Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ವಿಜ್ಞಾನಕ್ಕಿಂತ ಸನಾತನ ಭಿನ್ನ- ಒಡಿಯೂರು ಶ್ರೀ

UllalaVaniBy UllalaVaniFebruary 27, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತಲಪಾಡಿ: ಆಧುನಿಕ ಬದುಕಿನ ಅಗತ್ಯತೆ ಕಂಡಾಗ ಕೆಲವು ಭಾಷೆಗಳು ನಮಗೆ ಅನಿವಾರ್ಯವೇನೋ ಸರಿ. ಆದರೆ ನಮ್ಮದು ಎಂಬ ನಮ್ಮ ಬದುಕುವ ಧರ್ಮವಾಗಿರುವ ಸನಾತನವನ್ನು ಮರೆಯದೆ ನೂತನ ಅಧ್ಯಯನ ಮಾಡುವುದು ತಪ್ಪಲ್ಲ ಅಷ್ಟಕ್ಕೂ ವಿಜ್ಞಾನದಲ್ಲಿ ದಿನನಿತ್ಯ ಬದಲಾವಣೆ ಆಗುತ್ತಿದ್ದು ಆಧ್ಯಾತ್ಮಿಕದಲ್ಲಿ ಬದಲಾವಣೆ ಎಂಬುದು ಇಲ್ಲ. ಅದು ಯಾವ ಕಾಲಕ್ಕೂ ಬದಲಾಗದು. ಹಾಗಾಗಿ ವಿಜ್ಞಾನಕ್ಕಿಂತ ಸನಾತನ ಭಿನ್ನ ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಟ್ಟರು.

ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ಧೂಮಾವತೀ ಬಂಟ ದೈವಸ್ಥಾನದ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಯಾವುದೇ ಧರ್ಮ ಸರ್ವರ ಸಕಲರ ಅಭ್ಯುದಯಕ್ಕಾಗಿ ಇರುವುದು, ಇರಬೇಕು. ಧರ್ಮವಿಲ್ಲದೆ ಬದುಕಿಲ್ಲ. ಧರ್ಮವಿಲ್ಲದ ಬದುಕು ನೀರಿನಿಂದ ಮೇಲೆ ಬಂದ ಮೀನಿನಂತೆ. ಹಕ್ಕಿ ಆಕಾಶದಲ್ಲಿ ಹಾರಾಡುತ್ತಾ ನೀರಿನಲ್ಲಿ ಈಜುವ, ಮೀನು ನೀರಿನಲ್ಲಿ ಈಜುತ್ತಾ ಬಾನಂಚಿನಲ್ಲಿ ಹಾರಾಡುವ ಕನಸುಕಾಣುವುದುರಿಂದ ಯಾವುದೇ ಬದಲವಾಣೆ ಸಿಗದು. ಯಾಕೆಂದರೆ ಮೀನು ನೀರಿನಿಂದ ಹೊರಬಂದರೆ ಬದುಕದು,ಹಕ್ಕಿ ನೀರಿನಲ್ಲಿ ಮುಳುಗುತ್ತಾ ಬದುಕಲು ಸಾಧ್ಯವಿಲ್ಲ. ಮೀನು ಈಜುತ್ತಿರಬೇಕು, ಹಕ್ಕಿ ಹಾರುತ್ತಿರಬೇಕು ಅದು ಪ್ರಕೃತಿ ಧರ್ಮ ಎಂದು ನುಡಿದರು.

ಕರಾವಳಿಯ ಜನತೆಯಲ್ಲಿ ದಾನಧರ್ಮ ಮಾಡುವ ಮನಸ್ಸು ಇನ್ನೂ ದೊಡ್ಡ ಪ್ರಮಾಣದಲ್ಲಿ ಇರುವುದರಿಂದಾಗಿ ಸಮಾಜದಲ್ಲಿ ಅದೆಷ್ಟೋ ಕ್ಷೇತ್ರಗಳು ಜೀರ್ಣೋದ್ಧಾರ ಪುನರ್ ನವೀಕರಣಗೊಳ್ಳಲು ಸಾಧ್ಯವಾಗಿದೆ. ನಾನು ಎಂಬ ಭಾವ ಹೋಗಬೇಕು. ಹಾಗೆಯೇ ನಮ್ಮ ಬೇಡಿಕೆಗಳ ಮೇಲೆ ಹಿಡಿತವಿದ್ದರೆ ನಮಗೆ ಸಹಜವಾಗಿಯೇ ಶಾಂತಿ ದೊರಕುವುದು. ಜ್ಞಾನ ಸಂಪಾದನೆಗೆ ಗುರು ಬೇಕು ಹೊರತು ಗೂಗಲ್ ಅಲ್ಲ, ಅದುವೇ ಅನಿವಾರ್ಯವಾಗಬಾರದು. ಯಾಂತ್ರಿಕತೆಗೆ ನಾವು ಬಲಿಯಾಗಬಾರದು. ಅಪಾಯದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಬದುಕಿಸುವುದು ಬಿಟ್ಟು ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಬಿಡುವುದು ಶೋಭೆಯಲ್ಲ, ಮೊದಲಾಗಿ ಜೀವ ರಕ್ಷಣೆ ಮುಖ್ಯ ಎಂದು ನುಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದೂ ಧರ್ಮದ ನಂಬಿಕೆ ಬಹಳ ಶ್ರೇಷ್ಟವಾದ ನಂಬಿಕೆ. ಈ ನಂಬಿಕೆಯ ಆಧಾರದಲ್ಲಿ ಬದುಕಿ ದೈವಾರಾಧನೆಯಂತಹ ಕಾರ್ಯವನ್ನು ನಡೆಸುವವರು. ನಮ್ಮಲ್ಲಿ ಅಸ್ಪಶ್ಯತೆ ಇಲ್ಲವೆಂಬುದನ್ನು ದೈವಾರಾಧನೆಯ ಮೂಲಕ ನಾವು ತೋರಿಸಿಕೊಟ್ಟಿದ್ದೇವೆ. ಇಲ್ಲಿ ಸಾಮಾಜಿಕ ನ್ಯಾಯ ನೀಡುವ ಕಾರ್ಯ ನಡೆಯುತ್ತದೆ. ಕೋಮುವಾದಿಗಳು ಎನ್ನುವುದಕ್ಕೂ ಉದ್ಯಾವರದ ಮಾಡದಲ್ಲಿ ನಾವು ಮೊದಲ ಗೌರವ ನೀಡುವುದು ಅಲ್ಲಿಯ ಮಸೀದಿಯ ಫಕೀರರಿಗೆ ಎಂದ ಅವರು ತುಳುನಾಡಿನ ದೈವಾರಾಧನೆ ಸಾಂಸ್ಕøತಿಕವಾದ ಪರಂಪರೆಯೊಂದಿಗೆ ಒಂದು ಶ್ರೇಷ್ಠವಾದ ನಂಬಿಕೆಯಾಗಿದೆ ಎಂದರು.
ಕೆನರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಧಾರ್ಮಿಕ ಉಪನ್ಯಾಸಗೈದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಜಯಪಾಲ್ ಶೆಟ್ಟಿ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿ, ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆಸಲ್ಲಿಸಿದ ಪ್ರಮುಖರನ್ನು ಹಾಗೂ ದೈವದ ಪಾತ್ರಿಗಳನ್ನು ಸನ್ಮಾನಿಸಲಾಯಿತು.
ಸಚಿವ ಯು.ಟಿ. ಖಾದರ್, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸುಬ್ಬಯ್ಯ ಮಾರ್ಲ ಉಳಿಪಾಡಿಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯ, ಮಲರಾಯ ದೈವದ ಪಾತ್ರಿ ಅಂತ ಪೂಜಾರಿ ಭಂಡಾರಮನೆ, ಕುತ್ತಾರುಗುತ್ತು ಚಂದ್ರಹಾಸ ಅಡ್ಯಂತಾಯ, ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಉದ್ಯಮಿ ಶಶಿಧರ್ ಶೆಟ್ಟಿ ಮಂಗಳೂರು, ಸಂತೋಷ್ ಕುಮಾರ್ ರೈ ಬೋಳಿಯಾರು, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮೂಕಾಂಬಿಕಾ ಕನ್ ಸ್ಟ್ರಕ್ಷನ್ಸ್‍ನ ಚಂದ್ರಹಾಸ್ ಪಂಡಿತ್‍ಹೌಸ್, ಗಿರೀಶ್ ಆಳ್ವ ಮೋರ್ಲ ಹಾಗೂ ಉದ್ಯಮಿ ಪ್ರಭಾಕರ ಶೆಟ್ಟಿ ಕಿನ್ಯಗುತ್ತು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಬಿ. ರವೀಂದ್ರನಾಥ ರೈ ಸಾಂತ್ಯ ಗಡದಗುತ್ತು ಸ್ವಾಗತಿಸಿದರು.
ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಹಾಗೂ ಸುಕೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಂಟ ಬೊಲ್ಯಗುತ್ತು ವಂದಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿಯ ಭಾರತ: ವಿಚಾರಸಂಕಿರಣ ಉದ್ಘಾಟನೆ

