UN networks ಉಳ್ಳಾಲ: ಅಧಿಕಾರಿಗಳು ಚುನಾವಣಾ ಆಯೋಗದ ವಿಚಾರದಲ್ಲಿ ಪ್ರಚೋದನಕಾರಿ ವಿಚಾರಗಳನ್ನು ಮಾತನಾಡದೇ, ಆಯೋಗದ ಆದೇಶಕ್ಕೆ ಬದ್ಧರಾಗಿರಬೇಕು ಎಂದು 204 ಮಂಗಳೂರು ವಿಧಾನಸಭಾ ಕ್ಷೇತ್ರದಚುನಾವಣಾ ಅಧಿಕಾರಿ ರಾಜು ಕೆ.ಹೇಳಿದರು ಅವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾದ 204 ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಎಲ್ ಒ ಬಿಎಲ್ ಎ ಗಳಿಗೆ ಚುನಾವಣಾ ಪೂರ್ವ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್ಒ ಬಿಎಲ್ಎಗಳಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿಯನ್ನು ನೀಡಲಾಗಿದೆ. ಉಳ್ಳಾಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ, ಶಾಸಕರು ಕೂಡಾ ಹಾಜರಾಗಿ ತರಬೇತಿ ಪಡೆದುಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ಬಿಎಲ್ ಎಗಳು ಗೊಂದಲದ ಕುರಿತು ತಿಳಿಸಿರುವುದರ ಸ್ಪಷ್ಟತೆಯನ್ನು ನೀಡಲಾಗಿದೆ.ಎಸ್ ಎಸ್ ಟಿ, ಎನ್ ಎಸ್ ಟಿ ರೀತಿಯ ತರಬೇತಿಯನ್ನು ನೀಡಲಾಗಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ವೇತನ ಕುರಿತು ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ತಿಳಿಸಿದರು . ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ…
Author: UllalaVani
PostsResponsible GamblingNo deposit Extra Rules To own Current PlayersBetter Totally free Spins Mobile Local casino IncentivesFinest No deposit Bonus CasinosAllege A great twenty-fivepercent Match Extra Of up to 600 On the Last Deposit During the Vegas Cellular Gambling establishment Because it’s the fresh 2020s, you will find that cellular gambling enterprises are available to the ios and Android os devices. Recall, whether or not, that you need a more recent type of their cellphone phone’s operating-system’s.
UN networks ಬೆಂಗಳೂರು: ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ 7 ಅದ್ಭುತಗಳು’ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ 7 ಅದ್ಭುತಗಳು’ ಎಂದು ಘೋಷಿಸಿದ್ದಾರೆ. ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ 7 ಅದ್ಭುತಗಳನ್ನು ಉದ್ಯೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ. ಅದ್ಭುತಗಳೆಂದ ಈ ವಿಶ್ವ ಸುಂದರಿಯರು ನೂರಾರು ವರ್ಷಗಳಿಂದ ಸೌಂದರ್ಯ ಉಳಿಸಿಕೊಂಡಿವೆ. ಸರ್ವ ಕಾಲಕ್ಕೂ ಈ ಸೌಂದರ್ಯ ಹಾಗೇ ಇರಲಿದೆ. ನಮ್ಮ ಗ್ರಂಥಗಳಲ್ಲಿ ಸತ್ಯಂ ಶಿವಂ ಸುಂದರಂ ಎಂದು ತಿಳಿಸಿದಂತೆ ಒಂದು ವಿಚಾರ ಶಾಶ್ವತವಾಗಿ ಸುಂದರವಾಗಿರಬೇಕಾದರೆ ಅದರ ಹಿಂದೆ ಸತ್ಯ, ದೈವತ್ವ, ಸತ್ವ ಅಡಗಿರಬೇಕು. ಈ…
UN NEWS NETWORKS ಉಳ್ಳಾಲ : ಅಲಿಮಾರು ಶ್ರ್ತೀ ರಕ್ತೇಶ್ವರಿ ಕ್ಷೇತ್ರ ಇರಾ ಸೈಟ್ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕರ್ಕೇರ ಇರಾ ಪುನರಾಯ್ಕೆಯಾಗಿದ್ದಾರೆ. ಯತಿರಾಜ ಶೆಟ್ಟಿ ಸಂಪಿಲ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾ„ಕಾರಿಗಳನ್ನು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ರೇಖಾ ಅವಿನಾಶ್‍ಇರಾ, ಕಾರ್ಯದರ್ಶಿಯಾಗಿ ಸತೀಶ್ ಸೈಟ್, ಜೊತೆ ಕಾರ್ಯದರ್ಶಿಯಾಗಿ ರಾಜ ಸೈಟ್, ಕೋಶಾ„ಕಾರಿಯಾಗಿ ಕವಿತಾ ಗೋಪಾಲ್ ನಾಯ್ಕ್, ಸಮಿತಿ ಸದಸ್ಯರಾಗಿ ಬಾಲಕೃಷ್ಣ ಶೆಟ್ಟಿ ಗೋಪಾಲ ಕೋಡಿ, ಪ್ರಕಾಶ್ ಬಾಬು, ದೀಕ್ಷಾ ಮಂಜುನಾಥ ಕೊಟ್ಯಾನ್, ಜೀವನ್ ಮತ್ತು ಸವಿತ ಕೇಶವ ಆಯ್ಕೆಯಾಗಿದ್ದರೆ.
