ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ : ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಯು ತನ್ನದಾಗಿಸಿಕೊಂಡಿದ್ದು, ಹಿಂದೆ ಉಪಾಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸುರೇಶ್ ಆಳ್ವ ಅಧ್ಯಕ್ಷರಾಗಿ ಹಾಗೂ ಅದೇ ಪಕ್ಷದ ಜಯಲಕ್ಷ್ಮೀ.ಟಿ. ಉಪಾಧ್ಯಕ್ಷೆಯಾಗಿ ಬುಧವಾರ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು. ತಲಪಾಡಿ ಪಂ.ಗೆ ನಡೆದ ಚುನಾವಣೆಯಲ್ಲಿ ೨೪ ವಾರ್ಡುಗಳಲ್ಲಿ ೧೨ ಬಿಜೆಪಿ ಬೆಂಬಲಿತ, ೯ ಕಾಂಗ್ರೆಸ್ ಬೆಂಬಲಿತ ಹಾಗೂ ೩ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಬುಧವಾರ ಅಧ್ಯಕ್ಷ ಹುದ್ದೆಗೆ ನಡೆದ ಸುರೇಶ್ ಆಳ್ವ ಅವರಿಗೆ ಕಾಂಗ್ರೆಸ್ನ ವೈಭವ್ ಶೆಟ್ಟಿ ಎದುರಾಳಿಯಾಗಿ ನಿಂತಿದ್ದರು. ಸುರೇಶ್ ಅವರು ೧೪ ಸದಸ್ಯರ ಬೆಂಬಲ ಪಡೆದುಕೊಂಡು ಜಯಗಳಿಸಿದರೆ , ವೈಭವ್ ಶೆಟ್ಟಿ ೧೦ ಮಂದಿಯ ಬೆಂಬಲವನ್ನು ಪಡೆದುಕೊಂಡರು. ವಿಶೇಷವೆಂದರೆ ಮೂವರು ಪಕ್ಷೇತರರಲ್ಲಿ ಇಬ್ಬರು ಕಾಂಗ್ರೆಸ್ ಪರವಾಗಿದ್ದರೆ, ಓರ್ವ ಮಾತ್ರ ಬಿಜೆಪಿ ಪರವಾಗಿದ್ದರು. ಆದರೆ ಕಾಂಗ್ರೆಸ್ನ ಓರ್ವ ಸದಸ್ಯರು ಅಡ್ಡ ಮತ ಚಲಾಯಿಸಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಹಿನ್ನೆಡೆಯಾಯಿತು. ಉಪಾಧ್ಯಕ್ಷೆ ಸ್ಥಾನಕ್ಕೆ ಜಯಲಕ್ಷ್ಮೀ.ಟಿ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಸೇವೆಯುದ್ದಕ್ಕೂ ಮಾನವೀಯತೆಯ ಮೌಲ್ಯವನ್ನು ಸಾರಿದ ಡಾ.ಬಿ.ಸಿ.ರಾಯ್ ಅವರ ಕಾರ್ಯವೈಖರಿ ಎಲ್ಲಾ ವೈದ್ಯರಿಗೂ ಮಾದರಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ. ಡಾ. ಬಿ.ಸಿ.ರಾಯ್ ಜನ್ಮ ದಿನದ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸೆಮಿನಾರ್ ಹಾಲ್ನಲ್ಲಿ ಬುಧವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯನಾಗಿದ್ದುಕೊಂಡು ರಾಜಕೀಯ ನೇತಾರನಾಗಿದ್ದ ಡಾ.ಬಿ.ಸಿ.