UN networks ಉಳ್ಳಾಲ: ಬೆಳ್ಮ ಬೆರಿಕೆ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಸೇವಾಶ್ರಮ ನಿರ್ಗತಿಕ ವೃದ್ಧ ಮಹಿಳೆಯರ ಆಶ್ರಮ ಇದರ ದಶಮ ವಾರ್ಷಿಕೋತ್ಸವ ಪ್ರಯುಕ್ತ ಆ.21ರ ಬೆಳಿಗ್ಗೆ ಬೃಹತ್ ಆರೋಗ್ಯ ಶಿಬಿರ ಹಾಗೂ 11.00 ಗಂಟೆಗೆ ವೃದ್ಧ ಪುರುಷರ ಆಶ್ರಮ ಕಟ್ಟಡದ ಶಿಲನ್ಯಾಸ ಸಮಾರಂಭ ಜರಗಲಿದೆ ಎಂದು ಟ್ರಸ್ಟೀ ಡಾ ಜಿ.ಆರ್ ಶೆಟ್ಟಿ ಹೇಳಿದರು.ಬೆಳ್ಮ ಸೇವಾಶ್ರಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸೇವಾಶ್ರಮ ಕಳೆದ 10 ವರ್ಷಗಳಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಗತಿಕ ಮಹಿಳೆಯರ ಎಲ್ಲಾ ರೀತಿಯ ಆರೈಕೆಗಳನ್ನು ನಡೆಸುತ್ತಾ ಬಂದಿದೆ. ಇದೀಗ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲಾ ಊರಿನಿಂದ ಬರುವ ಮಂದಿಯೂ ಪಾಲ್ಗೊಳ್ಳಬಹುದು. ಸರಕಾರದ ಸವಲತ್ತುಗೊಳು ದೊರೆಯಬೇಕಾದಲ್ಲಿ ನಿರ್ಗತಿಕ ಪುರುಷರ ಆರೈಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಇದೀಗ ಪುರುಷರಿಗಾಗಿ ನೂತನ ಕಟ್ಟಡವನ್ನು ಕಟ್ಟುವ ಯೋಜನೆಯಿಂದ ಶಿಲನ್ಯಾಸವೂ ಅಂದೇ ನಡೆಯಲಿದೆ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು…
Author: UllalaVani
UN networks ಉಳ್ಳಾಲ: ದೇರಳಕಟ್ಟೆ ಪ್ರದೇಶ ಶೈಕ್ಷಣಿಕವಾಗಿ ಅಭಿವೃದ್ಧಿ ಯ ಕೇಂದ್ರ, ಭವಿಷ್ಯದಲ್ಲಿ ಸರ್ವರಿಗೂ ಶಿಕ್ಷಣ ನೀಡುವ ಶಿಕ್ಷಣ ಕಾಶಿಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಯು.ಟಿ ಖಾದರ್ ಹೇಳಿದರು.ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ನಿರ್ಮಾಣಗೊಂಡ ದೇರಳಕಟ್ಟೆ ಪದವಿಪೂರ್ವ ಕಾಲೇಜು ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.ಸರಕಾರಿ ಪಿಯುಸಿ ಕಾಲೇಜು ಆರಂಭವಾಗಬೇಕೆಂದು ಕೋಟೆಕಾರು, ಹರೇಕಳ, ಸುಜೀರ್, ಪಾವೂರು, ಕೊಣಾಜೆ ಪ್ರದೇಶಗಳಲ್ಲಿ ಒತ್ತಡಗಳಿದ್ದರೂ, ಎಲ್ಲರಿಗೂ ಸಹಕಾರವಾಗುವ ಉದ್ದೇಶದಿಂದ ದೇರಳಕಟ್ಟೆಯಲ್ಲಿ ಕಾಲೇಜು ನಿರ್ಮಿಸಲಾಗಿದೆ. ಮಂಗಳೂರು ಕ್ಷೇತ್ರ ದ ಪ್ರತಿ ಗ್ರಾಮಗಳಲ್ಲಿ ಹೈಸ್ಕೂಲ್ ಇರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಸಚಿವ ನಾಗೇಶ್ ಹಾಗೂ ಅಧಿಕಾರಿಗಳಿಗೆ ಕಾಲೇಜು ಒದಗಿಸಿರುವುದಕ್ಕಾಗಿ ಅಭಿನಂಧನೆ ಸಲ್ಲಿಸುತ್ತೇನೆ. ಜಿಲ್ಲೆಯ ವಿವಿದೆಡೆಗಳ ಶಾಸಕರು ಐದು ಕಾಲೇಜುಗಳಿಗೆ ಬೇಡಿಕೆಗಳನ್ನು ಇಟ್ಟಿದ್ದರೂ ಸಚಿವರು ನನ್ನ ಕ್ಷೇತ್ರಕ್ಕೆ ನೀಡಿರುವುದು ಕೃತಜ್ಞತಾ ಪೂರ್ವ. ತಾನು ಸಚಿವನಾಗಿದ್ದ ಸಂದರ್ಭ ಅವರ ಕ್ಷೇತ್ರಕ್ಕೆ ಯೋಜನೆಗಳನ್ನು ಒದಗಿಸಿರುವ ಋಣವನ್ನು ಇಟ್ಟು ತನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರುಗೊಳಿಸಿದ್ದಾರೆ. ಕಲಾ ವಿಭಾಗ ಮಾತ್ರ…
UN networks ಸುರತ್ಕಲ್ : ವ್ಯಕ್ತಿಯಿಂದ ಕತ್ತಿ ಬೀಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಕಾನಾ ಎಂಬಲ್ಲಿ ಶುಕ್ರವಾರ ನಡೆದಿದೆ. ಝಾರ್ಖಂಡ್ ಮೂಲದ ಅತುಲ್ (30) ಎಂಬಾತನಿಂದ ಕೃತ್ಯ ನಡೆದಿದ್ದು ಈತ ಮಾನಸಿಕ ಅಸ್ವಸ್ಥತ ಎಂದು ತಿಳಿದುಬಂದಿದೆ. ಮಡಗಾಂವ್ ನಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಇಳಿದು ಕಾನಾ ಬಳಿ ಗಲಾಟೆ ಮಾಡಿದ್ದಾನೆ.ವೆಂಕಪ್ಪ ಎಂಬವರ ಬಳಿಯಿಂದ ಕತ್ತಿ ಕಿತ್ತುಕೊಂಡು ಹಲ್ಲೆಗೆ ಯತ್ನ ಮಾಡಿದ್ದು ಇದನ್ನುತಡೆಯಲು ಬಂದ ಇಮ್ರಾನ್ ಎಂಬ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಬಸ್ಸಿಗೆ ಕಲ್ಲು ತೂರಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಅತುಲ್ ನನ್ನು ಹಿಡಿದು ಥಳಿಸಿದ್ದಾರೆ.ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು ಸದ್ಯ ಅತುಲ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸುರತ್ಕಲ್ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
UN networks ಮಂಗಳೂರು: ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಾತ್ಯಾತೀತ ಪಕ್ಷಗಳ ಒಕ್ಕೂಟದಿಂದ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಅಹಿತಕರ ಘಟನೆ ಹಿನ್ನೆಲೆ ಸಮಾನ ಮನಸ್ಕ ಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನವಾಗಿದ್ದು ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಶುಕ್ರವಾರದಂದು ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಡಿವೈಎಫ್ಐ, ದಲಿತ ಸಂಘಟನೆಗಳ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದೆ. ಅಹಿತಕರ ಘಟನೆಗಳ ಹಿಂದೆ ಇರುವ ಪಿತೂರಿದಾರರ ಬಂಧನಕ್ಕೆ ಆಗ್ರಹ ಸರ್ವಪಕ್ಷದ ಮುಖಂಡರು ಆಗ್ರಹಿಸಿದ್ದು ಜನಸಾಮಾನ್ಯರಿಗೆ ಅವರು ಯಾರೆಂದು ಗೊತ್ತಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆಸ್ತಿ ಮುಟ್ಟುಗೋಲು ,ಎನ್ ಐ ಎ ತನಿಖೆ ಎಲ್ಲಾ ಪ್ರಕರಣಗಳಲ್ಲೂ ಆಗಬೇಕು ಕಾರ್ಯಾಂಗದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ದ್ವೇಷ ಪರಾಕಷ್ಟೆಗೆ ತಲುಪಿದೆ ಇದನ್ನು ಈಗಲೇ ಮಟ್ಟ ಹಾಕದೇ ಇದ್ದರೆ ಮುಂದಿನ ದಿನ ಸಂಕಷ್ಟವಿದೆಹಿಜಾಬ್ ವಿವಾದ ಆರಂಭ ಆದಾಗಲೇ ಜಿಲ್ಲಾಡಳಿತವನ್ನು ಎಚ್ಚರಿಸಿದ್ದೆವು ಆದರೆ…
UN networks ಮಂಗಳೂರು: ಜಿಲ್ಲೆಯಲ್ಲಿ ಹಾಕಲಾಗಿರುವ ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಗಳನ್ನು ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅವರು ಶುಕ್ರವಾರ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯಲ್ಲಿ ಫ್ಲೆಕ್ಸ್ ಅಳವಡಿಕೆ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.ಮಂಗಳೂರು ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್, ಜಿ.