UN NETWORKS
ಉಳ್ಳಾಲ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಇವರ ವತಿಯಿಂದ ಮಂಗಳೂರಲ್ಲಿ ನಡೆಸಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿತ್ಯಾಧರ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಆದಿತ್ಯ ಕೆ. ಇವರು ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕ ಹಾಗೂ ಕೊಯಮತ್ತೂರಿನಲ್ಲಿ ನಡೆದ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್‍ನ ಕುಮಿಟೆ ಸ್ಪರ್ಧೆಯಲ್ಲಿ ಕಂಚಿನ ಪದಕಗಳಿಸಿರುತ್ತಾರೆ.
ಇವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ಕರಾಟೆ ಶಿಕ್ಷಕ ದರ್ನಪ್ಪರವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಆಶಾ ಕುಶಲಪ್ಪ ದಂಪತಿಗಳ ಪುತ್ರ.