March 4, 2026

ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಶೇ 100 ಫಲಿತಾಂಶ

March 4, 2026

ಪ್ರೇಮ ವೈಫಲ್ಯ ಹಿನ್ನೆಲೆ; ಒಮಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸೋಮೇಶ್ವರದ ಯುವಕ

March 4, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕಾರ್ಮಿಕ ಸಂಹಿತೆ ವಿರುದ್ಧ ಸಹಾಯಕ ಕಾರ್ಮಿಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಕೆ

By UllalaVaniMarch 4, 20260

ಮಂಗಳೂರು: ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನೆ ಮಂಗಳೂರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc.ಯಲ್ಲಿ ಪ್ರಥಮ ರ‍್ಯಾಂಕ್

March 4, 2026

ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ “ಲೆಂಟನ್ ಗಾಸ್ಪೆಲ್ ಕಾಮಿಕ್ಸ್” ಪುಸ್ತಕ ಬಿಡುಗಡೆ

March 4, 2026

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಧಾರಿಗಳಿಗೆ ಶಾಕಿಂಗ್ ಸುದ್ದಿ ; 20 ಲಕ್ಷ ಕಾರ್ಡ್ ರದ್ದು..!

March 4, 2026
1 2 3 … 1,823 Next
Automatic YouTube Gallery

ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ

ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ಸಭಾಂಗಣದಲ್ಲಿ ಕಾರ್ಯಕ್ರಮ

ಅಂಬೇಡ್ಕರ್ ಬಗ್ಗೆ ಅಕ್ಕ ಐ.ಎ.ಎಸ್ ಅಕಾಡೆಮಿಯ ಶಿವಕುಮಾರ್ ಪ್ರಾಸ್ತಾವಿಕ ಮಾತು


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #mangalore #package #ambedkar
Show More
ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ
Now Playing
ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ
ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ...
ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ಸಭಾಂಗಣದಲ್ಲಿ ಕಾರ್ಯಕ್ರಮ

ಅಂಬೇಡ್ಕರ್ ಬಗ್ಗೆ ಅಕ್ಕ ಐ.ಎ.ಎಸ್ ಅಕಾಡೆಮಿಯ ಶಿವಕುಮಾರ್ ಪ್ರಾಸ್ತಾವಿಕ ಮಾತು


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #mangalore #package #ambedkar
Show More
ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
Now Playing
ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಭಜನಾ ಮಂಡಳಿ,ಕುಣಿತ ಭಜನಾ ...
ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಭಜನಾ ಮಂಡಳಿ,ಕುಣಿತ ಭಜನಾ ತಂಡ-ಪಾಣೇಲ ಶಾಂತಿನಗರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #pajiru #ganeshaYuvakamandala #Inaugration #Santhoshkumarraiboliyar
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d