UN NETWORKS
ಕೊಣಾಜೆ: ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳಿಗೂ ಸಮಾನ ವೇತನ(ಯುಜಿಸಿ ವೇತನ ನೀಡುವಂತೆ ಹಾಗೂ 2004ರ ನಂತರ ನೇಮಕಗೊಂಡ ಉದ್ಯೋಗಿಗಳಿಗೆ ಹೊಸ ಪೆನ್ಷನ್ ಸ್ಕೀಮ್ ಒದಗಿಸಿಕೊಡುವಂತೆ ಆಗ್ರಹಿಸಿ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ಬುಧವಾರ ವಿವಿ ಕುಲಪತಿಯವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿದರು.
ಈ ನಿರ್ಣಯದಂತೆ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ವಿಜ್ಞಾನ ಸಂಕೀರ್ಣದಿಂದ ಮೆರವಣಿಗೆ ನಡೆಸಿ ಆಡಳಿತ ಕಚೇರಿಯಲ್ಲಿ ಒಟ್ಟು ಸೇರಿ ಕುಲಪತಿಯವರ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಕಮಲಾಕ್ಷಿ ಪಿ.ಶೆಟ್ಟಿ, ಉಪಾಧ್ಯಕ್ಷರಾದ ರವಿಪ್ರಕಾಶ್, ಕಾರ್ಯದರ್ಶಿ ತಜ್‍ನೀಜ್ ಬಾನು, ಕೋಶಾಧಿಕಾರಿ ಸುಮಂಗಲಿ, ಜೊತೆ ಕೋಶಾಧಿಕಾರಿ ಹರೀಶ್ ಪೂಜಾರಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.