Author: UllalaVani

Kannada News From Coastal Karnataka

ArticlesOmni Ports Casino Free Revolves: Wake up So you can 50 100 % free SpinsModern Jackpot Slots CompetitionsResponsible GamblingEnjoy Today Being the most trusted ports authority online mode as being the most leading slots authority worldwide. Just click their country’s banner below to learn all about to play real cash slots from your area. Reels will be the columns within the a slot one spin making icons belongings to your screen. Paylines make reference to the fresh you can contours of winning combinations, constructed from the other bonus symbols.

Read More

UN networks ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ(ರಿ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ  ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣಾ ಕಾರ್ಯಕ್ರಮ ಆ.27 ಶನಿವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.  ಬೆಳಿಗ್ಗೆ 10 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್. ಹೆಗಡೆ ಕುಮಟಾ ಅವರು ಯಕ್ಷ ಪುರುಷೋತ್ತಮ ಸಂಸ್ಮರಣ ಗ್ರಂಥ ಬಿಡುಗಡೆಗೊಳಿಸಲಿದ್ದು,  ಹಿರಿಯ ಕಲಾವಿದರಾದ ವಿಶ್ವೇಶ್ವರ ಭಟ್ ಸುಣ್ಣಂಬಳ ಅವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಷಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ, ಯಕ್ಷ‌ ಪುರುಷೋತ್ತಮ ಸಂಪಾದಕರಾದ‌ ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಾಯಿ ಅಜೆಕಾರು ಕಲಾಭಿಮಾನಿಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ…

Read More

UN networks ಕೊಣಾಜೆ : ಅಸೈಗೋಳಿ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಮಾಡಿರುವ ಶಂಕೆ ಕುರಿತು ಉಳ್ಳಾಲ್‌ ನ್ಯೂಸ್‌ .ಕಾಂ ನಲ್ಲಿ ಸುದ್ಧಿ ಪ್ರಕಟವಾಗಿದ್ದು, ಇದಕ್ಕೆ ಪ್ರತಿಕ್ರಯಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ವಿಭಾಗೀಯ ಅರಣ್ಯ ಅಧಿಕಾರಿ ಆಶೀಶ್‌ ರೆಡ್ಡಿ ಎಂ.ವಿ ಐಎಫ್‌ ಎಸ್‌ ಕೂಡಲೇ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಡಿಎಫ್‌ಓ ನಿರ್ದೇಶನದ ಮೇರೆಗೆ ಎಸಿಎಫ್‌ ಸುಬ್ರಹ್ಮಣ್ಯೇಶ್ವರ್‌ ರಾವ್‌ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.  ಕ್ಷಿಪ್ರವಾಗಿ ಪ್ರತಿಕ್ರಿಯಿಸಿರುವ ಡಿಎಫ್‌ ಓ  ಮರ ಕಡಿದಿರುವುದು  ಖಚಿತವಾದಲ್ಲಿ ಕಠಿಣ ಕ್ರಮಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಅಸೈಗೋಳಿಯ ಕೆಎಸ್ ಆರ್ ಪಿ 7ನೇ ಬೆಟಾಲಿಯನ್ ಆವರಣದಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಲಕ್ಷಾಂತರ ಮೌಲ್ಯದ ಹಲವು, ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಿರುವ ಆರೋಪ ವ್ಯಕ್ತವಾಗಿದೆ. 6 ಹಲಸಿನ ಮರ, 1 ಅಕೇಶಿಯಾ ಮರ ಸೇರಿ ಹತ್ತಕ್ಕೂ ಅಧಿಕ ಮರಗಳನ್ನು ಮಾರಣ ಹೋಮ ಮಾಡಲಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತರದೇ…

Read More

UN NEWS NETWORKSಉಳ್ಳಾಲ: ಮಂಗಳೂರು ಕ್ಷೇತ್ರದ ಶಾಸಕರು ಬಿಜೆಪಿ ನಡೆಸುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಕಾಲು ಹಾಕುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಹಲವು ರಸ್ತೆಗಳನ್ನು ತಡೆಹಿಡಿದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ ಆರೋಪಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿಯಿಂದ ಅರಸರಮೂಲೆಯವರೆಗಿನ ಕಾಂಕ್ರೀಟಿಕರಣ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯಾಧ್ಯಕ್ಷರಿಂದ ಹಿಡಿದು ಪ್ರತಿಯೋರ್ವ ಬಿಜೆಪಿ ಮುಖಂಡರ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ರಸ್ತೆಯನ್ನು ಕ್ಷೇತ್ರದ ಶಾಸಕ ತಡೆಹಿಡಿದಾಗ , ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನಪರಿಷತ್ ಸದಸ್ಯರಾಗಿ, ಅವರಿಗೂ ಮಂಗಳೂರು ಕ್ಷೇತ್ರದ ಜವಾಬ್ದಾರಿ ಇರುವುದನ್ನು ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕಾಮಗಾರಿ ನಡೆಸಿದ್ದೇವೆ. ಕೊಣಾಜೆ ಗ್ರಾಮದಲ್ಲಿ ವಿವಿಧ ಬೇಡಿಕೆಗಳಿದ್ದು, ಅಲ್ಲಿಗೂ ಅನುದಾನ ಮಂಜೂರುಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿಂದೆ ಜಿ.ಪಂ, ತಾ.ಪಂ ಇದ್ದಂತಹ ಅವಧಿಯಲ್ಲಿ ಶಾಸಕರು…

