ಉಳ್ಳಾಲ್ ನ್ಯೂಸ್ ಡೆಸ್ಕ್
ಕೊಣಾಜೆ: ಶಾಲಾ ವಿದ್ಯಾರ್ಥಿಗಳಿಗೆ ಒಂದೆಡೆ ಪಾಠ ಪ್ರವಚನ. ಇನ್ನೊಂದೆಡೆ ಆಟದ ಮೈದಾನದಲ್ಲಿ ವಿವಿಧ ಕ್ರೀಡಾ ಚಟುವಟಿಕೆ ಇದರ ಮಧ್ಯೆ ಕೆಸರಿನ ಪಾಠದೊಂದಿಗೆ ಆಟ ಇಂತಹ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜಿಸಿದ್ದು ಕೊಣಾಜೆ ಸಮೀಪದ ಪರಂಡೆಯ ಕೆಸರು ತುಂಬಿದ ಗದ್ದೆಯಲ್ಲಿ . ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹೊಸ ಹುರುಪಿನೊಂದಿಗೆ ಭಾನುವಾರ ಇಡೀ ದಿನ, ಹಗ್ಗ ಎಳೆದು, ಮಡಿಕೆ ಒಡೆದು, ಗದ್ದೆ ಪೂರ್ತಿ ಓಡಾಡಿ ಕುಣಿದು ಕುಪ್ಪಳಿಸಿದರು.

ಇದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಇದರ ಸೌಜನ್ಯ ಸ್ಕೌಟ್ಸ್‍ದಳ ಮತ್ತು ಗೈಡ್ಸ್ ಕಂಪೆನಿ ಇದರ ವತಿಯಿಂದ ಕೊಣಾಜೆ ಗ್ರಾಮದ ಪರಂಡೆಯ ಯು.ಬಿ.ಎಂ.ಸಿ ಶಾಲೆಯಲ್ಲಿ ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪಾರಂಪರಿಕ ಕೃಷಿ ಪ್ರಾತ್ಯಾಕ್ಷಿಕೆ, ಹಾಗೂ ವನಮಹೋತ್ಸವ, ತುಳುನಾಡ ಆಹಾರೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಕಂಡು ಬಂದ ದೃಶ್ಯ
ಮಂಗಳೂರು ತಾಲೂಕಿನ 12 ಶಾಲೆಗಳ ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ತ್ರಿ ಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಂದ ತುಳುನಾಡ ಜನಪದ ತಿಂಡಿ ತಿನಸುಗಳ ಪ್ರದರ್ಶನ, ವಿದ್ಯಾರ್ಥಿಗಳಿಗೆ ಕೃಷಿ ತರಭೇತಿ, ಭತ್ತದ ನಾಟಿ, ಉಳುಮೆ, ಹಲಗೆ ಕೋಣ ಓಡಿಸುವುದು , ವಿದ್ಯಾರ್ಜನೆಯೊಂದಿಗೆ ಕೃಷಿಯಲ್ಲಿ ತೊಡಗಿಸಿರುವ ಮಕ್ಕಳಿಗೆ ಪುರಸ್ಕಾರ, ಔಷದೀಯ ಸಸ್ಯಗಳ ನೆಡುವ ಕಾರ್ಯಕ್ರಮ, ಕೆಸರುಗದ್ದೆಯಲ್ಲಿ ಚಿಣ್ಣರಿಗೆ ಕ್ರೀಡಾ ಸ್ಪರ್ಧೆ, ನಿ„ಪತ್ತೆ, ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಮಡಿಕೆ ಒಡೆಯುವುದು, ಕೈ ಚೆಂಡು, ಕಬ್ಬಡಿ, ಓಟ ಹೀಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

















































































