Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ಡೆಸ್ಕ್ ಮುಡಿಪು: ಇಲ್ಲಿನ ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್‍ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು ಶಾಲೆಗೆ ಮುತ್ತಿಗೆ ಹಾಕಿರುವ ಘಟನೆ ಮುಡಿಪುವಿನಲ್ಲಿ ನಡೆದಿದೆ. ಹಿಂದಿನ ವರ್ಷಕ್ಕಿಂತ ರೂ. ೫೦೦೦ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಶಾಲಾ ಆಡಳಿತ ಮ ಂಡಳಿ ಹೆತ್ತವರಿಗೆ ಸೂಚಿಸಿತ್ತು. ಆದರೆ ಏಕಾಏಕಿ ಶುಲ್ಕ ಏರಿಕೆಯನ್ನು ಖಂಡಿಸಿದ ವಿದ್ಯಾರ್ಥಿಗಳ ಹೆತ್ತವರು ಸುಮಾರು ೧೦೦ ರಷ್ಟು ಜನ ಮುಡಿಪುವಿನ ಶಾಲೆ ಮುಂದೆ ಜಮಾಯಿಸಿ ಶುಲ್ಕ ಏರಿಕೆಯನ್ನು ವಿರೋಧಿಸಿದರು. ಅಲ್ಲದೆ ಶಾಲಾ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಶಾಲಾ ಚೇರ್‌ಮೆನ್ ಮಂಜುನಾಥ್ ರೇವಣಕರ್ ಹೆತ್ತವರನ್ನು ಸಮಾಧಾನಿಸಿ ಶುಲ್ಕ ಏರಿಕೆಯನ್ನು ಸಮರ್ಥಿಸಿಕೊಂಡರು. ಆದರೆ ಹೆತ್ತವರು ಮಕ್ಕಳಿಗೆ ಟಿ.ಸಿ ಕೊಟ್ಟಲ್ಲಿ ಅವರನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸುವುದಾಗಿಯೂ ಹೇಳಿದರು. ಅಲ್ಲದೆ ಇತ್ತೀಚೆಗೆ ಪಿ.ಯು. ಕಾಲೇಜು ಆರಂಭವಾಗಿದ್ದು, ಅದರ ಹಣ ಭರಿಸಲು ಹೆಚ್ಚುವರಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ ವೃತ್ತಿ ಕೇವಲ ಹಣ ಗಳಿಸುವ ಯಂತ್ರವಲ್ಲ ಎನ್ನುವ ಮಾತನ್ನು ನಿಟ್ಟೆ ವಿಶ್ವವಿದ್ಯಾಲಯದ ವೈದ್ಯರು ಸುಳ್ಳಾಗಿಸಿದ್ದಾರೆ. ಅದರಲ್ಲೂ ಯುವ ವೈದ್ಯರು ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ಶ್ಲಾಘನೀಯ. ಆ ಮೂಲಕ ನಿಟ್ಟೆ ವಿವಿಯ ಕೀರ್ತಿ ಪತಾಕೆಯನ್ನು ಹಿಮಾಲಯದ ತಪ್ಪಲಲ್ಲಿ ಹಾರಿಸಿರುವುದು ಅಭಿನಂದನೀಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು. ಭೂಕಂಪ ಪೀಡಿತ ನೇಪಾಳದಲ್ಲಿ ನರಳುತ್ತಿರುವ ಜನರಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಲ್ಲಿಗೆ ತೆರಳಿದ್ದ ಚಿಕಿತ್ಸೆ ನೀಡಿದ ನಿಟ್ಟೆ ವಿಶ್ವವಿದ್ಯಾಲಯ ವೈದ್ಯರ ತಂಡಕ್ಕೆ ಶುಕ್ರವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ತಂಡದ ನೇತೃತ್ವ ವಹಿಸಿದ್ದ ಡಾ. ಸತೀಶ್ ರಾವ್ ಮಾತನಾಡಿ ಏ. ೨೭ರಂದು ಭೂಕಂಪ ಪೀಡಿತಪೀಡಿತ ನೇಪಾಳದಲ್ಲಿ ತುರ್ತು ಚಿಕಿತ್ಸೆ ನಿಟ್ಟಿನಲ್ಲಿ ತಂಡ ರಚಿಸುವಂತೆ ನಿಟ್ಟೆ ಕುಲಾಧಿಪತಿ ಹೇಳಿದರು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಮಾರಿ ರೂಪ ಆಂಬ್ಲಮೊಗರು