Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಜೀವರಕ್ಷಕನ ಗುಜರಾತ್- ಕನ್ಯಾಕುಮಾರಿ ಪಾದಯಾತ್ರೆ

UllalaVaniBy UllalaVaniMarch 27, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಅವರು ಉಳಿಸಿದ ಜೀವಗಳು ನೂರಕ್ಕೂ ಅಧಿಕ. ಸದಾ ಸಾಹಸದಲ್ಲೇ ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ ಸಮುದ್ರ ತೀರದ ಗುಜರಾತಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಹೊರಟು 57 ದಿನಗಳಲ್ಲಿ ನಡೆಯುತ್ತಾ ಭಾನುವಾರ ತಮ್ಮ ಹುಟ್ಟೂರು ತೊಕ್ಕೊಟ್ಟುವಿಗೆ ಬಂದು ತಲುಪಿದ್ದಾರೆ.

ಉಳ್ಳಾಲ ಮೊಗವೀರಪಟ್ನ ನಿವಾಸಿ ನವೀನ್.ಯಸ್.ಕರ್ಕೇರ (48) ವೃತ್ತಿಯಲ್ಲಿ ಮೀನುಗಾರರು. ಉಳ್ಳಾಲ ಮೊಗವೀರಪಟ್ನದಲ್ಲಿರುವ ಜೀವರಕ್ಷಕದಳದ ಸಕ್ರಿಯ ಕಾರ್ಯಕರ್ತ. ಸಮುದ್ರದಲ್ಲಿ ಈಜಲೆಂದು ಬಂದು ಅಲೆಗಳಲ್ಲಿ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ಹಲವು ಮಂದಿಯ ಜೀವರಕ್ಷಿಸಿದವರು. 30 ವರ್ಷಗಳಿಂದ ಇಂತಹ ಸಾಹಸದಲ್ಲಿ ತೊಡಗಿಕೊಂಡಿರುವ ನವೀನ್ ಅವರು ಸಮುದ್ರದ ದಡದುದ್ದಕ್ಕೂ ನಡೆದುಕೊಂಡೇ ದೇವಸ್ಥಾನಗಳನ್ನು ಸಂದರ್ಶಿಸಬೇಕು ಎನ್ನುವ ಉದ್ದೇಶವನ್ನು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿದ್ದರು. ಆ ಸಂಕಲ್ಪ ಪ್ರಸಕ್ತ 2015ರಲ್ಲಿ ಈಡೇರಿತು. ಜನವರಿ ತಿಂಗಳಿನಲ್ಲಿ ಸಚಿವ ಯು.ಟಿ.ಖಾದರ್ ಅವರ ಆಪ್ತಸಹಾಯಕ ಪ್ರವೀಣ್ ಅವರಲ್ಲಿ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಹೇಳಿ, ನೆರವನ್ನು ಕೇಳಿದ್ದರು.

23ullal1  23ulla  23ullal2

 

