ಉಳ್ಳಾಲ: ಕಣಚೂರ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕಣಚೂರು ಇಸ್ಲಾಮಿಕ್ ಎಡ್ಯೂಕೇಶನ್ ಟ್ರಸ್ಟ್ ಅಡಿಯಲ್ಲಿ ಮತ್ತು ಸೈಂಟ್ ಅಲೋಯಿಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ಫರ್ಮೇಷನ್ ಟೆಕ್ನೋಲಜಿ ಇವರ ನಡುವೆ ಸೋಮವಾರದಂದು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಸಂಶೋಧನೆ, ಶಿಕ್ಷಣ ಮತ್ತು ಸೃಜನಶೀಲತೆಯ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಹಾಗೂ ವೈದ್ಯಕೀಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎಐ ಚಾಲಿತ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಾಮೂಹಿಕ ಪ್ರಯತ್ನವನ್ನು ಆರಂಭಿಸಲು ನಿರ್ಧರಿಸಿದೆ ಸೈಂಟ್ ಅಲೋಯಿಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ಫರ್ಮೇಷನ್ ಟೆಕ್ನೋಲಜಿಪ್ರತಿನಿಧಿಯಾಗಿ ನಿರ್ದೇಶಕ ಡಾ. ಕಿರಣ್ ಕೊಠಾ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ರೂಪನ್ಮತ್ತು ಸಾಫ್ಟ್‌ವೇರ್ ಟೆಕ್ನೋಲಜಿ ವಿಭಾಗದ ಮುಖ್ಯಸ್ಥರು ಕನಚೂರ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರತಿನಿಧಿಯಾಗಿ ಡಾ. ಶಹ್ನವಾಜ್ ಮಣಿಪಡಿ ಮತ್ತು ಆಡಳಿತಾಧಿಕಾರಿ ಡಾ. ರೋಹನ್ ಮೊನಿಸ್ ಉಪಸ್ಥಿತರಿದ್ದರು.
Author: UllalaVani
ಮಂಗಳೂರು: ಕಣಚೂರ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸೇಂಟ್ ಅಲೋಶಿಯಸ್ ಸ್ವಾಯತ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ವಿಭಾಗದ ಸಹಯೋಗದಲ್ಲಿ ಮಂಗಳವಾರ ದಂದು ಪದುವ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರತಿ ಹೃದಯದ ಮಿಡಿತವೂ ಅಮೂಲ್ಯ- ಎಂಬ ವಿಷಯದ ಬಗ್ಗೆ ಕಲಿಕಾ ಅಧಿವೇಶನ ಮತ್ತು ಪ್ರಾಯೋಗಿಕ ಕಾರ್ಯಾಗಾರವು ನಡೆಯಿತು.ಕನಚೂರ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೊನಿಸ್ ಮಾತನಾಡಿ ಇಂತಹ ಕಾರ್ಯಗಾರಗಳು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದಲ್ಲ ವೈದ್ಯಕೀಯೇತರ ಕ್ಷೇತ್ರದಲ್ಲಿ ಇರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಈ ಮೂಲಕ ಆರೋಗ್ಯಯುತವಾದ ಸಮಾಜವನ್ನು ಸೃಷ್ಟಿಸುವ ಕೆಲಸವನ್ನು ಮಾಡಬೇಕು ಎಂದರು. ಕಣಚೂರು ವೈದ್ಯಕೀಯ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಡಾ. ಮೊಹಮ್ಮದ್ ಅಫ್ಸಲ್ ಮತ್ತು ಡಾ. ಅಫೀಫಾ ಹಕೀಮ್, ಪದುವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರೋಷನ್ ಸಂತುಮಯೂರ,ಎನ್ ಎಸ್ ಎಸ್ ಎಸ್ ಸಂಯೋಜಕ ಶಶಿಧರ್ ಮತ್ತು ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಯೋಜಕ ಅಲಿ ಮುಸ್ಬಾ…
