ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಕೆಸರು ಗದ್ದೆಯಲ್ಲಿ ನಡೆದ ಹಗ್ಗಜಗ್ಗಾಟ ಆಟದ ವೇಳೆ ಹಗ್ಗ ತುಂಡಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೆಸರಲ್ಲಿ ಬಿದ್ದು ಒದ್ದಾಡಿದ ಅಪರೂಪದ ಘಟನೆ ಕೊಣಾಜೆ ಪರಂಡೆಯ ಯು.ಬಿ.ಎಂ.ಸಿ ಶಾಲೆಯ ಸಮೀಪದ ಗದ್ದೆಯಲ್ಲಿ ಭಾನುವಾರ ನಡೆದಿದೆ.












ಕೊಣಾಜೆ ಗ್ರಾಮದಲ್ಲಿ ಹರೇಕಳದ ರಾಮಕೃಷ್ಣ ಫ್ರೌಢಶಾಲೆಯ ವತಿಯಿಂದ ಸ್ಕೌಟ್ ಮತ್ತು ಗೈಡ್ ನ ಮಕ್ಕಳಿಗಾಗಿ ಕೆಸರುಗದ್ದೆ ಆಟವನ್ನ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಯು.ಟಿ.ಖಾದರ್ ಸಾಹೇಬರು ಮಕ್ಕಳ ಮತ್ತು ಆಯೋಜಕರ ಒತ್ತಾಯಕ್ಕೆ ಮಣಿದು ಕೆಸರಿಗೆ ಇಳಿದ್ರು. ಈ ವೇಳೆ ಹಗ್ಗ ಜಗ್ಗಾಟಕ್ಕೆ ಸಿದ್ದರಾದ ಖಾದರ್ ಗೆ ಮಕ್ಕಳು ಕೂಡ ಸಾಥ್ ನೀಡಿದ್ರು. ಕೆಸರಿನಲ್ಲಿ ಮಜಾಮಾಡಿದ ಖಾದರ್ ಹಗ್ಗ ಎಳೀತಾ ಇದ್ದ ಸಂದರ್ಭದಲ್ಲಿ ಹಗ್ಗವೇ ತುಂಡಾದ ಪರಿಣಾಮ ಕೆಸರಿನಲ್ಲಿ ಬಿದ್ದು ಒದ್ದಾಡಿದ್ರು. ದಿನವಿಡೀ ಜಂಜಾಟದಲ್ಲೇ ಇರೋ ಆರೋಗ್ಯ ಸಚಿವರು ಇಂದು ಮಾತ್ರ ಕೆಸರಿನ ಗದ್ದೆಗೆ ಇಳಿದು ಮಜಾ ಮಾಡಿದ್ರು. ಇನ್ನು ಆರೋಗ್ಯ ಸಚಿವರೇ ಈ ಮಟ್ಟಿಗೆ ಎಂಜಾಯ್ ಮಾಡಿದ್ದನ್ನ ನೋಡಿದ ಮಕ್ಕಳು ಕೂಡ ಖಾದರ್ ಸಾಹೇಬರಿಗೆ ಕೆಸರು ಎರಚಿ ಖುಷಿ ಪಟ್ರು.


