ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್(ರಿ) ದಲಿತ ಸಂಘರ್ಷ ಸಮಿತಿ ಉಳ್ಳಾಲ ಶಾಖೆ ಹಾಗೂ ಬೀಮ್ ಮಲ್ಟಿಜಿಮ್ ಇದರ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಡಾ. ಸುಜಾತ ಸ್ಮಾರಕ ರಂಗಮಂದಿರದಲ್ಲಿ ಇತ್ತೀಚೆಗೆ ಜರುಗಿತು.
ನಗರಸಭೆ ಮುಖ್ಯಾಧಿಕಾರಿ ರೂಪ ಡಿ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ.ದ ಜಿಲ್ಲಾ ಸಂಚಾಲಕ ಆನಂದ್ ಬೆಳ್ಳಾರ್ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ದ.ಸಂ.ಸ.ದ ರಾಜ್ಯ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಅಂಬೇಡ್ಕರ್ ರವರ ವಿಚಾರಧಾರೆ ಹಾಗೂ ಪ್ರಸುತ್ತ ದಲಿತ ಸ್ಥಿತಿಗತಿಗಳ ಕುರಿತು ವಿಮರ್ಶಾತ್ಮಕವಾಗಿ ಮಾತಾನಾಡಿದರು. ಉಳ್ಳಾಲ ಆರಕ್ಷಕ ಠಾಣೆಯ ನಿರೀಕ್ಷಕರಾದ ಸವಿತ್ರ ತೇಜ್ ದ.ಸಂ.ಸ.ದ ಉಳ್ಳಾಲ ಶಾಖೆಯ ನೂತನ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೆರಸಿದರು.
ಮುಖ್ಯ ಅತಿಥಿಗಳಾಗಿ ಅಂಚೆ ಇಲಾಖೆ ನೌಕರ ಮುಖಂಡ ನಾಗೇಶ ಹೆಗ್ಡೆ, ಸಾರಿಗೆ ಉದ್ಯಮಿ ಲಯನ್ ಹರೀಶ್ ರಾವ್, ಉಯಮಿ ಸಂದೀಪ್ ಪಂಪ್ ವೆಲ್, ದ.ಸಂ.ಸ ಉಳ್ಳಾಲ ಶಾಖೆಯ ಸಂಚಾಲಕ ಪ್ರಕಾಶ್ ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಕುಮಾರ್ ಸ್ವಾಗತಿಸಿದರು. ಸುದರ್ಶನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.