ಉಳ್ಳಾಲ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಎ.1 ರಿಂದ ಎ.15 ರವರೆಗೆ ವಿಜೃಂಭಣೆಯಿಂದ ಜರಗಲಿದೆ . ಸೋಮನಾಥನ ಜಾಗ ದೇವಸ್ಥಾನಕ್ಕೇ ಸೇರಿದ್ದಾಗಿದೆ . ರೈಲ್ವೇ ಪರಂಬೋಕು ಎಂಬ ದಾಖಲೆಯಲ್ಲಿ ಹಾಕಿರೋದರ ವಿರುದ್ಧ 2018 ರಿಂದ ಸಮಿತಿ ಸದಸ್ಯರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಗೋಶಾಲೆ, ಯಾತ್ರಿ ನಿವಾಸ, ಪಾರ್ಕಿಂಗ್ ಸೇರಿದಂತೆ ಅಭಿವೃದ್ಧಿ ಕೆಲಸಗಳು ದೇವಸ್ಥಾನದ ಹೆಸರಿನಲ್ಲಿಯೇ ಆಗಲಿದೆ ಹೊರತು ಯಾವುದೇ ಸಂಘಟನೆಗಳ ಹೆಸರಿನಲ್ಲಿ ಮಾಡಲು ಬಿಡುವುದಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ ರೈ ಹೇಳಿದ್ದಾರೆ.ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ.11 ರಂದು ಧ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಎ.14 ರಂದು ರಾತ್ರಿ 7.30 ಕ್ಕೆ ಬ್ರಹ್ಮರಥೋತ್ಸವ ಸೋಮೇಶ್ವರ ಬೆಡಿ ಉತ್ಸವವೂ ಜರಗಲಿದ್ದು, ಎ.16 ರಂದು ಕಲ್ಲುರ್ಟಿ , ಕಲ್ಕುಡ ದೈವಗಳ ಕೋಲ ನಡೆಯಲಿದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದ ಅವರು ಇತ್ತೀಚೆಗೆ ಸಂಘಟನೆಯೊಂದು ಸಂಸದ ಭೇಟಿ…
ಕೊಣಾಜೆ: ಇಂದಿನ ಜಗತ್ತಿನಲ್ಲಿ, ಯುವಕರನ್ನು ದಾರಿ ತಪ್ಪಿಸಬಹುದಾದ ಅನೇಕ ಗೊಂದಲಗಳು ಇರುವಾಗ, ಶೈಕ್ಷಣಿಕತೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅವರನ್ನು ಯಶಸ್ವಿ ಮತ್ತು ಸಮತೋಲಿತ ಜೀವನದತ್ತ ಕೊಂಡೊಯ್ಯಲು ಅತ್ಯಗತ್ಯ ಎಂದು ವಕೀಲರು, ಕಲಾವಿದರು, ಚಲನಚಿತ್ರ ನಟ, ಗೀತರಚನೆಕಾರ ಮತ್ತು ನಾಟಕ ರಚನಕಾರ ಶಶಿರಾಜ್ ರಾವ್ ಕಾವೂರು ಅಭಿಪ್ರಾಯಪಟ್ಟರು.ಅವರು ಕೊಣಾಜೆ ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾನಿಲಯದ 2024-25ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಮತ್ತು ಪ್ರತಿಭಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ತೊಡಗಿರುವಾಗ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಇಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಶ್ರೀ ಕಾವೂರು ವಿಶ್ವವಿದ್ಯಾನಿಲಯವನ್ನು ಶ್ಲಾಘಿಸಿದರು.ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷೀಯ ಭಾಷಣದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ನಾಯಕತ್ವದ ಗುಣಗಳ ಮಹತ್ವದ ಕುರಿತು ಗಮನ ಸೆಳೆದರು. ತಮ್ಮ ಶೈಕ್ಷಣಿಕ ಪ್ರಯಾಣದ ಉದ್ದಕ್ಕೂ ಈ ಅಗತ್ಯ ಕೌಶಲ್ಯಗಳನ್ನು ಬೆಳೆಸಲು…
ಕೊಣಾಜೆ: ಅಮಿಟಿ ವಿಶ್ವವಿದ್ಯಾಲಯ, ನೊಯ್ಡ, ಇಲ್ಲಿ ಮಾ. 3 ರಿಂದ 7ರ ವರೆಗೆ ನಡೆದ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ (ಎಐಯು) ವತಿಯಿಂದ ಆಯೋಜಿಸಿದ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ಪಾಟ್ ಫೊಟೊಗ್ರಾಫಿಯಲ್ಲಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕಿರುನಾಟಕ ದ್ವಿತೀಯ ಸ್ಥಾನ., ಶಾಸ್ತ್ರೀಯ ತಾಳವಾದ್ಯ (ವೈಯುಕ್ತಿಕ) – ತೃತೀಯ ಸ್ಥಾನ, ಜನಪದ ನೃತ್ಯ – ತೃತೀಯ ಸ್ಥಾನ, ಶಾಸ್ರೀಯ ನೃತ್ಯ (ಭಾರತೀಯ) – ದ್ವಿತೀಯ ಸ್ಥಾನ, ಶಾಸ್ತ್ರೀಯ ಸಂಗೀತ (ಹಿಂದುಸ್ಥಾನಿ/ಕರ್ನಾಟಕ್) ದ್ವಿತೀಯ ಸ್ಥಾನ, ಶಾಸ್ತ್ರೀಯ ಸ್ವರ ವಾದ್ಯ (ವೈಯಕ್ತಿಕ) ದ್ವಿತೀಯ ಸ್ಥಾನ, ಲಘ ಸಂಗೀತ (ಭಾರತೀಯ) – ದ್ವಿತೀಯ ಸ್ಥಾನ, ಜನಪದ ಸಂಗೀತ ಮೇಳ – ಪ್ರಥಮ ಸ್ಥಾನ, ಸಮೂಹಗಾನ (ಭಾರತೀಯ) 5ನೇ ಸ್ಥಾನ ಪಡೆದುಕೊಂಡರು.ಸಾಂಸ್ಕೃತಿಕ ಮೆರವಣಿಗೆಯಲ್ಲಿ 4ನೇ ಸ್ಥಾನ ಬಹುಮಾನ ಗಳನ್ನು ಪಡೆದುಕೊಂಡಿದೆ. ಭಾರತದಾದ್ಯಂತ 152 ವಿಶ್ವವಿದ್ಯಾನಿಲಯದಿಂದ ಆಗಮಿಸಿಸಿದ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪ್ರರ್ಧೆಗಳಲ್ಲಿ ಭಾಗವಹಿಸಿದ್ದರು. ನೃತ್ಯ ವಿಭಾಗದಲ್ಲಿ…
ಅಂಬ್ಲಮೊಗರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ ಹಾಗೂ ಅಂಬ್ಲಮೊಗರು ಲಕ್ಷ್ಮೀ ನರಸಿಂಹ ಶಾಖೆಯನ್ನು ಹುಟ್ಟುಹಾಕಿ ಮಕ್ಕಳಿಗೆ ಸಂಘ ಶಿಕ್ಷಣವನ್ನು ಕೊಡುತ್ತಿದ್ದ ಅಂಬ್ಲಮೊಗರು ನಿವಾಸಿ ದೇವರಾಜ್ ಆಚಾರ್ಯ(40) ನಿಧನರಾಗಿದ್ದಾರೆ.ಸಮಾಜಮುಖಿ ಚಿಂತನೆಯುಳ್ಳ ಸಕ್ರಿಯ ಕಾರ‍್ಯಕರ್ತನಾಗಿದ್ದ ದೇವರಾಜ್, ಸಂಘದ ಚಟುವಟಿಕೆಗಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿರಿಸಿದ್ದರು. ಮೃತರ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಬ್ರಿಜೇಶ್ ನಾಯರ್, ಟೀಮ್ ಅಗ್ನಿ ಅಂಬ್ಲಮೊಗರು ತೀವ್ರ ಸಂತಾಪ ಸೂಚಿಸಿದೆ.
