UN NETWORKS
ಪಜೀರು: ವ್ಯಕ್ತಿಗತ ಆರೋಗ್ಯ ಸಂರಕ್ಷಣೆ ಸಾಮಾಜಿಕ ಸ್ವಾಸ್ತ್ಯ ಹಾಗೂ ಸಹಬಾಳ್ವೆಗೆ ಪೂರಕ ಎಂದು ಮಂಗಳಾ ಸೇವಾ ಸಮಿತಿ ಟ್ರಸ್ಟ್ನ ಸಂಚಾಲಕ ಡಾ| ಅನಂತಕಷ್ಣ ಭಟ್ ಅಭಿಪ್ರಾಯಪಟ್ಟರು.
ಪಜೀರು ಬೀಜಗುರಿಯ ಗೋವನಿತಾಶ್ರಯದ ಸಭಾಂಗಣದಲ್ಲಿ ಮಂಗಳೂರಿನ ಮಂಗಳಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ದೇರಳಕಟ್ಟೆ ಕ್ಷೇಮ ಅಸ್ಪತ್ರೆ ಸಹಯೋಗದೊಂದಿಗೆ 215 ಕುಟುಂಬಗಳಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದರು.
ಕುಟುಂಬದ ಸಮಗ್ರ ನೆಮ್ಮದಿಯ ಬುನಾದಿ ನಮ್ಮ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಪಜೀರಿನ ಗೋವನಿತಾಶ್ರಯದಲ್ಲಿ ಸರ್ವಧರ್ಮದ ಜನರಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರ ಒಂದು ಅಂಗ ಆರೋಗ್ಯ ವಿಮಾ ಕಾರ್ಡ್ ವಿತರಣೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು .
ಈ ಸಂದರ್ಭದಲ್ಲಿ ಟ್ರಸ್ಟಿ ಎಲ್. ಶ್ರೀಧರ್ ಭಟ್, ಲಕ್ಷ್ಮೀಶ ಎಡಿಯಾಳ್, ಉಳ್ಳಾಲ ಪ್ರಖಂಡ ವಿಶ್ವ ಹಿಂದೂ ಪರಿಚತ್ ಕಾರ್ಯದರ್ಶಿ ರವಿ ಅಸೈಗೋಳಿ, ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥ ದೇವಸ್ಥಾನದ ಚಂದ್ರಹಾಸ್ ಪೂಂಜಾ ಆಡಳಿತ ಮೊಕ್ತೇಸರ, ಮುಖಂಡರಾದ ಸುಭಾಷ್ ಧರ್ಮನಗರ ಮತ್ತಿತರರು ಉಪಸ್ಥಿತರಿದ್ದರು.


