UN NETWORKS

ಉಳ್ಳಾಲ : 30 ವರ್ಷಗಳಿಂದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಹಾಗೂ ಉಳ್ಳಾಲ ಪೊಲೀಸರ ನೇತೃತ್ವದ ತಂಡ `ನನ್ನ ಬೀಟ್ ನನ್ನ ಹೆಮ್ಮೆ’ ಜನಸ್ನೇಹಿ ಬೀಟ್ ವ್ಯವಸ್ಥೆಯಡಿ ಬಂಧಿಸಿದ್ದಾರೆ.

1989 ರ ನ.22 ರಂದು ಕಿನ್ಯಾ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಪಕೀರ್ ಬ್ಯಾರಿ ಎಂಬವರಿಗೆ ಮಹಮ್ಮದ್ ಮತ್ತು ಶೇಖಬ್ಬ ಎಂಬವರು ಹಲ್ಲೆ ನಡೆಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣಗೆ ಸಂಬಂಧಿಸಿ ಕಿನ್ಯಾ ಬೆಳರಿಂಗೆ ನಿವಾಸಿ ಶೇಖಬ್ಬ (50) ನ್ಯಾಯಾಲಯಕ್ಕೆ ತೆರಳದೆ ತಲೆಮರೆಸಿಕೊಂಡಿದ್ದರು. ಈತನನ್ನು ಕಿನ್ಯಾ ಗ್ರಾಮದ ಬೆಳರಿಂಗೆ ಬೀಟ್ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ ಸ್ಟೇಬಲ್ ಸುರೇಶ್ ಎಂಬವರು ಬೀಟ್ ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ಆತನ ಮನೆಯಿಂದಲೇ ಬಂಧಿಸಿದ್ದಾರೆ.





