ಹೈದರಾಬಾದ್: 2016-17ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಸ್ಯಾಂಡಲ್ ವುಡ್ ನ ಹಿರಿಯ ನಟ ಅನಂತ್ ನಾಗ್ ಅತ್ಯುತ್ತಮ ನಟ ಹಾಗೂ ಶ್ರದ್ಧಾ ಶ್ರೀನಾಥ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
ಮುತ್ತಿನ ನಗರಿ ಹೈದರಾಬಾದ್ ನ ಎಚ್ಐಸಿಸಿ ಕಾಂಪ್ಲೆಕ್ಸ್ ನಲ್ಲಿ ನಡೆದ 64ನೇ ಫಿಲ್ಮ್ ಫೇರ್ ವರ್ಣರಂಜಿತ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ನಟರು ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಅನಂತ್ ನಾಗ್ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದರೆ, ಯುಟರ್ನ್ ಚಿತ್ರದ ನಟನೆಗಾಗಿ ಶ್ರದ್ಧಾ ಶ್ರೀನಾಥ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
64ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಸ್ಯಾಂಡಲ್ವುಡ್ ಚಿತ್ರಗಳ ಪಟ್ಟಿ:
* ಅತ್ಯುತ್ತಮ ಚಿತ್ರ – ತಿಥಿ
* ಅತ್ಯುತ್ತಮ ನಿರ್ದೇಶಕ – ರಿಶಭ್ ಶೆಟ್ಟಿ – ಕಿರಿಕ್ ಪಾರ್ಟಿ
* ಅತ್ಯುತ್ತಮ ನಟ – ಅನಂತ್ ನಾಗ್ – ಗೋಧಿ ಬಣ್ಣ ಸಾಧಾರಣ ಮೈಕಟ್ಟು
* ಅತ್ಯುತ್ತಮ ನಟಿ – ಶ್ರದ್ಧಾ ಶ್ರೀನಾಥ್ – ಯುಟರ್ನ್
* ಅತ್ಯುತ್ತಮ ಪೆÇೀಷಕ ನಟ – ವಶಿಷ್ಠ ಸಿಂಹ – ಗೋಧಿ ಬಣ್ಣ ಸಾಧಾರಣ ಮೈಕಟ್ಟು
* ಅತ್ಯುತ್ತಮ ಪೆÇೀಷಕ ನಟಿ – ಸಂಯುಕ್ತ ಹೆಗ್ಡೆ – ಕಿರಿಕ್ ಪಾರ್ಟಿ
* ಅತ್ಯುತ್ತಮ ಸಂಗೀತ ನಿರ್ದೇಶಕ – ಅಜನೇಶ್ ಲೋಕನಾಥ್ – ಕಿರಿಕ್ ಪಾರ್ಟಿ
* ಅತ್ಯುತ್ತಮ ಸಾಹಿತ್ಯ – ಜಯಂತ್ ಕಾಯ್ಕಿಣಿ – ಸರಿಯಾಗಿ ನೆನಪಿದೆ(ಮುಂಗಾರು ಮಳೆ2)
* ಅತ್ಯುತ್ತಮ ಹಿನ್ನಲೆ ಗಾಯಕ – ವಿಜಯ್ ಪ್ರಕಾಶ್ – ಬೆಳಗೆದ್ದು ಯಾರಾ ಮುಖವಾ(ಕಿರಿಕ್ ಪಾರ್ಟಿ)
* ಅತ್ಯುತ್ತಮ ಹಿನ್ನೆಲೆ ಗಾಯಕಿ – ಅನನ್ಯ ಭಟ್ ನಮ್ಮ ಕಾಯೋ ದೇವರೆ(ರಾಮ ರಾಮ ರೇ)