ನೆರವಾದ ಮುಸ್ಲಿಂ ಸಹೋದರರು: ಪ್ರವೀಣ್ ಅವರು ತಮ್ಮ ಆಪ್ತ ಗುಜರಾತಿನಲ್ಲಿರುವ ಬೈಲ್ ಖಾದರ್ ಅವರನ್ನು ಸಂಪರ್ಕಿಸಿ ಪಾದಯಾತ್ರೆ ಕೈಗೊಂಡಿರುವ ಅಯ್ಯಪ್ಪ ವೃತಧಾರಿ ನವೀನ್ ಅವರಿಗೆ ಸಹಕರಿಸುವಂತೆ ಹೇಳಿದ್ದರು. ಅದರಂತೆ ಗುಜರಾತಿಗೆ ರೈಲಿನ ಮುಖಾಂತರ ತೆರಳಿದ್ದ ನವೀನ್ ಅವರನ್ನು ಅಲ್ಲಿನ ಹಿಂದು ಮತ್ತು ಮುಸ್ಲಿಂ ಬಾಂಧವರು ಸಹಕರಿಸಿ, ದ್ವಾರಕಾದಿಂದ ಕನ್ಯಾಕುಮಾರಿಯ ಪಾದಯಾತ್ರೆಗೆ ಸಹಕರಿಸಿದ್ದರು. ದಾರಿಯುದ್ದಕ್ಕೂ ಸಿಗುವ ದೇವಸ್ಥಾನ, ಮಂದಿರಗಳಲ್ಲಿ ಪಾನೀಯ, ಆಹಾರವನ್ನು ಸೇವಿಸಿ ದಿನಪೂರ್ತಿ ಪಾದಯಾತ್ರೆಯನ್ನು ನಡೆಸಿ 57 ದಿನಗಳಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ ಸಮುದ್ರ ತೀರದ ಪ್ರದೇಶಗಳಾದ ಸುಮಾರು 1900 ಕಿ.ಮೀ ಕ್ರಮಿಸಿ ಭಾನುವಾರದಂದು ತೊಕ್ಕೊಟ್ಟು ತಲುಪಿದ್ದಾರೆ.

ನಂಬಿ ಬಂದ ದೇವರು, ದಾರಿಯುದ್ದಕ್ಕೂ ಸಿಕ್ಕ ಎಲ್ಲಾ ಜನರ ಸಹಕಾರದಿಂದ ಯಾವುದೇ ತೊಂದರೆಯಿಲ್ಲದೆ ಈವರೆಗೆ ಸಮುದ್ರತೀರದ ಸುಡುಬಿಸಿಲಿನಲ್ಲಿ ಪಾದಯಾತ್ರೆ ನಡೆಸಿದ್ದೇನೆ. ಮುಂದೆ ಎಲ್ಲರ ಆಶೀರ್ವಾದದೊಂದಿಗೆ ಶೀಘ್ರವೇ ಕನ್ಯಾಕುಮಾರಿ ತಲುಪುತ್ತೇನೆ. ಆನಂತರ ಶಬರಿಮಲೆಗೆ ತೆರಳಲಿದ್ದೇನೆ ಎಂದು ನವೀನ್ ತಿಳಿಸಿದ್ದಾರೆ.

ತೊಕ್ಕೊಟ್ಟು ತಲುಪಿದ ನವೀನ್.ಯಸ್.ಕರ್ಕೇರ ಅವರನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್‍ನ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ವಿವೇಕ್. ಕೆ.ಹೆಚ್, ನವೀನ್ ಭಟ್ನಗರ, ಮಹೇಶ್ ಭಟ್ನಗರ, ರಾಜೇಶ್ ಕುಮಾರ್ ಕಾಪಿಕಾಡು, ಪ್ರಕಾಶ್ ಜೆ.ಪಿ, ಪ್ರವೀಣ್ ಜೆ.ಪಿ, ಸುನಿಲ್ ಧರ್ಮನಗರ, ಗಣೇಶ್ ಬಿ.ಜಿ, ಅರ್ಚಕ ಆನಂದ ಕೋಟ್ಯಾನ್ ಕೊಲ್ಯ, ರವಿಚಂದ್ರ ಗಟ್ಟಿ ತೊಕ್ಕೊಟ್ಟು, ತೇಜಸ್ ಓವರ್ ಬ್ರಿಸ್ಜ, ರೋಹಿತ್ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಮುಕ್ಕಚ್ಚೇರಿ ನಿವಾಸಿ 14 ವರ್ಷಗಳ ಬಳಿಕ  ಸೆರೆ

February 4, 2026

ಸೌಹಾರ್ದಕ್ಕೆ ಸಾಕ್ಷಿಯಾದ ಪಿಲಾರು ನಾಗಬ್ರಹ್ಮ ಕ್ಷೇತ್ರ ವಾರ್ಷಿಕೋತ್ಸವ

February 3, 2026
Leave A Reply

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ

ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
Now Playing
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ...
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d