ಇವರ ಮದುವೆ ಕಾರ್ಯಕ್ರಮಕ್ಕೆ ದಾನಿಗಳ ನೆರವಿನಿಂದ ಸಂಗ್ರಹಿಸಿದ ಸಹಾಯಧನವನ್ನು ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ (ರಿ) ಕುಂಪಲ ಇದರ ವತಿಯಿಂದ ಚೆಕ್ ಮುಖೇನ ಹಸ್ತಾಂತರಿಸುವ ಕಾರ್ಯಕ್ರಮ ಕೇಸರಿ ಸಭಾ ಭವನದಲ್ಲಿ ನಡೆಯಿತು. ಕೇಸರಿ ಮಿತ್ರ ವೃಂದದ ಅಧ್ಯಕ್ಷರಾದ ಸತ್ಯನಾರಾಯಣ ಹೂಡೆ, ಮಾಜಿ ಅಧ್ಯಕ್ಷರಾದ ಬಿ.ನಾರಾಯಣ ಕುಂಪಲ ಚೆಕ್ ಹಸ್ತಾಂತರಿಸಿದರು. ಕಾರ್ಯದರ್ಶಿ ನವೀನ್ ಕುಂಪಲ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ಚಂದ್ರ ಕುಂಪಲ ಈ ಸಂದರ್ಭದಲ್ಲಿ ಉಪಸ್ಥಿತರಿದದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನದಲ್ಲಿ ತಾರತಮ್ಯ, ಟೆಂಡರ್ ಕರೆಯದೆ ಒಪ್ಪಂದ ಮತ್ತು ಸಿಆರ್ ಝೆಡ್ ಗೆ ಒಳಪಡುವ ಮನೆಗಳಿಗೆ ಡೋರ್ ನಂಬರ್ ನೀಡದೇ ಇರುವ ಕುರಿತು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರುಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಪ್ರತಿಪಕ್ಷ ನಾಯಕಿ ಮಹಾಲಕ್ಷ್ಮೀ ಮಾತನಾಡಿ ಉಳ್ಳಾಲ ನಗರಸಭೆಯಾದ್ಯಂತ ನಡೆದಿರುವ ಕಾಮಗಾರಿಗಳ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆದಿದೆ.ಆಡಳಿತದಲ್ಲಿರುವವರ ಕಡೆ ಹೆಚ್ಚಿನ ಒಲವು ತೋರಿಸಿ ಕಾಮಗಾರಿ ನಡೆದಿರುವುದು ಖಂಡನೀಯ ಎಂದು ಆರೋಪಿಸಿದ ಅವರಿಗೆ ಸದಸ್ಯರಾದ ಶಶಿಕಲಾ, ಪೊಡಿಮೋನು, ಹನೀಫ್ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ದಿನೇಶ್ ರೈ, ಫಾರುಕ್ ಉಳ್ಳಾಲ್, ಬಾಝಿಲ್ ಡಿಸೋಜಾ ಅವರು ಉರೂಸಿನಿಂದಾಗಿ ಹಲವೆಡೆ ನಡೆಯಬೇಕಾದ ಕಾಮಗಾರಿ ವಿಳಂಬವಾಗಿದೆ. ಎಲ್ಲಾ ಕಡೆ ಸಮಾನವಾಗಿ ಅನುದಾನವನ್ನು ನಗರಸಭೆ ಅಧಿಕೃತರು ಹಂಚಿದ್ದಾರೆ. ಅದರಲ್ಲಿ ರಾಜಕೀಯ ಮಾಡಿ, ಅಭಿವೃದ್ಧಿಯನ್ನು ಕುಂಠಿತಗೊಳಿಸಬಾರದು ಎಂದರು. ಇದಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಗಿರಿಜಾ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ ಘಟನೆ ಬೆಳಕಿಗೆ ಬಂದಿದೆ. ಸರಸ್ವತಿ, ರಾಜೇಶ್(೨೨), ರಾಜಿ(೨೫), ರತಿ(೨೩), ರಾಕೇಶ್(೧೮) ಎಂಬವರೇ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರಾಗಿದ್ದಾರೆ. ಬುಧವಾರದಂದು ಕೊಣಾಜೆಯ ಮನೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ಕ್ರಿಶ್ಚಿಯನ್ ಕುಟುಂಬದ ಐದು ಜನ ಸದಸ್ಯರೂ ಕೂಡಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೇರಳದ ಕೊಲ್ಲಂ ಬಳಿ ವಾಸವಾಗಿದ್ದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ರಾಜು ಎಂಬವರು ತನ್ನ ಮನೆ ಸಮೀಪದ ಹಿಂದು ಧರ್ಮದ ಸರಸ್ವತಿ ಎಂಬವರನ್ನು ಸುಮಾರು ೩೦ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ಹಿಂದೂ ಧರ್ಮಕ್ಕೆ ಸೇರುತ್ತೇನೆ ಎಂದು ಹೇಳಿದ್ದ ರಾಜು ಅವರು ಬಳಿಕ ಪತ್ನಿ ಸರಸ್ವತಿ ಅವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್(ರಿ) ದಲಿತ ಸಂಘರ್ಷ ಸಮಿತಿ ಉಳ್ಳಾಲ ಶಾಖೆ ಹಾಗೂ ಬೀಮ್ ಮಲ್ಟಿಜಿಮ್ ಇದರ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಡಾ. ಸುಜಾತ ಸ್ಮಾರಕ ರಂಗಮಂದಿರದಲ್ಲಿ ಇತ್ತೀಚೆಗೆ ಜರುಗಿತು. ನಗರಸಭೆ ಮುಖ್ಯಾಧಿಕಾರಿ ರೂಪ ಡಿ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ.ದ ಜಿಲ್ಲಾ ಸಂಚಾಲಕ ಆನಂದ್ ಬೆಳ್ಳಾರ್ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ದ.ಸಂ.ಸ.ದ ರಾಜ್ಯ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಅಂಬೇಡ್ಕರ್ ರವರ ವಿಚಾರಧಾರೆ ಹಾಗೂ ಪ್ರಸುತ್ತ ದಲಿತ ಸ್ಥಿತಿಗತಿಗಳ ಕುರಿತು ವಿಮರ್ಶಾತ್ಮಕವಾಗಿ ಮಾತಾನಾಡಿದರು. ಉಳ್ಳಾಲ ಆರಕ್ಷಕ ಠಾಣೆಯ ನಿರೀಕ್ಷಕರಾದ ಸವಿತ್ರ ತೇಜ್ ದ.ಸಂ.ಸ.ದ ಉಳ್ಳಾಲ ಶಾಖೆಯ ನೂತನ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೆರಸಿದರು. ಮುಖ್ಯ ಅತಿಥಿಗಳಾಗಿ ಅಂಚೆ ಇಲಾಖೆ ನೌಕರ ಮುಖಂಡ ನಾಗೇಶ ಹೆಗ್ಡೆ, ಸಾರಿಗೆ ಉದ್ಯಮಿ ಲಯನ್ ಹರೀಶ್ ರಾವ್, ಉಯಮಿ ಸಂದೀಪ್ ಪಂಪ್ ವೆಲ್, ದ.ಸಂ.ಸ ಉಳ್ಳಾಲ ಶಾಖೆಯ ಸಂಚಾಲಕ ಪ್ರಕಾಶ್ ಎಸ್. ಕಾರ್ಯಕ್ರಮದಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ :ಬೆಳ್ಮ ಬಂಡಿಯೆಂದು ಖ್ಯಾತಿಯಾಗಿರುವ ಮಂಗಳೂರಿನ ಕೊಣಾಜೆ ಸಮೀಪದ ಬೆಳ್ಮ  ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರೆಯು ಮೇ 2ರಿಂದ ಮೇ6ರವರೆಗೆ ವಿಜೃಂಭಣೆಯಿಂದ ಜರುಗಿತು. ಚಿತ್ರ:  ರಾಕೇಶ್ ಕೊಣಾಜೆ

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಇಲ್ಲಿನ ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಟಿಪ್ಪು ಸುಲ್ತಾನ್ ಕಾಲೇಜು ಇದರ ಆಶ್ರಯದಲ್ಲಿ ಮೇ.೧೩ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ೧೦ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾದ ಮೇಳದಲ್ಲಿ ಪ್ರಖ್ಯಾತ ೫೦ ಕಂಪೆನಿಗಳು ಭಾಗವಹಿಸಲಿದ್ದು, ಖಾಲಿ ಇರುವ ಸುಮಾರು ೧೦೦೦ ಉದ್ಯೋಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕನಿಷ್ಟ ೫ ಸಿ.