Read More

UN networks ಮಂಗಳೂರು: ಸೆಪ್ಟೆಂಬರ್ 2ರಂದು  ನವಮಂಗಳೂರು ಬಂದರಿನ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸಕ್ಕೆ ನರೇಂದ್ರ ‌ಮೋದಿ ಆಗಮಿಸಲಿದ್ದು ತದ ನಂತರ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದರ  ಜಾಗ ಪರಿಶೀಲನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಅವರು ಬುಧವಾರದಂದು ನಡೆಸಿದರು. ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್ ಸೇರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಳಿನ್ ಕುಮಾರ್ ಗೆ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಸಾಥ್ ನೀಡಿದ್ದಾರೆ. ಪೆಂಡಾಲ್ ಹಾಕುವ ಜಾಗ, ಪಾರ್ಕಿಂಗ್ ಹಾಗೂ ತುರ್ತು ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಲಾಗಿದೆ. ಅಧಿಕೃತ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಧಾನಿ ನೇತೃತ್ವದಲ್ಲಿ ಬೃಹತ್ ಸಮಾವೇಶವು ನಡೆಯಲಿದ್ದು ಫಲಾನುಭವಿಗಳ ಸಮಾವೇಶದಲ್ಲಿಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿಯಿಂದ ಮಹಾಶಕ್ತಿ ಪ್ರದರ್ಶನವೂ ನಡೆಯಲಿದೆ. ಕೊಚ್ಚಿಯ ಕಾರ್ಯಕ್ರಮ ‌ಮುಗಿಸಿ 3.45ಕ್ಕೆ ಮಂಗಳೂರಿಗೆ ಆಗಮಿಸಿ ನಂತರ ಸಂಜೆ‌ 5 ಗಂಟೆಗೆ ಸಮಾವೇಶ ನಡೆಸಲು ಬಿಜೆಪಿ‌ ಯೋಜನೆಯನ್ನು ಹಾಕಿದೆ.

Read More

UN networks ಉಳ್ಳಾಲ: ಉಚ್ಚಿಲ ಸಂಕೊಳಿಗೆಯ ಭಗವತೀ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಸಭೆ ಶಾಲಾ ಸಭಾಂಗಣದಲ್ಲಿ  ನಡೆಯಿತು. ಸುಷ್ಮಾ ವಿ. ಕಿಣಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಭಗವತೀ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ದಿನಕರ್ ಉಳ್ಳಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಭಗವತೀ ಎಜ್ಯುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಚಂದ್ರಹಾಸ್ ಉಳ್ಳಾಲ್, ಭಗವತೀ ವಿದ್ಯಾ ಸಂಸ್ಥೆಯ ಸಂಚಾಲಕ ಸದಾಶಿವ ಉಳ್ಳಾಲ್, ಕೋಟೆಕಾರ್ ಬ್ಲಾಕ್ ಆರೋಗ್ಯ ಅಧಿಕಾರಿ ಲಲಿತ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕವಿತಾ ಸುರೇಶ್, ಉಪಾಧ್ಯಕ್ಷೆ ಸುಪ್ರಿಯಾ ಉಪಸ್ಥಿತರಿದ್ದರು.ಭಗವತೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಸ್ವಾಗತಿಸಿದರು. ಸುಚಿತಾ ಶೆಟ್ಟಿ ವರದಿ ವಾಚಿಸಿದರು. ಶಿಕ್ಷಕರಾದ ಸುಚಿತ್ರಾ ಮತ್ತು ರೋಶನಿ ಕೆ. ಕಾರ್ಯಕ್ರಮ ನಿರ್ವಹಿಸಿದರು. ನಿವೇದಿತಾ ವಂದಿಸಿದರು.

Read More

UN networks ಉಳ್ಳಾಲ: ಯೇನೆಪೆÇಯ ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಸುದ್ದಿಪತ್ರ ‘ವಾರ್ಣಿಕ’ (ಸಂಸ್ಕೃತದಲ್ಲಿ ‘ಬರಹಗಾರ’ ಎಂದರ್ಥ)ಅನ್ನು ಯೇನೆಪೆÇಯ ದಂತ ಮಹಾವಿದ್ಯಾಲಯದ ಡೀನ್ ಅಖ್ತರ್ ಹುಸೇನ್ ಬಿಡುಗಡೆ ಮಾಡಿದರು.ಯೇನೆಪೆÇಯ ದಂತ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ವರದಿಗಳನ್ನು ಈ ಸುದ್ಧಿಪತ್ರ ಒಳಗೊಂಡಿದೆ. ಸುದ್ಧಿ ಪತ್ರ ಬಿಡುಗಡೆ ಸಂದರ್ಭದಲ್ಲಿ ವಿವಿಧವಿಭಾಗದ ಉಪಪ್ರಾಂಶುಪಾಲರು, ಮುಖ್ಯಸ್ಥರು ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಮತ್ತು ಉಸ್ತುವಾರಿ ಅಧ್ಯಾಪಕರು ಉಪಸ್ಥಿತರಿದ್ದರು.