ರಾಯ್ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನ ವೃದ್ಧಿಸಿಕೊಂಡವರು. ನ್ಯಾಯಯುತವಾಗಿ ಬಾಳಿದ ಅವರು ಜನರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿಯೂ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರನ್ನು ಮಾದರಿಯಾಗಿಸಿಕೊಂಡು ವೈದ್ಯರಾದರು ತಾವು ನೀಡುವ ಸೇವೆಯಿಂದ ರೋಗಿ ಗುಣಮುಖನಾದರೆ ಅವರಿಗೆ ಅದರಿಂದ ಸಿಗುವ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಬೇರೆ ಎಲ್ಲ ಸಂಪತ್ತಿಗಿಂತ ದೊಡ್ಡದು ಎಂಬುದನ್ನು ಅರಿತುಕೊಳ್ಳಬೇಕಿದೆ. ವೈದ್ಯಕೀಯ ಲೋಕದಲ್ಲಿ ರೋಗಿಗಳಿಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯಿಂದ ವೈದ್ಯ ದಿನಾಚರಣೆಯಲ್ಲಿ ಸನ್ಮಾನಗೊಂಡ ಖ್ಯಾತ ವೈದ್ಯರಾದ ಡಾ.ಡಿ.ಕೆ.ಶ್ರೀನಿವಾಸ್ ಹಾಗೂ ಫ್ಲೈಟ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಸಮೀಪದ ಜೋಡುಕಟ್ಟೆ ಎಂಬಲ್ಲಿ ಹಾರ್ಡ್‍ವೇರ್ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 35 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಹರೇಕಳ ಕಿಸಾನ್‍ನಗರ ನಿವಾಸಿ ಸಾಹುಲ್ ಹಮೀದ್ ಎಂಬವರಿಗೆ ಸೇರಿದ ಹಾರ್ಡ್‍ವೇರ್ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಗೆ ಕಾರಣಗಳು ತಿಳಿದು ಬಂದಿಲ್ಲ. ಬಡ ಕುಟುಂಬದಿಂದ ಬಂದಿರುವ ಸಾಹುಲ್ ಹಮೀದ್ ತನ್ನ ಸಹೋದರರೊಂದಿಗೆ ಸೇರಿ ಕಳೆದ ಎರಡು ವರ್ಷಗಳಿಂದ ಶ್ರಮ ವಹಿಸಿ ಅಂಗಡಿ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರತೀ ದಿನ ಅಂಗಡಿ ಮುಚ್ಚುವಾಗ ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಹೋಗುತ್ತಿದ್ದುದಾಗಿ ತಿಳಿಸಿರುವ ಅವರು ಸಾರ್ಟ್ ಸರ್ಕ್ಯುಟ್‍ನಿಂದ ಬೆಂಕಿ ಅವಘಡ ಆಗಿರುವ ಸಾದ್ಯತೆ ಇಲ್ಲ ಎಂದಿದ್ದಾರೆ. ಬುಧವಾರ ನಸುಕಿನ ವೇಳೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅದಾಗಲೇ ಬೆಂಕಿಯಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು. ಬೆಂಕಿ ಹಚ್ಚಿರುವ ಸಾಧ್ಯತೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಬಳಿ ಸ್ಟುಡಿಯೋ, ಮೊಬೈಲ್ ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಲೇಡಿಸ್ ಹಾಸ್ಟೆಲ್ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರು ಪತ್ರಿಕಾ ಛಾಯಾಗ್ರಾಹಕ ಅಪುಲ್ ಇರಾ ಅವರ ಅಮ್ಮ ಸ್ಟುಡಿಯೋದಿಂದ 2 ಲಕ್ಷ ರೂ. ಬೆಲೆ ಬಾಳುವ ಮೂರು ಎಸ್‍ಎಲ್‍ಆರ್ ಕ್ಯಾಮರ, ಸಹಲ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿ ಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಮೊಬೈಲ್, ಚಾರ್ಜರ್‍ಗಳು, ಹರೀಶ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ 20 ಸಾವಿರ ಮೌಲ್ಯದ ಮೊಬೈಲ್, ರವಿ ಜೆರಾಕ್ಸ್, ಮಹಮ್ಮದ್ ಎನ್.ಕೆ. ಅವರ ಜಿನಸು ಅಂಗಡಿ, ಸಾದಿಕ್ ಎಂಬವರ ಬೇಕರಿ,ಐಡಿಯಲ್ ಜ್ಯೂಸ್ ಸೆಂಟರ್‍ನಿಂದ ನಗದು ಹಣ ಮತ್ತು ಸಿಗರೇಟ್ ಪ್ಯಾಕೇಟ್‍ಗಳು ಕಳವಾಗಿದೆ. ಹೆಚ್ಚಿನ ಅಂಗಡಿಗಳ ಷಟರ್ ಒಡೆದು ಒಳ ನುಗ್ಗಿರುವ ಕಳ್ಳರು ಕೆಲವೆಡೆ ಬೆರಳಚ್ಚು ಗೊತ್ತಾಗದಂತೆ ಕೆಮಿಕಲ್ ಹಾಕಿರುವ…
ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ: ಶಾಲಾ ವಿದ್ಯಾರ್ಥಿಗಳಿಗೆ ಒಂದೆಡೆ ಪಾಠ ಪ್ರವಚನ. ಇನ್ನೊಂದೆಡೆ ಆಟದ ಮೈದಾನದಲ್ಲಿ ವಿವಿಧ ಕ್ರೀಡಾ ಚಟುವಟಿಕೆ ಇದರ ಮಧ್ಯೆ ಕೆಸರಿನ ಪಾಠದೊಂದಿಗೆ ಆಟ ಇಂತಹ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜಿಸಿದ್ದು ಕೊಣಾಜೆ ಸಮೀಪದ ಪರಂಡೆಯ ಕೆಸರು ತುಂಬಿದ ಗದ್ದೆಯಲ್ಲಿ . ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹೊಸ ಹುರುಪಿನೊಂದಿಗೆ ಭಾನುವಾರ ಇಡೀ ದಿನ, ಹಗ್ಗ ಎಳೆದು, ಮಡಿಕೆ ಒಡೆದು, ಗದ್ದೆ ಪೂರ್ತಿ ಓಡಾಡಿ ಕುಣಿದು ಕುಪ್ಪಳಿಸಿದರು. ಇದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಕಂಡು ಬಂದ ದೃಶ್ಯ ಮಂಗಳೂರು ತಾಲೂಕಿನ 12 ಶಾಲೆಗಳ ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು…
ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ : ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡುವ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಒಂದು ಉತ್ತಮ ಕಾರ್ಯವಾಗಿದ್ದು, ಮುಂದಿನ ಪೀಳಿಗೆಗೆ ಕೃಷಿ ಜೀವನವನ್ನು ತಿಳಿಸಿಕೊಡುವ ಮೂಲಕ ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು. ಅವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ಪ್ರಶಾಂತ್…
