ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ ರೈಲು ಬಡಿದು ಕಾಲು ತುಂಡಾಗಿ ಗಂಭೀರ ಗಾಯಗೊಂಡ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರೈಲ್ವೇ ಹಳಿಯಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ವೃದ್ಧರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವೃದ್ಧರು ರೈಲು ಹಳಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸ್ಥಳಿಯರೊಬ್ಬರು ನೋಡಿ ಪೊಲೀಸರಿಗೆ ಮತ್ತು 108 ಆ್ಯಂಬುಲೆನ್ಸ್‍ಗೆ ಮಾಹಿತಿ ನಿಇಡಿದ್ದು, ಸ್ಥಳೀಯರ ಸಹಕಾರದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅಪರಿಚಿತರಾಗಿರುವ ವೃದ್ಧರು ಕುಂಪಲ ಮೂಲದವರು ಎಂದು ತಿಳಿದು ಬಂದಿದೆ.
ರೈಲು ಹಳಿಯಲ್ಲೇ ಉಳಿದ ಪಾದ : ರೈಲು ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವೃದ್ಧರನ್ನು ಆಸ್ಪತ್ರೆಗೆ ಸಾಗಿಸುವ ಭರದಲ್ಲಿ ತುಂಡಾದ ಕಾಲಿನ ಪಾದ ಘಟನಾ ಸ್ಥಳದಲ್ಲೇ ಉಳಿದಿತ್ತು. ಪಾದ ಉಳಿದ ಬಗ್ಗೆ ಸ್ಥಳೀಯರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿಯಂತೆ ರಾತ್ರಿ ವೇಳೆ ಆಗಮಿಸಿದ ಪೊಲೀಸರು ಸುಮಾರು ಒಂದು ಗಂಟೆಯ ಹುಡುಕಾಟದ ಬಳಿಕ ಕಾಲಿನ ಪಾದವನ್ನು ಪತ್ತೆ ಹಚ್ಚಿ ವೆನ್‍ಲಾಕ್ ಶವಾಗಾರಕ್ಕೆ ಒಪ್ಪಿಸಿದ್ದಾರೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


