UN NETWORKS
ಹರೇಕಳ: ಹಲವಾರು ವರ್ಷಗಳ ಹಿಂದೆ ನೆರೆಯಿಂದ ಅಳಿದು ಹೋಗಿರುವ ಹರೇಕಳ ಕುತ್ತಿಮುಗೇರು ಸಮೀಪದ ಸಂಪಿಗೆದಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ಮೂರು ದಿನಗಳ ಅಷ್ಟಮಂಗಳ ಪ್ರಶ್ನೆ ಗುರುವಾರ ಆರಂಭಗೊಂಡಿತು.
ಜ್ಯೋತಿಷಿ ಚೇರಾಡಿ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಶಿಷ್ಯ ಸುಬ್ರಮಣ್ಯ ಕುಮಾರ ಹಾಗೂ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಲಾಗುತ್ತಿದೆ. ಹರೇಕಳ,ಪಾವೂರು ಹಾಗೂ ಅಂಬ್ಲಮೊಗರು ಮಾಗಣೆಗೆ ಸಂಬಂಧಪಟ್ಟ ದೇವಸ್ಥಾನ ಇದಾಗಿರುವುದರಿಂದ ಏಳು ಜನರ ಸಮಿತಿ ರಚನೆ ಅಗತ್ಯ. ಶಿವ ಹಾಗೂ ದೇವಿಶಕ್ತಿ ಹೊಂದಿದ್ದು, ಉಪದೇವತೆಗಳ ಸಾನಿಧ್ಯ ಇದಾಗಿದೆ ಎಂದು ಪ್ರಶ್ನೆಯಲ್ಲಿ ತಿಳಿದು ಬಂತು.
ಈ ಸಂದರ್ಭ ದೇವಸ್ಥಾನ ಟ್ರಸ್ಟ್ ನ ಪ್ರಮುಖರಾದ ರಾಜೀವ ಆಳ್ವ ಬ್ರಹ್ಮಾವರ, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಹಾಬಲ ಹೆಗ್ಡೆ ದೆಬ್ಬೇಲಿ, ಸದಾಶಿವ ಸಾಮಾನಿ, ರಮಾನಾಥ ಭಂಡಾರಿ ಪೆರುವೋಡಿ, ಸೋಮಶೇಖರ್ ಚೌಟ, ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಬಾಸ್ಕರ ಶೆಟ್ಟಿ ಸಂಪಿಗೆದಡಿ, ತನಿಯಪ್ಪ ಕೋಟ್ಯಾನ್, ದಾಮೋದರ ಕೋಟ್ಯಾನ್, ವಿವಿಧ ಜಾತಿಯ ಪ್ರಮುಖರು ಉಪಸ್ಥಿತರಿದ್ದರು.


