Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಕೊಣಾಜೆ

ಕೊಣಾಜೆ: ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

UllalaVaniBy UllalaVaniMarch 9, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ: ಮೊದಲ ವೃತ್ತಿಯಾಗಿ ಮಂಗಳೂರಿನ ಬಂದರು ಹಾಗೂ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ಪುತ್ತೂರು ಠಾಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಹುದ್ದೆ ಮಾಡುತ್ತಾ ಹಂತ ಹಂತವಾಗಿ ಮೇಲೇರುತ್ತಾ ಡಿಜಿಪಿ ಹುದ್ದೆ ತನಕ ಏರಿದ್ದು ನಿಜಕ್ಕೂ ಸಾಹಸ.

ಚಿತ್ರದುರ್ಗದಂತಹ ಮುಂದುವರಿದಿರದ ಜಿಲ್ಲೆಯಲ್ಲಿ ಎಸ್‍ಪಿಯಾಗಿದ್ದಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿಂಗಳಲ್ಲಿ ಒಂದು ಬಾರಿ ಪೊಲೀಸ್ ಠಾಣೆಗೆ ಭೇಟಿ ಕೊಡುವ ಕಾರ್ಯಕ್ರಮದ ಮೂಲಕ ಪೊಲೀಸ್ ಸೇವೆ ಬಗ್ಗೆ ಜನಜಾಗೃತಿ ಮೂಡಿಸಲು ಸಾಧ್ಯವಾಗಿತ್ತು ಎಂದು ದೇಶದ ಮೊದಲ ಮಹಿಳಾ ಡಿಜಿಪಿ, ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಆಫೀಸರ್ ಡಾ. ಜಿಜಾ ಮಾಧವನ್ ಹರಿಸಿಂಗ್ ಅಭಿಪ್ರಾಯಪಟ್ಟರು.

ಮಂಗಳೂರು ವಿವಿಯ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ಆಶ್ರಯದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪೊಲೀಸ್ ಹುದ್ದೆಯಲ್ಲಿ ಇರುವವರಿಗೆ ಕೆಲವೊಂದು ಸಂದರ್ಭಗಳು ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಿಲ್ಲ. ಕೆಲವು ಘಟನೆಗಳು ಆತಂಕಕ್ಕೆ ತಳ್ಳುತ್ತದೆ. ಕುಟುಂಬವನ್ನೇ ಘಾಸಿಗೊಳಿಸುವಂತಹ ಘಟನೆಗಳು ನಡೆದರೂ ಅಂತಹ ಘಟನೆಗಳನ್ನು ಮೆಲುಕು ಹಾಕುತ್ತಾ ಸಾಗಿದಂತೆ ನಮ್ಮ ಸೇವೆ ಕರ್ತವ್ಯ ನಿಷ್ಠೆ ಸದಾ ಕಾಲ ಸಂತುಷ್ಟಗೊಳಿಸುತ್ತದೆ ಎಂದರು.

ಜೀವನದಲ್ಲಿ ನಮಗೆದುರಾದ ಕಹಿ ಘಟನೆಗಳನ್ನು ಮರೆಯದಿದ್ದರೆ ಗೆಲುವಿನ ದಡ ಸೇರಲು ಸಾಧ್ಯವಿಲ್ಲ. ನಮಗೆ ನಮ್ಮ ಬದುಕಿನ ಕುರಿತಾದ ನಿರ್ದಿಷ್ಟವಾದ ಗುರಿ ಇರಬೇಕು. ಎಪ್ಪತ್ತರ ದಶಕದಲ್ಲಿ ಇದ್ದಂತಹ ಮಹಿಳಾ ಸಮಾನತೆಗೂ ಪ್ರಸ್ತುತ ಕಾಲಘಟ್ಟಕ್ಕೂ ತಾಳೆ ಹಾಕಿದರೆ ದೊಡ್ಡ ಅಂತರವಿದೆ. ಮಹಿಳೆ ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಹುದ್ದೆಗೆ ಏರಿ ಬದುಕಿನಲ್ಲಿ ಸಾರ್ಥಕ್ಯ ಕಂಡಿದ್ದಾರೆ. ಮಹಿಳಾ ಮೀಸಲಾತಿ, ಅಧಿಕಾರ ಪಡೆಯುವುದು ಈಗ ಕನಸಾಗಿ ಉಳಿದಿಲ್ಲ ಎಂದರು.

