UN NETWORKS
ಕೊಣಾಜೆ: ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳಿಗೂ ಸಮಾನ ವೇತನ(ಯುಜಿಸಿ ವೇತನ ನೀಡುವಂತೆ ಹಾಗೂ 2004ರ ನಂತರ ನೇಮಕಗೊಂಡ ಉದ್ಯೋಗಿಗಳಿಗೆ ಹೊಸ ಪೆನ್ಷನ್ ಸ್ಕೀಮ್ ಒದಗಿಸಿಕೊಡುವಂತೆ ಆಗ್ರಹಿಸಿ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ಬುಧವಾರ ವಿವಿ ಕುಲಪತಿಯವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿದರು.
ದಿ ನೇಷನಲ್ ಎಕ್ಸಿಕ್ಯೂಟಿವ್ ಮೀಟಿಂಗ್ ಮತ್ತು ಗೋಲ್ಡನ್ ಜುಬ್ಲಿ ಸೆಲೆಬ್ರೇಷನ್ ಆಫ್ ಆಲ್ ಇಂಡಿಯಾ ಯುನಿವರ್ಸಿಟಿ ಎಂಪ್ಲಾಯಿಸ್ ಕಾನ್ಪೆಡರೇಶನ್ ಸಭೆಯಲ್ಲಿ ಮಾ.21 ನ್ನು ಬೇಡಿಕೆ ದಿನವನ್ನಾಗಿ ಪರಿಗಣಿಸಿ ವಿವಿಯ ಶಿಕ್ಷಕೇತರ ಸಿಬ್ಬಂದಿಗಳಿಗೆ ಸಮಾನವೇತನ ಹಾಗೂ ಪೆನ್ಷನ್ ಸ್ಕೀಮ್ ಬಗ್ಗೆ ಆಯಾ ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸುವುದರ ಮೂಲಕ ಪ್ರಧಾನಮಂತ್ರಿಯವರಿಗೆ ತಲುಪಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು.
ಈ ನಿರ್ಣಯದಂತೆ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ವಿಜ್ಞಾನ ಸಂಕೀರ್ಣದಿಂದ ಮೆರವಣಿಗೆ ನಡೆಸಿ ಆಡಳಿತ ಕಚೇರಿಯಲ್ಲಿ ಒಟ್ಟು ಸೇರಿ ಕುಲಪತಿಯವರ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ವಿವಿ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಕಮಲಾಕ್ಷಿ ಪಿ.ಶೆಟ್ಟಿ, ಉಪಾಧ್ಯಕ್ಷರಾದ ರವಿಪ್ರಕಾಶ್, ಕಾರ್ಯದರ್ಶಿ ತಜ್ನೀಜ್ ಬಾನು, ಕೋಶಾಧಿಕಾರಿ ಸುಮಂಗಲಿ, ಜೊತೆ ಕೋಶಾಧಿಕಾರಿ ಹರೀಶ್ ಪೂಜಾರಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