Read More

UN networks ಉಳ್ಳಾಲ: ಉತ್ಸವಗಳಿಂದ ಮನುಷ್ಯ ಮನುಷ್ಯರ ನಡುವೆ ಸಂಬಂದಗಳು, ದಾರ್ಮಿಕ ಶ್ರದ್ದೆಗಳು ಹೆಚ್ಚು ಹೆಚ್ಚು ವಿಕಸಿತಗೊಳ್ಳುತ್ತದೆ, ನಾವು ಧರ್ಮದ ಆದಾರದಲ್ಲಿ ಸಮಾಜವನ್ನು ಒಟ್ಟುಗೂಡಿಸಿದರೆ ಪರಿಪೂರ್ಣವಾಗಿ ಅದು ಉಳಿಯುತ್ತದೆ ಎಂಬುದೇ ಶ್ರೀ ಕೃಷ್ಣನ ಸಂದೇಶ, ಅದನ್ನು ಸಾಕಾರಗೊಳಿಸುವ ಕಾರ್ಯ 25 ವರ್ಷಗಳಿಂದ ಕುಂಪಲದಲ್ಲಿ ನಡೆಯುತ್ತಿದೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆದ 25 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಮಹಾಲಕ್ಷ್ಮೀ  ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನ್‍ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ದೀಪಬೆಳಗಿಸಿದರು. ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್,  ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ವಿದ್ಯಾರತ್ನ ಆಂಗ್ಲಮಾದ್ಯಮ ಶಾಲೆಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಭಗವತೀ ಕ್ಷೇತ್ರದ ಮೊಕ್ತೇಸರ…

Read More

UN networks ಉಳ್ಳಾಲ: ತೊಕ್ಕೋಟ್ಟು ಭಟ್ನಗರ ಜೈವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ 62 ನೇವರ್ಷದ ತೊಕ್ಕೋಟ್ಟು ಮೊಸರು ಕುಡಿಕೆಯ ಅಂಗವಾಗಿ  ಧಾರ್ಮಿಕ ಸಭಾ ಕಾರ್ಯಕ್ರಮ ತೊಕ್ಕೋಟ್ಟು ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಿತು.ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಸುರೇಶ್ ಚೌಟ  ಕಕ್ಕೆಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಯು.ಟಿ.ಖಾದರ್,  ಕರ್ನಾಟಕ ರಾಜ್ಯ ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು , ಮೈಸೂರು ಇಲೆಕ್ಟ್ರಿಕಲ್ಸ್ ಮತ್ತು ಇಂಡಸ್ಟ್ರೀಸ್ ಲಿ. ಬೆಂಗಳೂರು ಇದರ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಸದಸ್ಯ ಕೆ.ಟಿ. ಸುವರ್ಣ, ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಉಳ್ಳಾಲ ನಗರ ಸಭೆ ಅಧ್ಯಕ್ಷ ಚಿತ್ರಕಲಾ ಚಂದ್ರಕಾಂತ್, ಸಿವಿಲ್ ಇಂಜಿನಿಯರ್ ಯತೀಶ್ ಹೊಸಗದ್ದೆ, ಸಿ.ಪಿ.ಐ.ಎಂ…

Read More

UN networks ಉಳ್ಳಾಲ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಮೈಸೂರು ವಲಯದ 2022-23ರ ಅಂತರಕಾಲೇಜು ಫುಟ್‍ಬಾಲ್ ಪಂದ್ಯಾಟದಲ್ಲಿ ಕಣಚೂರು ಇನ್‍ಸ್ಟ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಾಟೆಕಲ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ವಿವಿಧ ವಿದ್ಯಾಸಂಸ್ಥೆಗಳಿಂದ ಒಟ್ಟು  48 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯಾಟದಲ್ಲಿ  ತೇಜಸ್ವಿನಿ ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕುಡುಪು ಮಂಗಳೂರು ತಂಡವನ್ನು ಸೋಲಿಸಿ ಫುಟ್‍ಬಾಲ್ ಚಾಂಪಿಯನ್‍ಶಿಪ್ ಪಡದುಕೊಂಡರೆ, ತೇಜಸ್ವಿನಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.ಪಂದ್ಯಾಟದಲ್ಲಿ  ತೇಜಸ್ವಿನಿ ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕುಡುಪು ತಂಡದ ಆಟಗಾರ ಗೋವಿಂದ್ ಉತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರೆ, ಕಣಚೂರು ಇನ್‍ಸ್ಟ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಾಟೆಕಲ್ ತಂಡದ ಆಟಗಾರ ಶಮ್ಮಾಸ್ ಉತ್ತಮ ಡಿಫೆಂಡರ್ ಮತ್ತು ಹಾದಿ ರೆಹೆಮಾನ್  ಉತ್ತಮ ಗೋಲ್‍ಕೀಪರ್…

Read More