UN NETWORKS
ಕೊಲ್ಯ: ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ 40ನೇ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ದ್ಯಾನ ಮಂದಿರದಲ್ಲಿ ಆಯೋಜಿಸಿದ ವಾರ್ಷಿಕ ಭಜನಾ ಮಂಗಳೋತ್ಸವ ಉತ್ತಮ ಧಾರ್ಮಿಕ ಕಾರ್ಯವಾಗಿದೆ, ಭಜನೆಗೆ ವಿಶೇಷವಾದ ಶಕ್ತಿ ಇದೆ,ಪ್ರತಿ ಮನೆಯಲ್ಲೂ ಭಜನೆ ಮಾಡಬೇಕು ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಶವಂತ್ ಪೂಜಾರಿ, ಕೊಲ್ಯ ಹಿರಿಯ ರಿಕ್ಷಾ ಚಾಲಕ ಮಾದವ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಮಂಗಳೂರು ಆತ್ಮ ಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೆಮಿರಾಜ್ ಅಧ್ಯಕ್ಷತೆ ವಹಿಸಿದರು,ಮೈಸೂರು ಉದ್ಯಮಿ ಗೋಪಾಲ್ ಕನೀರ್ ತೋಟ, ರಾಷ್ಟ್ರೀಯ ಕರಾಟೆಪಟು ವೇಣುಗೋಪಾಲ್, ಶಿವಗಿರಿ ಯಾತ್ರೆ ಸಂಚಾಲಕ ಯತೀಶ್ ಕೊಲ್ಯ, ಗಂಗಾಧರ್ ಕುಂಪಲ, ದೇರಳೆಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ಡಾ|ವಸಂತಿ.ಎ.ಬಂಗೇರ, ಮಂಗಳೂರು ಕಟ್ಟಡ ಗುತ್ತಿಗೆದಾರರಾದ ಸುರೇಶ್ ದಂಡಕೇರಿ, ಕೊಲ್ಯ ಯುವವಾಹಿನಿ ಅಧ್ಯಕ್ಷ ಸುರೇಶ್, ಕೊಲ್ಯ ನಾರಾಯಣ ಗುರು ಮಹಿಳಾ ಸಂಘದ ಗೌರವಾಧ್ಯಕ್ಷೆ ವಿಶಲಾಕ್ಷಿ.ಜೆ, ಅಧ್ಯಕ್ಷೆ ಹೇಮಲತಾ.ಎಸ್.ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಕಸ್ತೂರಿ, ಬಿಲ್ಲವ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಈಶ್ವರ್ ಸುವರ್ಣ ಸ್ವಾಗತಿಸಿದರು,ಕಾರ್ಯಕಾರಿ ಸಮಿತಿ ಸದಸ್ಯ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಗೌರವಾಧ್ಯಕ್ಷ ಡಾ|ಪಿ.ರಾಮಾನುಜಂ ಪ್ರಾಸ್ತವಿಕವಾಗಿ ಮಾತನಾಡಿದರು, ಕೋಶಾಧಿಕಾರಿ ಸೀತರಾಮ.ಎಸ್. ಕರ್ಕೇರ ಧನ್ಯವಾದಗೈದರು.




