ಉಳ್ಳಾಲ ನ್ಯೂಸ್ ನೆಟ್ವರ್ಕ್
ಪಾವೂರು: ಪಾವೂರು ಗ್ರಾಮದ ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು ಪದಾಧಿಕಾರಿಗಳ ಆಯ್ಕೆ ಹಾಗೂ ಎಸ್ಬಿವಿ ಮದರಸ ವಿದ್ಯಾರ್ಥಿ ಸಂಘದ ಆಯ್ಕೆ ಸರ್ವಾನುಮತದಿಂದ ನಡೆಯಿತು.
ಅಧ್ಯಕ್ಷರಾಗಿ ಐ.ಹುಸೈನ್ ಕಡವು, ಗೌರವಾಧ್ಯಕ್ಷ-ಅಬ್ದುಲ್ ಖಾದರ್ ಕೆಳಗಿನಕೆರೆ, ಉಪಾಧ್ಯಕ್ಷ-ಚಕ್ಕರ್ ಮಹಮ್ಮದ್ ಇನೋಳಿ, ಪ್ರಧಾನ ಕಾರ್ಯದರ್ಶಿ-ಶಬೀರ್ ಎ’ಸೈಟ್, ಕಾರ್ಯದರ್ಶಿ-ಅನ್ಸಾರ್ ಮುಕ್ರಿ, ಕೋಶಾಧಿಕಾರಿ-ಅಹ್ಮದ್ ಪೊರ್ಸೋಟ, ಲೆಕ್ಕ ಪರಿಶೋಧಕ-ಟಿ.ಎಚ್.ಅಬ್ಬಾಸ್, ಕಾರ್ಯಕಾರಿ ಸಮಿತಿಗೆ ಮಹಮ್ಮದ್ ಗಂಡಿ, ಹುಸೈನ್ ಬಾವು, ಅಕ್ರಂ ಬಿ’ಸೈಟ್, ಟಿ.ಎಚ್.ನಝೀರ್, ಇಕ್ಬಾಲ್ ಕಕ್ಕೆಬೊಟ್ಟು, ಮಹಮ್ಮದ್ ವರಂತೋಟ, ಹೈದರ್ ಸಖಾಫಿ, ಸಮದ್ ಮುಕ್ರಿ, ಇಬ್ರಾಹಿಂ ನಡುಗುಡ್ಡೆ, ಸಲೀಂ ಅಹ್ಸನಿ, ಅಶ್ರಫ್ ಎಂ.ಎ. ಮುಟ್ಟಿಂಜ ಹಾಗೂ ಲತೀಫ್ ನಂದಾವರ ಆಯ್ಕೆಯಾದರು.