UN NEWS NETWORKSಉಳ್ಳಾಲ : ಶಿವರಾತ್ರಿಯಂದು ನಾವು ಎಚ್ಚರದಲ್ಲಿರ ಬೇಕು. ಮನುಷ್ಯ ಸದಾ ಜಾಗೃತನಾಗಿರುವುದು ಅಗತ್ಯ. ಮನುಷ್ಯರು ಶಿವ ಸ್ವರೂಪಿ ಹಾಗೂ ಜ್ಞಾನ ಸ್ವರೂಪಿಗಳಾದರೆ ಉತ್ತಮ. ಶಿವ ಚಿಂತನೆಗಳನ್ನು ಕವಿಗಳು ಕಾವ್ಯ ರೂಪದಲ್ಲಿ ಕಟ್ಟಿಕೊಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಸಾಹಿತಿ ಸರ್ಪಂಗಳ ಈಶ್ವರ ಭಟ್ ಹೇಳಿದರು.ಶಿವರಾತ್ರಿಯಂದು ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಾಲಯದ ಸಭಾಂಗಣದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಚು. ಸಾ.ಪರಿಷತ್ತು ಇದರ ದ.ಕ.ಜಿಲ್ಲಾಧ್ಯಕ್ಷ ಕವಿ ಹರೀಶ್ ಸುಲಾಯ ಒಡ್ಡಂ ಬೆಟ್ಟು ಉಪವಾಸ ಎಂದರೆ ದೇವರ ಸಮೀಪ ಇರುವುದು.ಇದಕ್ಕೆ ಮಿತಾಹಾರ ಸೇವನೆ ಪೂರಕ. ನಮ್ಮನ್ನು ನಾವು ಅರಿಯಬೇಕು. ನಮ್ಮ ದೋಷಗಳನ್ನು ತಿದ್ದಲು ಭಜನೆ,ಸತ್ಸಂಗ ಅಗತ್ಯ. ಋಷಿ ಮುನಿಗಳ ಸಾಧನೆ ನಮಗೆ ಆದರ್ಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕವಿ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಶಿವನೆಂದರೆ ನಟರಾಜ,ಲಯ ಕಾರಕ. ರುದ್ರ ,ಸೌಂದರ್ಯಗಳೆರಡರ ಸಂಗಮ.ಹುಟ್ಟು ಸಾವುಗಳನ್ನು ತರುವವನು, ಜ್ಞಾನದ ಪ್ರತೀಕ ಎಂದರು.ದೇವಾಲಯದ ಅರ್ಚಕ ರಾಮಕೃಷ್ಣ ಹೊಳ್ಳರು ದೀಪ ಬೆಳಗಿಸಿ…
UN NEWS NETWORKS ಉಳ್ಳಾಲ: ಅಂತರಶಿಸ್ತಿನ ವಿಧಾನ, ನಗು, ಉತ್ತಮವಾದ ಮಾತುಗಳನ್ನು ರೋಗಿಗಳೆದುರು ಪ್ರಸ್ತುಪಡಿಸುವ ತರಬೇತಿ ಯುವವೈದ್ಯರಿಗೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಿಂದ ದೊರೆಯಬೇಕಿದೆ ಎಂದು ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆರ್ಥೊಪೆಡಿಕ್ಸ್ ವಿಭಾಗದ ಆಶ್ರಯದಲ್ಲಿ ಲೆಕ್ಚರ್ ಹಾಲ್ ನಲ್ಲಿ ಆಯೋಜಿಸಲಾದ ಆರ್ಥೊಸ್ಕ್ಯಾನ್ -2023 ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿದರು.ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ರೋಗಿಗಳ ಜೊತೆಗಿನ ಒಡನಾಟ ಉತ್ತಮವಾಗಿದ್ದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕಲ್ಪಿಸಬೇಕಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಆರ್ಥಪೆಡಿಕ್ ವಿಭಾಗ ಮನುಕುಲದಲ್ಲಿ ಹೊಸ ಇತಿಹಾಸವನ್ನು ಸಾಧಿಸಿದೆ. ಜಾಯಿಂಟ್ ರಿಪ್ಲೇಸ್ ಮೆಂಟ್, ಸ್ಟೆಮ್ ಸೆಲ್ ಥೆರಪಿ, ರೊಬೋಟಿಕ್ ಸರ್ಜರಿಯಂತಹ ನೂತನ ತಂತ್ರಜ್ಞಾನದ ಆವಿಷ್ಕಾರಗಳು ನಡೆದಿವೆ. ತರಬೇತುದಾರರು ನಾವೀನ್ಯತೆಯ ಜ್ಞಾನವನ್ನು ಪಡೆಯದೇ ಇದ್ದಲ್ಲಿ ಹಿಂದೆ ಉಳಿಯುವ ಸ್ಥಿತಿಯಿದೆ. ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ಮಹತ್ತರ ಪಾತ್ರವನ್ನು…