ವಿಯನ್ನು ಅಭ್ಯರ್ಥಿಗಳು ತರಬೇಕು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಡಿ.ಬಿ. ಮೊದಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಮುಡಿಪು: ಗೋಮಾತೆ, ನದಿಗಳು ಎಲ್ಲವೂ ಪರೋಪಕಾರವನ್ನೇ ಮಾಡುತ್ತಿದೆ. ಹಸು ಕರುವಿಗೆ ಉಣಿಸಬೇಕಾದ ಹಾಲನ್ನು ಯಜಮಾನನಿಗೆ ಕೊಡುತ್ತಾ ಅವನ ಸಂಸಾರ ಸಾಗರಕ್ಕೆ ಸುಖ ಕರುಣಿಸುತ್ತದೆ. ಎಲ್ಲೋ ಹುಟ್ಟಿ ಕಡಲು ಸೇರುವ ನದಿ ಆ ನಡುವೆ ಅದೆಷ್ಟೋ ಜನರ ಬದುಕನ್ನು ಹಸನಾಗಿಸುತ್ತದೆ. ಎಲ್ಲದರ ಹಿಂದೆಯೂ ಪರೋಪಕಾರ ಅಡಗಿದೆ. ಹಾಗಾಗಿ ಈ ಜಗತ್ತಿನಲ್ಲಿ ಕೆಲವೇ ದಿನಗಳ ಬದುಕು ನಡೆಸುವ ಅವಕಾಶ ಪಡೆದಿರುವ ನಾವು ಆ ಬದುಕಿಗೆ ಒಂದು ಅರ್ಥ ಬರಬೇಕಾದರೆ ಸಾರ್ಥಕ್ಯ ಸಿಗಬೇಕಾದರೆ ಏನಾದರೂ ಪರೋಪಕಾರ ಮಾಡುತ್ತಿರಬೇಕು ಎಂದು ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಹೇಳಿದರು. ಅವರು ಮೊಂಟೆಪದವು ಶಾಂತನಗರದ ಶ್ರೀ ವೀರಮಾರುತಿ ಮಂದಿರ ಮತ್ತು ವೀರಮಾರುತಿ ವ್ಯಾಯಾಮ ಶಾಲೆಯ ಒಂಬತ್ತನೆಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಪ್ರಕೃತಿ ಮಾತೆಯ ಸೃಷ್ಟಿಯನ್ನು ಅಧ್ಯಯನ ಮಾಡುತ್ತಾ ಸಾಗಿದರೆ ಎಷ್ಟೊಂದು ಅದ್ಭುತವಾದ, ವೈeನಿಕ ಸತ್ಯ ಅಡಗಿದೆಯೆಂದರೆ ಹುಲಿಯ ಕರುಳು ೧೫ಮೀ. ಉದ್ದವಿರುವುದರಿಂದ ಅದು…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿಯವರ ಏಜೆಂಟರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಲೇವಡಿಯಾಡಿದರು. ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರಕಾರವನ್ನು ಮೂರು ಸಚಿವರು ನಡೆಸುತ್ತಿದ್ದಾರೆ. ಮೋದಿ, ಅಮಿತ್ ಷಾ ಮತ್ತು ಅರುಣ್ ಜೇಟ್ಲಿ ಮಾತ್ರ. ಉಳಿದ ಸಚಿವರು ಮತ್ತು ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿಯವರು ಎಲ್ಲಿದ್ದಾರೆ ಎಂಬುದು ನಿಗೂಢವಾಗಿದೆ. ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸುವ ಮುನ್ನ ತಮ್ಮನ್ನು ಅರಿತುಕೊಳ್ಳಬೇಕಿದೆ. ಪಾರ್ಲಿಮೆಂಟಿನಲ್ಲಿ ಚರ್ಚೆಯನ್ನು ಎದುರಿಸಲಾಗದ ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಂಡು ಕಾಲಹರಣ ಮಾಡುತ್ತಿದ್ದಾರೆ. ಅದಕ್ಕಾಗಿ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಮೋದಿ ಭೇಟಿಗೆ ಮುನ್ನ , ವಿದೇಶಕ್ಕೆ…

Read More