ಮಂಗಳೂರು: ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಅಭಿಷೇಕ್ ವಾಲ್ಮೀಕಿ ಇವರನ್ನು ನೇಮಕ ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳ ಅಡಿಯಲ್ಲಿ ರಚಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ. ಮಾ.13 ರಂದು ಅಪರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ನೇಮಕಾತಿ ನಡೆಯಿತು. ಬಳಿಕ ನಡೆದ ಪ್ರಥಮ ಸಭೆಯಲ್ಲಿ ಭಾಗವಹಿಸಿದರು. ಅಭಿಷೇಕ್ ವಾಲ್ಮೀಕಿ ಇವರು ಸಮುದಾಯದ ಹಿತಾಸಕ್ತಿಗಾಗಿ ಸದಾ ಶ್ರಮಿಸುವ ಮೂಲಕ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ತಮ್ಮ ಸಮುದಾಯದ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಮೂಲಕ ಪರಿಹಾರವನ್ನು ದೊರಕಿಸಿ ಕೊಡುವಲ್ಲಿ ಶ್ರಮವಹಿಸಿದ್ದರು. ಇವರ ಈ ಸಾಧನೆಗೆ ಹಿತೈಷಿಗಳು, ವಾಯ್ಸ್ ಆಫ್ ಸ್ಟೂಡೆಂಟ್ಸ್ ವಿದ್ಯಾರ್ಥಿ ಸಂಘಟನೆಯ ಸರ್ವ ಸದಸ್ಯರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಅಸೈಗೋಳಿ: ಇಲ್ಲಿಗೆ ಸಮೀಪದ ಗಣೇಶ್ ಮಹಲ್ ನಲ್ಲಿರುವ ಹೆಚ್.ಪಿ ಪೆಟ್ರೋಲ್ ಪಂಪ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಲಾಗಿದೆ. ಮಾರ್ಚ್ 30ರವರೆಗೆ, ಪೆಟ್ರೋಲ್ ಮತ್ತು ಡೀಸೆಲ್‌ಗೆ ಲೀಟರ್‌ಗೆ ರೂ.3 ಕಡಿತ ದರದಲ್ಲಿ ನೀಡಲಾಗುತ್ತಿದೆ. ಈ ಆಫರ್ ಅನ್ನು ಪಡೆಯಲು ಗ್ರಾಹಕರು HP Pay ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿ, ಅದರ ಮೂಲಕ ಹಣ ಪಾವತಿಸಬೇಕು. ಇದಲ್ಲದೆ, ಪಂಪ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ರಿಜಿಸ್ಟರ್ ಮಾಡಬಹುದು, ಇದು ಭವಿಷ್ಯದಲ್ಲಿಯೂ ಇತರ ಆಫರ್‌ಗಳನ್ನು ಪಡೆಯಲು ಸಹಾಯ ಮಾಡಲಿದೆ. ಹೆಚ್.ಪಿ ಪೆಟ್ರೋಲ್ ಪಂಪ್‌ನ ನಿರ್ವಹಣಾಧಿಕಾರಿಗಳ ಪ್ರಕಾರ, ಈ ವಿಶೇಷ ರಿಯಾಯಿತಿಯು ಗ್ರಾಹಕರಿಗೆ ಹೆಚ್ಚಿನ ಲಾಭ ನೀಡಲು ಮತ್ತು ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಕ್ರಮವನ್ನಾಗಿ ಜಾರಿಗೆ ತರಲಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಪೆಟ್ರೋಲ್ ಪಂಪ್‌ಗೆ ಭೇಟಿ ನೀಡಬಹುದು ಅಥವಾ HP Pay ಅಪ್ಲಿಕೇಶನ್‌ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.