ಮಹಿಳೆಯರ ಮೇಲೆ ನಡೆಯುವ ವಿವಿಧ ಆಕ್ರಮಣಗಳನ್ನು ತಡೆಯಲು ಈಗಾಗಲೇ ಹಲವು ಬಗೆಯ ಕ್ರಮ ಕೈಗೊಳ್ಳಲಾಗಿದೆ. ಜೀವನದಲ್ಲಿ ಯಶಸ್ಸು ನಮ್ಮ ಪಾಲಾಗಬೇಕಾದರೆ ಯಾರೂ ಓದದ್ದನ್ನು ಓದಬೇಕು, ಯಾರೂ ಯೋಚಿಸದ್ದನ್ನು ಯೋಚಿಸಬೇಕು. ಹಾಗೆಯೇ ಯಾವುದೇ ತಪ್ಪು ಮಾಡದೆ ನಮ್ಮ ಯೋಚನೆಯನ್ನು ಯೋಜನೆಯಾಗಿ ಯಾರೂ ಮಾಡದ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು. ಯಶಸ್ಸು ನಮ್ಮನ್ನು ಅರಸಿ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ಸರ್ಫರ್ ತನ್ವಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ, ಕುಲಸಚಿವ ಡಾ. ಬಿ. ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್‍ನ ನಿರ್ದೇಶಕಿ ಡಾ. ಅನಿತಾ ರವಿಶಂಕರ್ ಸ್ವಾಗತಿಸಿದರು. ಡಾ. ಮೋನಿಕಾ ಸದಾನಂದ ಡಾ. ಜೀಜಾ ಅವರನ್ನು ಪರಿಚಯಿಸಿದರು. ಎಂಬಿಎ ವಿಭಾಗದ ಪ್ರೊ. ಪ್ರೀತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

March 16, 2026

ಎಸ್ಸಸ್ಸಫ್ ಬಾಳೆಪುಣಿ ಶಾಖಾ ವತಿಯಿಂದ ಮಾಸಿಕ ಬುರ್ಧಾ ಮಜ್ಲಿಸ್ ಹಾಗೂ ಬ್ರಹತ್ ಇಫ್ತಾರ್ ಕೂಟ

March 16, 2026

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

By UllalaVaniMarch 16, 20260

ಕೊಣಾಜೆ ;ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮಲ್ಲಾಪುರದ ಮೂಲದ ಶೋಭಾ ಹನುಮಂತಪ್ಪ ಭಜಂತ್ರಿ (33) ಎಂಬವರು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು ತಾಲ್ಲೂಕು ನೊಂದಾವಣೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ- ಸಕಾಲದಲ್ಲಿ ಸಿಗದ ಸೇವೆ

March 16, 2026

ಎಸ್ಸಸ್ಸಫ್ ಬಾಳೆಪುಣಿ ಶಾಖಾ ವತಿಯಿಂದ ಮಾಸಿಕ ಬುರ್ಧಾ ಮಜ್ಲಿಸ್ ಹಾಗೂ ಬ್ರಹತ್ ಇಫ್ತಾರ್ ಕೂಟ

March 16, 2026

ಪಂಪ್ವೆಲ್‌ : ಜಲ್ಲಿಕಲ್ಲಿನಿಂದ ಜಾರಿಬಿದ್ದ ತಾಯಿ ಮಗುಮಾನವೀಯತೆ ಮೆರೆದ ರಿಕ್ಷಾ ಚಾಲಕರು

March 14, 2026
1 2 3 … 1,833 Next
Automatic YouTube Gallery

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ; ನಳೀನ್ ಕುಮಾರ್ ಕಟೀಲ್ ಭಾಗಿ

ಮಾಡೂರು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ;ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿ

ಮಾಡೂರಿನ ಸುಂದರಿ ಪೂಜಾರಿ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #YAKSHAGANA #madooru #tulunad #nalinkumarkateel
Show More
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ; ನಳೀನ್ ಕುಮಾರ್ ಕಟೀಲ್ ಭಾಗಿ
Now Playing
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ; ನಳೀನ್ ಕುಮಾರ್ ಕಟೀಲ್ ಭಾಗಿ
ಮಾಡೂರು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ;ನಳಿನ್ ಕುಮಾರ್ ಕಟೀಲ್ ಸೇರಿದಂತೆ ...
ಮಾಡೂರು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ;ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿ

ಮಾಡೂರಿನ ಸುಂದರಿ ಪೂಜಾರಿ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #YAKSHAGANA #madooru #tulunad #nalinkumarkateel
Show More
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
Now Playing
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ ...
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ಕ್ಯೆಕಂಬದ ಮೆಘಾ ಹಾಲ್‌ನಲ್ಲಿ ಆಯೋಜನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ifthar #gurupura #news #latestnews
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d