ಪಂ ಸಿಇಓ ಕುಮಾರ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಭಾಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧಿಕೃತ ಜಾಗದಲ್ಲಿ ಮಾತ್ರ ಬ್ಯಾನರ್ ಗೆ ಅವಕಾಶ: ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ದ.ಕ ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶವಾಗಿರೋ ಕಾರಣ ಅಧಿಕಾರಿಗಳ ಜೊತೆ ಸಭೆ ನಡೆಸಲಾಗದೆ.ಅಧಿಕೃತ ಜಾಗಗಳಲ್ಲಿ ಬ್ಯಾನರ್ ಅಳವಡಿಗೆ ಅವಕಾಶ ನೀಡಬೇಕು. ಅದರಲ್ಲಿ ವಿವಾದಾತ್ಮಕ ವಿಷಯಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಅನಧಿಕೃತ ಫ್ಲೆಕ್ಸ್ ಹಾಕಿದ್ದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅವುಗಳನ್ನು ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಕಂದಾಯ, ಪೊಲೀಸ್…
UN networks ಮಂಗಳೂರು: ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ಹತ್ಯೆಯ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಎನ್ ಐ ಎ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಪ್ರವೀಣ್ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಪೊಲೀಸರ ತನಿಖೆಯ ನಂತರ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಎನ್ ಐ ಎ ಹಸ್ತಾಂತರ ಮಾಡುವ ಬಗ್ಗೆ ಎಡಿಜಿಪಿ ಅಲೋಕ್ ಕುಮಾರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದೀಗ ರಾಷ್ಟ್ರೀಯ ತನಿಖಾ ದಳ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಮಹತ್ತರವಾದ ಮಾಹಿತಿಗಳನ್ನು ಪಡೆದುಕೊಳ್ಳಲಿದೆ.ಪ್ರಕರಣ ಆರೋಪಿಗಳಾದ ನೌಫಲ್, ಝೈನುಲ್ ಅಭಿದ್, ಮೊಹಮ್ಮದ್ ಸೈಯದ್, ಅಬ್ದುಲ್ ಬಶೀರ್ ಮತ್ತು ರಿಯಾಜ್ ಎಂಬ ಆರೋಪಿಗಳನ್ನು ಆಗಸ್ಟ್ 23 ರ ವರೆಗೆ ಸುಳ್ಯ ನ್ಯಾಯಾಲಯ ಎನ್ ಐ ಎ ವಶಕ್ಕೆ ನೀಡಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸ್ ಇಲಾಖೆ ಹಾಗೂ ರಾಜಕೀಯದಲ್ಲಿ ಮಹತ್ತರವಾರ ಸಂಚಲ ಮೂಡಿಸಿತ್ತು. ಪ್ರವೀಣ್ ಹತ್ಯೆಯ ತನಿಖೆಯನ್ನು ಸರಕಾರ ಎನ್ ಐಎ ಗೆ…
Un networks ದೇರಳಕಟ್ಟೆ: ಪಂಚಾಯತಿ ಅನುಮತಿಯ ಮೇರೆಗೆ ಬಿಜೆಪಿ ಮುಖಂಡ ಅಳಪಡಿಸಿದ್ದ ವೀರ ಸಾವರ್ಕರ್ ಭಾವ ಚಿತ್ರವಿರೋ ಬ್ಯಾನರನ್ನು ಕೊಣಾಜೆ ಪೊಲೀಸರು ತೆರವುಗೊಳಿಸಿದ್ದಾರೆ. ದೇರಳಕಟ್ಟೆಯ ಬಳಿ ಸಾರ್ವಕರ್ ಭಾವ ಚಿತ್ರವಿರುವ ಬ್ಯಾನರನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಕಾರ್ಯಕಾರಿಣಿ ಸದಸ್ಯ ಫಜಲ್ ಅಸೈಗೋಳಿ ಎಂಬವರು ಬೆಳ್ಮ ಗ್ರಾ.ಪಂ ಅನುಮತಿ ಪಡೆದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಇವರಿಗೆ ಶತ ಶತ ನಮನಗಳು ಎಂಬ ಬ್ಯಾನರ್ ಆಳಪಡಿಸಿದ್ದರು. ಬ್ಯಾನರ್ ಅಳಪಡಿಸುವ ಮೊದಲು ಇದಕ್ಕೆ ಸಂಬಂಧಿಸಿದ ಪಂಚಾಯತಿಯಲ್ಲಿ ಸಪ್ಟೆಂಬರ್ 9ರವರೆಗೆ ಬ್ಯಾನರ್ ಅಳವಡಿಸಲು ಅನುಮತಿ ಪಡೆದಿದ್ದರು ಆದರೆ ಸಾವರ್ಕರ್ ವಿವಾದ ಎಲ್ಲೆಡೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಹಿತಕರ ಘಟನೆ ಸಾಧ್ಯತೆ ಹಿನ್ನೆಲೆ ಕೊಣಾಜೆ ಪೊಲೀಸರಿಂದ ಬ್ಯಾನರ್ ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
