ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕಿದ್ದು, ವೈದ್ಯರು ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಆನಂದ ಸಲ್ದಾನ ಅಭಿಪ್ರಾಯಪಟ್ಟರು.
ಅವರು ವಿಶ್ವ ಆರೋಗ್ಯ ದಿನದ ಅಂಗವಾಗಿ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಅಕಾಡೆಮಿಕ್ ಬ್ಲಾಕ್‌ನ ಲೆಕ್ಚರರ್ ಹಾಲ್‌ನಲ್ಲಿ ನಡೆದ ‘ಆಹಾರ ಸುರಕ್ಷತೆ’ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಆರೋಗ್ಯಯುತ ಜೀವನಕ್ಕೆ ನಾವು ಬಳಸುವ ಆಹಾರ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ. ನಾವು ಕೊಂಡುಕೊಳ್ಳುವ ಆಹಾರದ ಗುಣಮಟ್ಟದ ಕುರಿತು ಅರಿವು ಮುಖ್ಯ. ನಾವು ಸೇವಿಸುವ ಆಹಾರ ಎಷ್ಟು ಸುರಕ್ಷಿತ ಎನ್ನುವ ವಿಚಾರದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್, ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿ ಪ್ರಸಾದ್, ಮುಖ್ಯ ವೈದ್ಯಕೀಯ ಅಽಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.
ರಶ್ಮಿ ಬಿ.ಆರ್. ಸಲ್ದಾನ ಸ್ವಾಗತಿಸಿದರು. ಶಾರೊನ್ ಕ್ಯಾರೋಲಿನ್ ಕಾರ್ಯಕ್ರಮ ನಿರ್ವಹಿಸಿದರು.