UN NEWS NETWORKSಉಳ್ಳಾಲ: ಮೂರು ದಶಕಗಳ ಅಭ್ಯಾಸವೇ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಎಂತಹ ತಂತ್ರಜ್ಞಾನಕ್ಕಿಂತಲೂ ಮಿಗಿಲಾಗಿರುವುದು ಅಭ್ಯಾಸದ ಜ್ಞಾನ. ಯುವವೈದ್ಯರು ತಂತ್ರಜ್ಞಾನದ ಜೊತೆಗೆ ನಾವೀನ್ಯತೆಯತ್ತ ಚಿತ್ತ ಹರಿಸಿ ಮೂತ್ರಶಾಸ್ತ್ರದಲ್ಲಿ ರೋಗಿಗಳ ಆರೈಕೆಯಲ್ಲಿ ಮುಂದುವರಿಯಿರಿ ಎಂದು ಯುರಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಕಾರ್ಯದರ್ಶಿ ಡಾ. ಜಿಜಿ ಲಕ್ಷ್ಮಣ್ ಪ್ರಭು ಅಭಿಪ್ರಾಯಪಟ್ಟರು. ಅವರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಜರಗಿದ ‘ ಮಾಸ್ಟರ್ ಕ್ಲಾಸ್ ಇನ್ ವ್ಯಾಸ್ಕುಲರ್ ಆಕ್ಸೆಸ್ ಸರ್ಜರಿ ಆಂಡ್ ಹ್ಯಾಂಡ್ಸ್ ಆನ್ ವಕ್9ಶಾಪ್ ಆನ್ ವ್ಯಾಸ್ಕ್ಯುಲರ್ ಸೂಚರಿಂಗ್’ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಮೆರಿಕಾದ ಇಂಡಿಯನ್ ಸ್ಕೂಲ್ ಆಫ್ ಯುರಾಲಜಿ ಸಂಸ್ಥೆ ಮೂತ್ರಶಾಸ್ತ್ರ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ಕಸಿ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಅಂಗರಚನಾಶಾಸ್ತ್ರದಲ್ಲಿ ಭಾಗಿಯಾಗಿದೆ. ಯುವವೈದ್ಯರಲ್ಲಿ ತಾಂತ್ರಿಕ ಜ್ಞಾನದ ವೃದ್ಧಿಗೆ ಕಾರ್ಯಗಾರಗಳು ಸಹಕಾರಿ ಎಂದರು.ಕಾರ್ಯಗಾರವನ್ನು ಉದ್ಘಾಟಿಸಿದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಡಾ|…
UN networks ಉಳ್ಳಾಲ: ಕೆಟ್ಟು ನಿಂತ ಲಾರಿಗೆ ಎರಡು ಸ್ಕೂಟರ್ ಗಳು ಢಿಕ್ಕಿ ಹೊಡೆದು ಒಂದು ಸ್ಕೂಟರಿನಲ್ಲಿದ್ದ ಸವಾರ ಸಾವನ್ನಪ್ಪಿ ಸಹಸವಾರ ಗಂಭೀರ ಗಾಯಗೊಂಡು, ಇನ್ನೊಂದು ಸ್ಕೂಟರಿನಲ್ಲಿದ್ದ ಸವಾರ ಗಾಯಗೊಂಡ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26) ಸಾವನ್ನಪ್ಪಿ ದವರು. ಸಹಸವಾರ ಉಮ್ಮರ್ ಫಾರುಕ್ ಎಂಬವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಇನ್ನೊಂದು ಸ್ಕೂಟರಿನಲ್ಲಿದ್ದ ಗಾಯಾಳುಗಳ ವಿವರ ತಿಳಿದುಬಂದಿಲ್ಲ. ಇಬ್ಬರೂ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ವ್ಯಾಪಾರದ ಹಿನ್ನೆಲೆಯಲ್ಲಿ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಒಂದು ಸ್ಕೂಟರ್ ಢಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಸ್ಕೂಟರ್ ಕೂಡ ಢಿಕ್ಕಿ ಹೊಡೆದಿದೆ.ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತಿದ್ದ ಟಿಂಬರ್ ಲಾರಿ ಹಿಂಭಾಗಕ್ಕೆ ಎರಡೂ ಸ್ಕೂಟರ್ ಗಳು ಢಿಕ್ಕಿ ಹೊಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
