UN NETWORKS
ಮಂಗಳೂರು : ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು. ಈ ಹಿನ್ನಲೆಯಲ್ಲಿ ಬಸ್ ನ ಚಾಲಕ ಮತ್ತು ಅಯ್ಯಪ್ಪ ವೃತಧಾರಿಗೆ ಮಾತುಕತೆ ನಡೆದು ಬಸ್ ಚಾಲಕ ಅಯ್ಯಪ್ಪ ವೃತಧಾರಿಗೆ ನಿಂದನೆ ಮಾಡಿದ್ದಾನೆ.
`ಯಾರ ಮೇಲೂ ಹಲ್ಲೆ ನಡೆಸಿಲ್ಲ’
ಘಟನೆಯ ಬೆನ್ನಲ್ಲೇ “ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ” ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ, “ಯಾರ ಮೇಲೂ ಪೊಲೀಸರು ಹಲ್ಲೆ ನಡೆಸಿಲ್ಲ. ಯಾರಿಗಾದರೂ ಯಾರಿಂದಲೂ ಅನ್ಯಾಯವಾಗಿದ್ದರೆ ಠಾಣೆಗೆ ಬಂದು ದೂರು ನೀಡುವಂತೆ ಹೇಳಿದ್ದೇನೆ. ಆದರೆ, ಹಾಗೆ ಮಾಡದೆ 50ಕ್ಕೂ ಮಿಕ್ಕಿ ಜನರು ಸೇರಿದ್ದರಿಂದ ಗುಂಪನ್ನು ಚದುರಿಸಲು ಲಾಠಿ ಬೀಸಿದಾಗ ತಾಗಿರಬಹುದು” ಎಂದು ಹೇಳಿದ್ದಾರೆ.