Author: UllalaVani

Kannada News From Coastal Karnataka

ಮುನ್ನೂರು : 2024ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಮುನ್ನೂರು ಯುವಕ ಮಂಡಲಕ್ಕೆ ಮುನ್ನೂರು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ಕಳೆದ 54 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದ ಮುನ್ನೂರು ಯುವಕ ಮಂಡಲ ಕುತ್ತಾರ್ ಮುನ್ನೂರು ಸೌಹಾರ್ದಯುತವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಕಲ್ಪಿಸುತ್ತಾ ಬಂದಿದೆ. ಇವರ ಹಲವು ವರ್ಷಗಳ ಸೇವೆಯನ್ನು ಮನಗಂಡು ನ.1 ಕ್ಕೆ ಜಿಲ್ಲಾ ಪ್ರಶಸ್ತಿಯನ್ನು ಜಿಲ್ಲಾಡಳಿತ ನೀಡಿ ಗೌರವಿಸಿದೆ . ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತದ ವತಿಯಿಂದ ಅಭಿನಂದಿಸಲಾಯಿತು.ಈ ಸಂದರ್ಭ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷರಾದ ಮಹಾಬಲ್. ಟಿ. ದೆಪ್ಪೆಲಿಮಾರ್, ಮುನ್ನೂರು ಯುವಕ ಮಂಡಲ ಸ್ಥಾಪಕ ಸದಸ್ಯರು ಗಳಾದ ವಿಶ್ವನಾಥ್ ತೇವುಲ. ಕೆ ಕೃಷ್ಣಪ್ಪ ಸಾಲಿಯಾನ್ , ಮುನ್ನೂರು ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಮುಂಡೋಳಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಪಂಚಾಯತ್ ಸದಸ್ಯರುಗಳು ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.

Read More

ತೊಕ್ಕೊಟ್ಟು : ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ಸಂಭವಿಸಿದೆ.ದೇರೆಬೈಲ್ ನ ದಿವಂಗತ ಜಗದೀಶ್ ಭಂಡಾರಿ ಅವರ ಪತ್ನಿ ಉಷಾ (72)ಮೃತ ಮಹಿಳೆ.ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲವು ದಿನಗಳ ಹಿಂದೆ ನಿಧನರಾಗಿದ್ದು ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಜೊತೆಗೆ ಸೋಮೇಶ್ವರಕ್ಕೆ ಆಗಮಿಸಿದ್ದರು. ಪಿಂಡಪ್ರದಾನದ ಬಳಿಕ ಸಮುದ್ರ ದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು ಸಮುದ್ರ ತಟಕ್ಕೆ ತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಉಷಾ ಅವರು ಏನ್ ಎಮ್ ಪಿ ಟಿಯಲ್ಲಿ ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಉಷಾ ಅವರಿಗೆ ಮಗಳಿದ್ದಾರೆ. ಮೃತ ದೇಹವನ್ನುಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.ಉಳ್ಳಾಲ ಠಾಣೆಯಲ್ಲಿ…

Read More

ಕೊಣಾಜೆ: ತುಳುನಾಡು ದೈವ ದೇವರ ನಾಡು. ದೈವೀ ಕೃಪೆ ಇದ್ದರೆ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ದೈವ ದೇವರ ಆರಾಧನೆಯೊಂದಿಗೆ ನಮ್ಮ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಹಾಗೂ ಸಂಸ್ಕೃತಿಯ ರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಮುಂಬಾಯಿಯ ಹೇರಂಬಾ ಇಂಡಸ್ಟ್ರೀಸ್‌ ನ ಸಂಸ್ಥಾಪಕರಾದ ಕೂಳೂರು‌ ಕನ್ಯಾನ ಸದಾಶಿವ ಶೆಟ್ಟಿ ಅವರು ಹೇಳಿದರು.ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಅಸೈಗೋಳಿಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಅಯ್ಯಪ್ಪ ಸ್ವಾಮಿ ಸೇವಾ ಭಜನಾ ಮಂಡಳಿ, ಪರಂಜ್ಯೋತಿ ಮಾತೃ ಮಂಡಳಿ ಅಸೈಗೋಳಿ, ಸಂದ್ಯಾ ಭಜನಾ ಭಜನೋತ್ಸವ ಸಮಿತಿ ಅಸೈಗೋಳಿ ಇದರ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಡೆದ ಭಜನಾ ಸಂಕೀರ್ತನೆಯ ಮಂಗಳೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಚಿಂತನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಜೀವನದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಉತ್ತಮತೆಯ ಮೂಲಕ ಜನರ ಪ್ರೀತಿಗಳಿಸುವುದು ಮುಖ್ಯ. ಮಹಾಲಕ್ಷ್ಮೀಯು ನಮಗೆ ಒಲಿಯಬೇಕಾದರೆ ಸರಸ್ವತಿಯ ಕೃಪೆಯೊಂದಿಗೆ ಪರಿಶ್ರಮ, ಪ್ರಯತ್ನಗಳು ಕೂಡಾ ಅತ್ಯಗತ್ಯ ಎಂದರು.ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ…