ತಲಪಾಡಿ: ಅವರದ್ದು ಈಗಲೂ ಬಿದಿರು ಮತ್ತು ಸಲಾಕೆಗೆ ಹೆಂಚನ್ನು ಹೊದಿಕೆಯಾಗಿಸಿದ ಮನೆ. ಆ ಮನೆಯಲ್ಲಿ ಶಾರೀರಿಕ ದುರ್ಬಲರಾಗಿರುವ ಇಬ್ಬರು ಹೆಣ್ಮಕ್ಕಳು , ಮಾನಸಿಕ ಅಸ್ವಸ್ಥೆಯುಳ್ಳ ಓರ್ವ ಗಂಡು ಮಗು. ಮನೆ ಯಜಮಾನ ವೃದ್ದಾಪ್ಯದಲ್ಲೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರೆ, ಮನೆಯೊಡತಿ ಮಕ್ಕಳ ತಾಯಿ ಬೀಡಿ ಕಟ್ಟಿ ಪತಿಗೆ ಕುಟುಂಬ ನಿರ್ವಹಣೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಅವ್ಯವಸ್ಥೆಯಲ್ಲಿರುವ ಮನೆಯ ದುರಸ್ತಿಗೆ ಸರಕಾರ ಮುಂದೆ ಬರಬೇಕು ಎಂದು ಉಳ್ಳಾಲದ ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ. ತಲಪಾಡಿ ತಚ್ಚಣಿ ಎಂಬಲ್ಲಿ ವಾಸವಾಗಿರುವ ದಲಿತ ಕುಟುಂಬದ ಶ್ರೀನಿವಾಸ ಅವರಿಗೆ ಇರುವ ಇಬ್ಬರು ಹದಿಹರೆಯದ ಹೆಣ್ಮಕ್ಕಳು ಶಾರೀರಿಕವಾಗಿ ದುರ್ಬಲರಾದರೆ, ಓರ್ವ ಪುತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಕಳೆದ 40 ವರ್ಷಗಳಿಂದ ಬಡ ಕುಟುಂಬ ಸರಕಾರ ನೀಡಿದ ದರ್ಖಾಸ್ತು ಭೂಮಿಯಲ್ಲಿ ನಾದುರಸ್ತಿಯಲ್ಲಿರುವ ಮನೆಯಲ್ಲಿ ಬದುಕುತ್ತಿದೆ. ಕಿರಿದಾಗಿರುವ ಮನೆಗೆ ಬಿದಿರು ಮತ್ತು ಸಲಾಕೆಯಿಂದ ನಿರ್ಮಿಸಿದ ಹಂಚಿನ ಹೊದಿಕೆ ಇದೆ. ಬಹುತೇಕ ಮನೆಯ ಹೆಂಚುಗಳು ಹಾರಿ ಹೋಗಿ ಮಾಡು ತುಂಡಾಗಿ ಇಂದೋ ನಾಳೆಯೋ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಕೆಸರು ಗದ್ದೆಯಲ್ಲಿ ನಡೆದ ಹಗ್ಗಜಗ್ಗಾಟ ಆಟದ ವೇಳೆ ಹಗ್ಗ ತುಂಡಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೆಸರಲ್ಲಿ ಬಿದ್ದು ಒದ್ದಾಡಿದ ಅಪರೂಪದ ಘಟನೆ ಕೊಣಾಜೆ ಪರಂಡೆಯ ಯು.ಬಿ.ಎಂ.ಸಿ ಶಾಲೆಯ ಸಮೀಪದ ಗದ್ದೆಯಲ್ಲಿ ಭಾನುವಾರ ನಡೆದಿದೆ. ಕೊಣಾಜೆ ಗ್ರಾಮದಲ್ಲಿ ಹರೇಕಳದ ರಾಮಕೃಷ್ಣ ಫ್ರೌಢಶಾಲೆಯ ವತಿಯಿಂದ ಸ್ಕೌಟ್ ಮತ್ತು ಗೈಡ್ ನ ಮಕ್ಕಳಿಗಾಗಿ ಕೆಸರುಗದ್ದೆ ಆಟವನ್ನ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಯು.ಟಿ.