Contentschrittgeschwindigkeit 3: Maklercourtage Ohne Einzahlung SchluckenSpielsaal Maklercourtage Minus Einzahlung 2022Online Spielbank Prämie Bloß Einzahlung Im Super Catweswegen Geben Casinos Einen Bonus Abzüglich Einzahlung?Kostenlose 7 Eur Casino Prämie Bloß Einzahlung Am günstigsten ist und bleibt, Sie subskribieren unseren Newsletter, hier sei ein auf jeden fall gleich innerhalb, so lange sera ihn wieder existiert. Dies gibt nebensächlich so genau so wie einmal Echtgeld Bonui abzüglich Einzahlung, insbesondere Löwen Play angeschlossen ist und bleibt lesenswert. Vorzugsweise sei, Diese untersuchen nach unserer Sonnennächster planet Spielsaal Bonus Seite passé, dort listen unsereins unser aktuellen Boni in.
PostsCan you Win A real income For the Free Slots On the internet Zero Down load No Membership?Best Free online Slots Inside 2022 The newest “balance” will appear simply how much the fresh casino player has used on the newest bet before beginning of the gaming training. Additionally, in addition, it will show how much the fresh casino player have gained on the all of the icons and can expose an intense financial research. The newest reels begin rotating as the example starts. You will find away from 3 to 5 rows in every slot machine game.
Un networks ಸುಳ್ಯ: ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟ ಬಹುದು ಆದರೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಅನ್ನುವ ಮಾತಿಗೆ ತದ್ವಿರುದ್ಧ ಎಂಬಂತಹ ಘಟನೆಯೊಂದು ಸುಳ್ಯದಲ್ಲಿ ನಡೆದಿದೆ. ಪುಟಾಣಿ ಮಗುವೊಂದು ಹಠ ಮಾಡಿದ ಕಾರಣಕ್ಕಾಗಿ ತಾಯಿ ಮಗುವಿನ ಮೈಗೆ ಬಿಸಿ ಬರೆ ಎಳೆದ ವಿಲಕ್ಷಣ ಘಟನೆಯೊಂದು ಸುಳ್ಯದ ನಾವೂರಿನಲ್ಲಿ ಬುಧವಾರ ನಡೆದಿದೆ.ನಾಲ್ಕು ವರ್ಷ ಪ್ರಾಯದ ಮಗು ಹಠ ಮಾಡಿದಕ್ಕೆ ಕಾವ್ಯಶ್ರೀ ಎಂಬ ಕ್ರೂರಿ ತಾಯಿ ಬಿಸಿ ಸಟ್ಟುಗದಲ್ಲಿ ಎಳೆ ಕಂದಮ್ಮನ ಕೈಗೆ ಬರೆ ಹಾಕಿದ್ದು ಪರಿಣಾಮ ಕೈಗೆ ಗಂಭೀರ ಸುಟ್ಟವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆ ಭೇಟಿ ನೀಡಿ ಮಗುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