ಕುತ್ತಾರು : ಇತ್ತೀಚೆಗೆ ಕದ್ರಿಯಲ್ಲಿ ನಡೆದ ಪುತ್ತಿಲ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ಮತ್ತು ಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಕುತ್ತಾರ್ ಟೀಮ್ ವೈ.ಕೆ. ಮಲ್ಟಿ ಜಿಮ್ ನ ಮೂವರು ಸದಸ್ಯರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.60 ಕೆಜಿ ವಿಭಾಗದಲ್ಲಿ ಸಾಜನ್ ಪ್ರಕಾಶ್ ನಗರ ಇವರು ದ್ವಿತೀಯ ಸ್ಥಾನ ಹಾಗೂ ಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ 65 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಬೆದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ನಿಕೀತ್ ಶೆಟ್ಟಿ ಇವರು 4 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರೆಲ್ಲರೂ ವೈ.ಕೆ.ಮಲ್ಟಿ ಜಿಮ್ ನ ಸದಸ್ಯರಾಗಿದ್ದು, ನವೀನ್ ಕುಲಾಲ್ ಅವರಿಂದ ತರಬೇತಿ ಪಡೆದುಕೊಂಡವರಾಗಿದ್ದಾರೆ.
ತೊಕ್ಕೊಟ್ಟು: ಮಹಿಳೆಯರ ಆರೈಕೆಗೆ ವಿಶೇಷವಾಗಿ ತಹಾನಿ’ಸ್ ಬ್ಯೂಟಿ ಲಾಂಜ್ ತೊಕ್ಕೊಟ್ಟುವಿನ ಗ್ರಾಂಡ್ ಸಿಟಿ ಎ ಬ್ಲಾಕ್, ಶಾಪ್ ನಂ. G-36 ನಲ್ಲಿ ಶುಭಾರಂಭಗೊಂಡಿದೆ. ಈ ಸಂಸ್ಥೆ ಪ್ರೊಫೆಷನಲ್ ಲೇಡಿಸ್ ಸೆಲೂನ್ ಮತ್ತು ಮೆಕಪ್ ಸ್ಟುಡಿಯೋಯನ್ನು ಹೊಂದಿದ್ದು, ಹೊಸ ತಂತ್ರಜ್ಞಾನ ಮತ್ತು ತಜ್ಞರೊಂದಿಗೆ ಸೇವೆ ನೀಡುತ್ತಿದೆ. ಉಲ್ಲೇಖನೀಯ ಸೇವೆಗಳು: ✔ ಹೇರ್ ಕಟಿಂಗ್ & ಸ್ಟೈಲಿಂಗ್ – ಅನುಭವೀ ತಜ್ಞರಿಂದ ಹೇರಳವಾದ ಆಯ್ಕೆ.✔ ಫೇಶಿಯಲ್ & ಸ್ಕಿನ್ ಕೇರ್ – ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳ ಬಳಕೆ.✔ ಮೇಕಪ್ ಸ್ಟುಡಿಯೋ – ವೈವಿಧ್ಯಮಯ ವಿಶೇಷ ಶೃಂಗಾರ ಸೇವೆ, ವಿವಾಹ ಹಾಗೂ ಫ್ಯಾಷನ್ ಮೇಕಪ್.✔ ಬ್ರೈಡಲ್ & ಪಾರ್ಟಿ ಮೇಕಪ್ – ಪ್ರೊಫೆಷನಲ್ ಶೃಂಗಾರದೊಂದಿಗೆ ಮನಮೋಹಕ ಲುಕ್. ನೈಪುಣ್ಯತೆ, ಗುಣಮಟ್ಟ ಮತ್ತು ಸಮಗ್ರ ಆರೈಕೆಗೆ ಆದ್ಯತೆ ನೀಡುತ್ತಿದ್ದು, ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತೇವೆ. ಹೆಚ್ಚಿನ ಮಾಹಿತಿಗೆ ಹಾಗೂ ಸೇವೆಗಳನ್ನು ಪಡೆಯಲು ತಹಾನಿ’ಸ್ ಬ್ಯೂಟಿ ಲಾಂಜ್‌ಗೆ ಭೇಟಿ ನೀಡಬಹುದು.