UN NETWORKS
ದೇರಳಕಟ್ಟೆ: ನಿಟ್ಟೆ ಔಷಧೀಯ ಮಹಾವಿದ್ಯಾಲಯದಲ್ಲಿ ಕೆರಿಯರ್ ಅಡ್ವಾಂಸ್ ಮೆಂಟ್ ಪ್ರೊಫೆಷನಲ್ ಡೆವಲಪ್ಮೆಂಟ್ ಆಂಡ್ ಪರ್ಸನಲ್ ಎಕ್ಸ್ಲೆಂಸ್ ಒಂದು ದಿನದ ವಿಚಾರ ಸಂಕೀರ್ಣ ನಡೆಯಿತು.
ನಿಟ್ಟೆ ವಾಸ್ತುಶಿಲ್ಪಿ ವಿಭಾಗದ ಮುಖ್ಯಸ್ಥ ವಿನೋದ್ ಅರನ್ಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎಮ್.ಎಸ್. ಮೂಡಿತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಶಾಸ್ತ್ರಿ, ಉಪಪ್ರಾಂಶುಪಾಲ ನಾರಾಯಣ ಚಾರ್ಯುಲು, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಧನೇಶ್ ಕುಮಾರ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಘನಾಥ್ ರಾವ್, ಶ್ರೀಧರ್ ಡಿ., ಎಲ್.ಎಸ್. ಗಣೇಶ್ ಭಾಗವಹಿಸಿದ್ದರು. ಸಹ ಪ್ರಾಧ್ಯಾಪಕ ವಿಜಯ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸೋನಾಲ್ ಡಿ’ಸೋಜಾ ನಿರೂಪಿಸಿದರು.


