UN NETWORKS
ಮಂಗಳೂರು : ಸುನ್ನೀ ಸಂದೇಶ ಮಾಸ ಪತ್ರಿಕೆಯ 16ನೇ ವಾರ್ಷಿಕ ಮಹಾ ಸಂಭ್ರಮ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಬೆಳ್ಮ ರೆಂಜಾಡಿ ಶಾಖೆಯ 18ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಮಾರ್ಚ್ 15ರಿಂದ 25ರ ತನಕ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ 10 ದಿವಸಗಳ ಪ್ರಚಾರ ಕಾರ್ಯಕ್ರಮದ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ ನಡೆಯುವ ಜನಾಂದೋಲನವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಸುನ್ನೀಸಂದೇಶ ಮಾಸ ಪತ್ರಿಕೆಯ ನಿರ್ದೇಶಕರು, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರು, ಕಾರ್ಯಕ್ರಮದ ಕೋಶಾಧಿಕಾರಿಯು ಆದ ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರುರವರು ಶಿಕಾರಿಪುರದ ರುದ್ರಭೂಮಿಗಳ ಸಮಿತಿ ಅಧ್ಯಕ್ಷರೂ ಝುಲೈಕ ಚಾರಿಟೇಬಲ್ ಟ್ರಸ್ಟಿ ಮಾಜಿ ಅಧ್ಯಕ್ಷರು ಆದ ಹನೀಫ್ ಹಾಜಿ ಶಿಕಾರಿಪುರ ಹಾಗೂ ಶಿಕಾರಿಪುರ ಮುಸ್ಲಿಂ ಜಮಾಅತಿನ ಅಧ್ಯಕ್ಷರಾದ ಫಾರೂಕ್ ಶಿಕಾರಿಪುರರವರಿಗೆ ಮಾದಕ ದ್ರವ್ಯದ ವಿರುದ್ಧ ಹೊರತಂದ ಕಿರುಹೊತ್ತಿಗೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.