UN NETWORKS
ಉಡುಪಿ : ಮರ್ಕಝುಲ್ ಬದ್ರಿಯ್ಯಃ ಎಜ್ಯುಕೇಶನಲ್ ಸೆಂಟರ್ (ರಿ.)ಉಡುಪಿ ಇದರ ದಶವಾರ್ಷಿಕ ಸಂಭ್ರಮವು 2018 ಜನವರಿ 2 ಮಂಗಳವಾರ ಕಟಪಾಡಿ ಜಂಕ್ಷನ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 1ಗಂಟೆಗೆ ಅಶ್ಶಖ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.)ರವರ ಮಖಾಂ ಝಿಯಾರತ್ ನಡೆಯಲಿದೆ.ಮಧ್ಯಾಹ್ನ 2.30ಕ್ಕೆ ಕಟಪಾಡಿ ಪೇಟೆಯಲ್ಲಿ ಸ್ವಚ್ಚತಾ ಆಂದೋಲನಾ ನಡೆಯಲಿದ್ದು ಮಧ್ಯಾಹ್ನ 3.30ಕ್ಕೆ ದ್ವಜಾರೋಹಣ ನಡೆಯಲಿದೆ ಸಂಜೆ ಗಂಟೆ 4.30ಕ್ಕೆ ದಶವಾರ್ಷಿಕ ಸಂಭ್ರಮವು ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ದುಆ ದೊಂದಿಗೆ ಚಾಲನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.ಯು.ಕೆ.ಮುಸ್ತಫ ಸಅದಿ ಕಾರ್ಯಕ್ರಮವನ್ನು ಉಧ್ಘಾಟಿಸಲಿರುವರು.
ಖ್ಯಾತ ವಾಗ್ಮಿ ಬಹು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಗಯ್ಯಲಿದ್ದು ಅಸ್ಸಯ್ಯಿದ್ ಹೈದರೋಸ್ ಕಿಲ್ಲೂರು ತಂಙಳ್ ಸಮಾರೋಪ ದುಆ ಮಾಡಲಿರುವರು.
ಅಲ್ಹಾಜ್ ಸಲೀಂ ಮದನಿ ಎಲ್ಲೂರು. ಸಚಿವರಾದರು ಪ್ರಮೋದ್ ಮಧ್ವರಾಜ್.ಶಾಸಕರಾದ ವಿನಯ ಕುಮಾರ್ ಸೊರಕೆ.ಜನಾಬ್ ಎಂ.ಎ.ಗಫೂರು.ಸುರೇಶ್ ಶೆಟ್ಟಿ ಗುರ್ಮೆ.ವಿನಯ ಬಲ್ಲಾಳ್ ಕಟಪಾಡಿ ಹಾಗೂ ಮತ್ತಿತರ ನಾಯಕರು ಭಾಗವಹಿಸಲಿರುವರು.


