೀಫ್ ಯು.ಟಿ, ಫೌಂಡೇಷನ್ನಿನ ಸದಸ್ಯರುಗಳಾದ ಸಂಶುದ್ದೀನ್, ಸಿರಾಜ್ ಅಭಯ, ಜಲೀಲ್ ಜೆ.ಜೆ, ನಿಯಾಝ್ ಅಹಮದ್, ಸುಲೈಮಾನ್ ಯು.ಬಿ, ಬದ್ರುದ್ದೀನ್, ಶರೀಫ್ ಪಟ್ಲ , ಮುಸ್ತಾಫ ರಿಯಲ್ ಟೆಕ್ ಉಪಸ್ಥಿತರಿದ್ದರು.

ಈದ್ ಸಂದೇಶ ಝಾಕಿರ್ ಇಕ್ಲಾಸ್ ನೀಡಿದರು. ಶಕೀಲ್ ತುಂಬೇಜಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರವಣ ದೋಷವಿದ್ದ ವೃದ್ಧೆಯೊಬ್ಬರಿಗೆ ಶ್ರವಣ ಕಿಟ್ ಅನ್ನು ಅಬ್ದುಲ್ ರವೂಫ್ ಪುತ್ತಿಗೆ ವಿತರಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹೆಲ್ಪ್ ಪ್ರೆಂಡ್ಸ್ ಹಿದಾಯತ್ ನಗರ ವತಿಯಿಂದ ಇಫ್ತಾರ್ ಸಂಗಮ

March 17, 2026

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

March 16, 2026

ಎಸ್ಸಸ್ಸಫ್ ಬಾಳೆಪುಣಿ ಶಾಖಾ ವತಿಯಿಂದ ಮಾಸಿಕ ಬುರ್ಧಾ ಮಜ್ಲಿಸ್ ಹಾಗೂ ಬ್ರಹತ್ ಇಫ್ತಾರ್ ಕೂಟ

March 16, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಹೆಲ್ಪ್ ಪ್ರೆಂಡ್ಸ್ ಹಿದಾಯತ್ ನಗರ ವತಿಯಿಂದ ಇಫ್ತಾರ್ ಸಂಗಮ

By UllalaVaniMarch 17, 20260

ಉಳ್ಳಾಲ:ಕೋಟೆಕಾರ್ ಹೆಲ್ಪ್ ಪ್ರೆಂಡ್ಸ್ ಹಿದಾಯತ್ ನಗರ ಇದರ ವತಿಯಿಂದ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇದರ ವಠಾರದಲ್ಲಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಆರೋಪಗಳಿಗೆ ಸಾಕ್ಷಿಗಳಿಲ್ಲ; ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

March 17, 2026

ಬಾವಿಗೆ ಬಿದ್ದ ಎರಡು ವರ್ಷದ ಮಗು; ಅದೃಷ್ಟವಶಾತ್‌ ಪಾರು

March 17, 2026

ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲು

March 17, 2026
1 2 3 … 1,835 Next
Automatic YouTube Gallery

ಕೊಣಾಜೆ; ಪ್ಲಾಸ್ಟಿಕ್‌ಗೆ ಹಾಕಿದ ಬೆಂ*ಕಿ ಒಣಹುಲ್ಲಿಗೆ ತಾಗಿ ಧಗಧಗನೇ ಹೊತ್ತಿ ಉ#ರಿದ ಹುಲ್ಲು..!

ಒಣಹುಲ್ಲಿಗೆ ಬೆಂಕಿ ತಗುಲಿ ರಾಜ್ಯ ಹೆ. ರಸ್ತೆ ಬದಿಗೆ ವ್ಯಾಪಿಸಿದ ಬೆಂ#ಕಿ; ಪ್ಲಾಸ್ಟಿಕ್‌ಗೆ ಹಾಕಿದ ಬೆಂ#ಕಿ ವ್ಯಾಪಿಸಿರುವ ಶಂಕೆ ವ್ಯಕ್ತ

ಕೊಣಾಜೆ ಮಂಗಳಗoಗೋತ್ರಿಯ ಕುಲಸಚಿವರ ಬಂಗಲೆ ಮುಂಭಾಗ ಘಟನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆ; ಪ್ಲಾಸ್ಟಿಕ್‌ಗೆ ಹಾಕಿದ ಬೆಂ*ಕಿ ಒಣಹುಲ್ಲಿಗೆ ತಾಗಿ ಧಗಧಗನೇ ಹೊತ್ತಿ ಉ#ರಿದ ಹುಲ್ಲು..!
Now Playing
ಕೊಣಾಜೆ; ಪ್ಲಾಸ್ಟಿಕ್‌ಗೆ ಹಾಕಿದ ಬೆಂ*ಕಿ ಒಣಹುಲ್ಲಿಗೆ ತಾಗಿ ಧಗಧಗನೇ ಹೊತ್ತಿ ಉ#ರಿದ ಹುಲ್ಲು..!
ಒಣಹುಲ್ಲಿಗೆ ಬೆಂಕಿ ತಗುಲಿ ರಾಜ್ಯ ಹೆ. ರಸ್ತೆ ಬದಿಗೆ ವ್ಯಾಪಿಸಿದ ಬೆಂ#ಕಿ; ...
ಒಣಹುಲ್ಲಿಗೆ ಬೆಂಕಿ ತಗುಲಿ ರಾಜ್ಯ ಹೆ. ರಸ್ತೆ ಬದಿಗೆ ವ್ಯಾಪಿಸಿದ ಬೆಂ#ಕಿ; ಪ್ಲಾಸ್ಟಿಕ್‌ಗೆ ಹಾಕಿದ ಬೆಂ#ಕಿ ವ್ಯಾಪಿಸಿರುವ ಶಂಕೆ ವ್ಯಕ್ತ

ಕೊಣಾಜೆ ಮಂಗಳಗoಗೋತ್ರಿಯ ಕುಲಸಚಿವರ ಬಂಗಲೆ ಮುಂಭಾಗ ಘಟನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸದನದಲ್ಲಿ ಗಮನಸೆಳೆದ ಶಾಸಕರುಗಳ ಬ್ಯಾನರ್‌ಗಳ ವಿಚಾರ
Now Playing
ಸದನದಲ್ಲಿ ಗಮನಸೆಳೆದ ಶಾಸಕರುಗಳ ಬ್ಯಾನರ್‌ಗಳ ವಿಚಾರ
ಫ್ಲೆಕ್ಸ್, ಬ್ಯಾನರ್‌ಗಳಿಂದಾಗುವ ಅವಘಡಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಜಾಹೀರಾತುಗಳ ...
ಫ್ಲೆಕ್ಸ್, ಬ್ಯಾನರ್‌ಗಳಿಂದಾಗುವ ಅವಘಡಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ

ಜಾಹೀರಾತುಗಳ ಬಗ್ಗೆ ಸರಕಾರದ ನಿಲುವೇನು..?
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d