UN networks ಉಳ್ಳಾಲ: ಅಭಿವೃದ್ಧಿಯ ಹರಿಕಾರ, ರೈತ ನಾಯಕ, ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಜನ್ಮ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಬಿ.ಎಸ್.ಯಡಿಯೂರಪ್ಪರವರ ಜನ್ಮ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ. 27ರಂದು ಸೋಮವಾರ ಬೆಳಿಗ್ಗೆ ಗಂಟೆ 600 ರಿಂದ ಮಧ್ಯಾಹ್ನ ಗಂಟೆ 1.00 ರವರೆಗೆ ಉಳ್ಳಾಲ ತಾಲೂಕಿನ ಜನಸೇವಾ ಯುವಕ ಮಂಡಲ ಅಂಬ್ಲಮೊಗರು ಪರಿಸರದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು.ತೊಕ್ಕೊಟ್ಟಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್‍ನಲ್ಲಿ ಮಾಹಿತಿ ನೀಡಿದ ಅವರು ಜಸ್ಟೀಸ್ ಕೆ. ಎಸ್, ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಟ್ಟೆಯ ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಿದ್ದು, ಸಾಮಾನ್ಯ, ವೈದ್ಯಕೀಯ ವಿಭಾಗ, ಕಿವಿ-ಮೂಗು-ಗಂಟಲು ವಿಭಾಗ, ಕಣ್ಣಿನ ತಪಾಸಣೆ, , ಚರ್ಮ ವಿಭಾಗ, ಎಲುಬು ಮತ್ತು ಕೀಲು ವಿಭಾಗದ ನುರಿತ ವೈದ್ಯರುಗಳಿಂದ ಉಚಿತ ತಪಾಸಣೆ…
UN networks ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷ ದುರಾಡಳಿತ ಮತ್ತು ಅವ್ಯವಹಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದ್ಧ ವೈರಿಯಾಗಿರುವ ಬಿಜೆಪಿ ಉಳ್ಳಾಲ ನಗರಸಭೆಯಲ್ಲಿ ಮಾತ್ರ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ವಕ್ತಾರ ಹಾಗೂ ಉಳ್ಳಾಲ ನಗರಸಭೆಯ ಸದಸ್ಯ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ. ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ನಡದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡೂವರೆ ವರ್ಷದಲ್ಲಿ ಮೂರು ಬಾರಿ ಬಜೆಟ್ ಮಂಡನೆ ಮಾಡಿದರೂ ಕುಡಿಯುವ ನೀರು, ಚರಂಡಿ, ರಸ್ತೆ, ದಾರಿದೀಪ, ಘನತ್ಯಾಜ್ಯದ ಬಗ್ಗ ಯಾವುದೇ ಪರಿಣಾಮಕಾರಿ ಕೆಲಸ ಆಗಿಲ್ಲ. ಬಹುಮತವಿಲ್ಲದಿದ್ದರೂ ಬಿಜೆಪಿಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸ್ಥಾಯಿ ಸಮಿತಿ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ಸದಸ್ಯರನ್ನು ತಟಸ್ಥರಾಗುವಂತೆ ಮಾಡಿ ಕಾನೂನಿಗೆ ವಿರುದ್ಧವಾಗಿ ಕಾಂಗ್ರೆಸ್ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಇದೀಗ ಜನವಿರೋ„ ಬಡ ಜನರಿಗೆ ಪ್ರಯೋಜನವಲ್ಲದ ಬಜೆಟ್ ಮಂಡನೆ ಮಾಡಿದ್ದು,…