ಖಾದರ್ ಸಾಹೇಬರು ಮಕ್ಕಳ ಮತ್ತು ಆಯೋಜಕರ ಒತ್ತಾಯಕ್ಕೆ ಮಣಿದು ಕೆಸರಿಗೆ ಇಳಿದ್ರು. ಈ ವೇಳೆ ಹಗ್ಗ ಜಗ್ಗಾಟಕ್ಕೆ ಸಿದ್ದರಾದ ಖಾದರ್ ಗೆ ಮಕ್ಕಳು ಕೂಡ ಸಾಥ್ ನೀಡಿದ್ರು. ಕೆಸರಿನಲ್ಲಿ ಮಜಾಮಾಡಿದ ಖಾದರ್ ಹಗ್ಗ ಎಳೀತಾ ಇದ್ದ ಸಂದರ್ಭದಲ್ಲಿ ಹಗ್ಗವೇ ತುಂಡಾದ ಪರಿಣಾಮ ಕೆಸರಿನಲ್ಲಿ ಬಿದ್ದು ಒದ್ದಾಡಿದ್ರು. ದಿನವಿಡೀ ಜಂಜಾಟದಲ್ಲೇ ಇರೋ ಆರೋಗ್ಯ ಸಚಿವರು ಇಂದು ಮಾತ್ರ ಕೆಸರಿನ ಗದ್ದೆಗೆ ಇಳಿದು ಮಜಾ ಮಾಡಿದ್ರು. ಇನ್ನು ಆರೋಗ್ಯ ಸಚಿವರೇ ಈ ಮಟ್ಟಿಗೆ ಎಂಜಾಯ್ ಮಾಡಿದ್ದನ್ನ ನೋಡಿದ ಮಕ್ಕಳು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಮರ್ದಿತರ, ಶೋಷಿತರ ದಮನಿತರ ಮತ್ತು ಅವಕಾಶ ವಂಚಿತರ ಪರವಾಗಿ ಮತ್ತು ದೇಶದ ಸಮಾನ ನ್ಯಾಯ ರಕ್ಷಣೆಗಾಗಿ ಎಸ್ ಡಿ ಪಿ ಐ ಹೋರಾಟ ನಡೆಸುವ ಪಕ್ಷವಾಗಿದೆ ಎಂದು ಎಸ್ ಡಿ ಪಿ ಐ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಎ ಆರ್ ಹೇಳಿದ್ದಾರೆ. ಅವರು ಎಸ್ ಡಿ ಪಿ ಐ ಸಂಸ್ಥಾಪನ ದಿನಚಾರಣೆಯ ಅಂಗವಾಗಿ ಎಸ್‍ಡಿಪಿಐ ಉಳ್ಳಾಲ ನಗರಸಭೆ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿದರು. ಎಸ್‍ಡಿಪಿಐ ಉಳ್ಳಾಲ ನಗರಸಭೆ ಘಟಕದ ಅಧ್ಯಕ್ಷ ಅಝ್ಗರ್ ಅಲಿ , ಮುಹಮ್ಮದ್ ಯು.ಬಿ , ಅಬ್ದುಲ್ ರಝಾಕ್, ಪೈರೋಝ್ ಉಳ್ಳಾಲ್ ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಮನೆ ಹಾಗೂ ಅಂಗಡಿಗಳನ್ನೇ ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದ ಕಳ್ಳರು , ಈ ಬಾರಿ ತಮ್ಮ ದಿಕ್ಕು ಬದಲಾಯಿಸಿ ಮಕ್ಕಳಿಗೆ ಅಕ್ಷರ ಕಲಿಸುವ ಶಾಲೆಗೆ ಕನ್ನ ಹಾಕುವ ಮೂಲಕ ರೂ.72,000 ನಗದು ಹಾಗೂ ಪಠ್ಯ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಕೊಲ್ಯ ಸಂತ ಜೋಸೆಫರ ಜಾಯ್ಲ್ಯಾಂಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಮನೆ ಹಾಗೂ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಶಾಲೆಯನ್ನೂ ಬಿಡದೆ ಕೃತ್ಯ ಮುಂದುವರಿಸಿದ್ದಾರೆ. ಮಂಗಳವಾರ ತಡರಾತ್ರಿ ವೇಳೆ ಕೃತ್ಯ ಎಸಗಿರುವ ಕಳ್ಳರು ಶಾಲೆಯ ಗೇಟಿನ ಹಾಗೂ ಮುಖ್ಯ ಕಚೇರಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಲ್ಲಿ ಕಪಾಟು ಹಾಗೂ ಡ್ರಾವರಿನಲ್ಲಿರಿಸಿದ್ದ ರೂ. .72,000 ನಗದು ಹಾಗೂ ಪಠ್ಯ ಪುಸ್ತಕ ಮತ್ತು ಸಾಮಗ್ರಿಗಳನ್ನು ಕಳವುಗೈದಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

