ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಭಟ್ನಗರ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಅ. 14 ಮತ್ತು 15ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ವಿಶ್ವನಾಥ ಮೆಂಡನ್ ಆಯ್ಕೆಯಾಗಿದ್ದಾರೆ.
ಟ್ರಸ್ಟಿಗಳಾದ ರಾಜೀವ ಮೆಂಡನ್, ವಿಠಲ ಶ್ರೀಯಾನ್, ಸುಂದರ ಅಮಿನ್, ಮೋನಪ್ಪ ಶ್ರೀಯಾನ್, ಜಯಾನಂದ ಅಂಚನ್, ದೇವದಾಸ್ ಶ್ರೀಯಾನ್, ಉತ್ಸವ ಸಮಿತಿ ಕಾರ್ಯನಿರ್ವಾಹಕರಾಗಿ, ಉಪಾಧ್ಯಕ್ಷರಾಗಿ ನಾಗೇಶ್ ಶೆಟ್ಟಿ, ಪುರುಷೋತ್ತಮ ಗಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಭಟ್ನಗರ, ಕೋಶಾಧಿಕಾರಿಯಾಗಿ ಜಯಾನಂದ ಅಂಚನ್, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಕೊಲ್ಯ, ದಿನೇಶ್ ನಾೈಕ್, ಲೆಕ್ಕ ಪರಿಶೋಧಕರಾಗಿ ರಾಮಚಂದ್ರ ತೊಕ್ಕೊಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ರೋಹಿದಾಸ್ ಭಟ್ನಗರ, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಕಿಶೋರ್ ಗಾಂಧಿನಗರ, ಧರ್ಮರಾಜ್, ಸಮಿತಿ ಸದಸ್ಯರುಗಳಾಗಿ ಕೃಷ್ಣಪ್ಪ ಮೆಂಡನ್, ಶಿವರಾಂ ಟಿ., ರಮೇಶ್ ಮೆಂಡನ್, ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ಭಾಸ್ಕರ ತೊಕ್ಕೊಟ್ಟು , ನವೀನ್ ಕುಂಪಲ, ಸುನೀಲ್ ಕುಮಾರ್, ಶರತ್ ತೊಕ್ಕೊಟ್ಟು, ಚಂದ್ರ ಮೆಂಡನ್, ಪ್ರಕಾಶ್ ಕುಂಪಲ ನಾಗೇಶ್ ಕುಂಪಲ, ಲೋಕೇಶ್ ಕುತ್ತಾರು, ತರುಣ್ ಶೆಟ್ಟಿ, ಪ್ರದೀಪ್ ಕಾಪಿಕಾಡು, ರಾಮಚಂದ್ರ ಆಚಾರ್ಯ, ಪವನ್ ಮೆಂಡನ್, ಪುರುಷೋತ್ತಮ ಕಲ್ಲಾಪು, ಶ್ರೀಕಾಂತ್ ಗಟ್ಟಿ, ಉಮೇಶ್ ಕುತ್ತಾರು, ಮಹೇಶ್ ಭಟ್, ಪ್ರದೀಪ್ ಶೆಟ್ಟಿ, ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ್ ಮೆಂಡನ್ ಮಾತನಾಡಿ ಪ್ರತೀ ವರ್ಷದಂತೆ ಈ ಬಾರಿಯ ಉತ್ಸವದ ಯಶಸ್ವಿಗೆ ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.


