UN NETWORKS
ಮುಂಬಯಿ: ಕಾಸರಗೋಡುವಿನ ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಸಂಸ್ಥೆಯ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್ ದಲ್ಲಿ ಇತ್ತೀಚೆಗೆ ನಡೆಯಿತು.
ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ನೇತ್ರತ್ವ ವಹಿಸಿ ಮಾತನಾಡಿ, ಕಾಸರಗೋಡುನಲ್ಲಿ ಕಾರ್ಯಾಚರಿಸುತ್ತಿರುವ ಮಳ್ ಹರ್ ವಿದ್ಯಾ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಇತರ ರಾಜ್ಯ ಮತ್ತು ವಿದೇಶಿಯರ ಸಹಕಾರದಿಂದಾಗಿದೆ. ವಿಶೇಷವಾಗಿ ಮುಂಬಯಿಲ್ಲಿ ನೂತನ ಶಾಖೆ ಪ್ರಾರಂಭಿಸಿ ಸಂಸ್ಥೆಗೆ ಪ್ರಚಾರದ ಜೋತೆಗೆ ಸಹಕಾರವನ್ನು ನೀಡಿದ್ದಿರಿ ಮುಂಬಯಿ ಘಟಕಕ್ಕೆ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತಿದೆನೆ ಎಂದು ಹೇಳಿದರು.
ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಪ್ರಭಾಷಣ ಗೈದರು. ಮಾಸ್ಟರ್ ಶಿಹಾನ್ ಉಳ್ಳಾಲ, ಹಿಲಾಲ್ ಬಶೀರ್, ಹಸನ್ ಮುಸ್ಲಿಯಾರ್ ಮುಂಬ್ರ, ಮುಂಬಯಿ ಘಟಕ ಅಧ್ಯಕ್ಷ ಸತ್ತಾರ್ ಬದ್ರಿಯ, ಉಪಾಧ್ಯಕ್ಷ ಮುಸ್ತಫಾ ಕುರ್ಳ, ಕಾರ್ಯದರ್ಶಿ ಮುಝ್ಮಿಲ್, ಕೋಶಾಧಿಕಾರಿ ಅಶ್ರಫ್ ಬೊಳ್ಮಾರ್, ಸದಸ್ಯರಾದ ಇಲ್ಯಾಸ್ ತೌಡುಗೋಳಿ, ಅಝೀಝ್ ಕಿನ್ಯ, ಮುಂತಾದವರು ಭಾಗವಹಿಸಲಿದ ಸ್ಥಳೀಯ ಖತೀಬ್ ಇಸ್ಮಾಯಿಲ್ ಅಂಜಾದಿ ಸ್ವಾಗತಿಸಿದರು.ಮುಂಬಯಿ ಘಟಕ ಮ್ಯಾನೇಜರ್ ಸಿದ್ದೀಕ್ ಮುಸ್ಲಿಯರ್ ಮೌಲಾನ ವಂದಿಸಿದರು.
ಈ ಸಂದರ್ಭದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಮತ್ತು ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಮುಂಬಯಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.


