UN networks
ಉಳ್ಳಾಲ: ಬೆಳ್ಮ ಬೆರಿಕೆ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಸೇವಾಶ್ರಮ ನಿರ್ಗತಿಕ ವೃದ್ಧ ಮಹಿಳೆಯರ ಆಶ್ರಮ ಇದರ ದಶಮ ವಾರ್ಷಿಕೋತ್ಸವ ಪ್ರಯುಕ್ತ ಆ.21ರ ಬೆಳಿಗ್ಗೆ ಬೃಹತ್ ಆರೋಗ್ಯ ಶಿಬಿರ ಹಾಗೂ 11.00 ಗಂಟೆಗೆ ವೃದ್ಧ ಪುರುಷರ ಆಶ್ರಮ ಕಟ್ಟಡದ ಶಿಲನ್ಯಾಸ ಸಮಾರಂಭ ಜರಗಲಿದೆ ಎಂದು ಟ್ರಸ್ಟೀ ಡಾ ಜಿ.ಆರ್ ಶೆಟ್ಟಿ ಹೇಳಿದರು.
ಬೆಳ್ಮ ಸೇವಾಶ್ರಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೇವಾಶ್ರಮ ಕಳೆದ 10 ವರ್ಷಗಳಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಗತಿಕ ಮಹಿಳೆಯರ ಎಲ್ಲಾ ರೀತಿಯ ಆರೈಕೆಗಳನ್ನು ನಡೆಸುತ್ತಾ ಬಂದಿದೆ. ಇದೀಗ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲಾ ಊರಿನಿಂದ ಬರುವ ಮಂದಿಯೂ ಪಾಲ್ಗೊಳ್ಳಬಹುದು. ಸರಕಾರದ ಸವಲತ್ತುಗೊಳು ದೊರೆಯಬೇಕಾದಲ್ಲಿ ನಿರ್ಗತಿಕ ಪುರುಷರ ಆರೈಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಇದೀಗ ಪುರುಷರಿಗಾಗಿ ನೂತನ ಕಟ್ಟಡವನ್ನು ಕಟ್ಟುವ ಯೋಜನೆಯಿಂದ ಶಿಲನ್ಯಾಸವೂ ಅಂದೇ ನಡೆಯಲಿದೆ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಫಾ. ವೆಲೆರಿಯನ್ , ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್ ನ ಸಿಇಒ ಮಹಾಬಲೇಶ್ವರ್ ಎಂ.ಎಸ್ ಮುಖ್ಯ ಅತಿಥಿಗಳಾಗಿ ಶಾಸಕ ಯು.ಟಿ ಖಾದರ್, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್, ಮುಂಡ್ಕೂ ರಾಮದಾಸ ಕಾಮತ್, ಸುನೀಲ್ ರಾಜು ಸಾಲ್ಯಾನ್ ಮುಂಬೈ, ಲಯನ್ಸ್ ಕ್ಲಬ್ ನ ಸಂಜಿತ್ ಶೆಟ್ಟುಇ, ಕಣಚೂರು ಸಂಸ್ಥೆ ಅಧ್ಯಕ್ಷ ಯು.ಕೆ ಮೋನು, ಡಾ. ಗೀತಾಪ್ರಕಾಶ್ ಭಾಗವಹಿಸಲಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಟ್ರಸ್ಟ್ ನ ಯಶವಂತ ಪೂಜಾರಿ, ಹರೀಶ್ ಆಳ್ವ ಹಾಗೂ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.