Read More

ತೊಕ್ಕೊಟ್ಟು: ಜಿಪ್ಸೀ ವಾಹನ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಸಹಸವಾರೆ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.ಎಲಿಯಾರ್ ಪದವು ಸಂಪಿಗೆದಡಿ ನಿವಾಸಿ ಅರುಣ್ ಪೂಜಾರಿ(43) ಮೃತರು. ಸಹಸವಾರೆ ಬಾರ್ ನ ಸ್ವಚ್ಛತಾ ಸಿಬ್ಬಂದಿ ಹೇಮಾವತಿ ಗಂಭೀರ ಗಾಯಗೊಂಡಿದ್ದಾರೆ. ಕಾಪಿಕಾಡು ಸಮೀಪದ ವೈನ್ ಆಂಡ್ ಡೈನ್ ಬಾರಿನಲ್ಲಿ ಹಲವು ವರ್ಷಗಳಿಂದ ವೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್, ಶನಿವಾರ ತಡರಾತ್ರಿ ಕರ್ತವ್ಯ ಮುಗಿಸಿ ಆಕ್ಟಿವಾ ಸ್ಕೂಟರ್ ಮೂಲಕ ಎಲಿಯಾರುಪದವು ಮನೆ ಕಡೆಗೆ ತೆರಳುವಾಗ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ನಡೆಸಿ ಬಂದ ಜಿಪ್ಸೀ ವಾಹನ ಚಾಲಕ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅರುಣ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಸಹಸವಾರೆ ಹೇಮಾವತಿ ಅವರ ಕಾಲಿಗೆ ಗಂಭೀರ ಗಾಯಗಳಾಗಿದೆ. ಅಪಘಾತದ ತೀವ್ರತೆಗೆ ಆಕ್ಟಿವಾ ಸ್ಕೂಟರಿನ ಸೀಟ್ , ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ…

Read More

ಕಲ್ಲಾಪು: ತೊಕ್ಕೊಟ್ಟು ಭಾಗದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರೊಂದರ ಎರಡೂ ಟಯರುಗಳು ನೇತ್ರಾವತಿ ಹಳೇಯ ಸೇತುವೆಯ ರಾಡುಗಳಿಗೆ ತಗಲಿ ಒಡೆದುಹೋಗಿರುವ ಕುರಿತು ಕಾರು ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.ಡಿ.14 ರಂದು ಮಂಗಳೂರು ಕಡೆಗೆ ತೆರಳುತ್ತಿದ್ದ ವೆನ್ಯೂ ಕಾರು ನೇತ್ರಾವತಿ ಸೇತುವೆಯಲ್ಲಿ ಹೊಂಡಕ್ಕೆ ಬಿದ್ದಿದೆ. ಇದೇ ವೇಳೆ ಒಂದೇ ಬದಿಯ ಎರಡು ಟಯರುಗಳು ಒಡೆದುಹೋಗಿ ಪಂಕ್ಚರ್ ಆಗಿದೆ. ಕಾರಿನಿಂದ ಇಳಿದ ಮಾಲೀಕರು ಸೇತುವೆಯನ್ನು ಗಮನಿಸಿದಾಗ ಸೇತುವೆಯ ರಾಡ್ ಎದ್ದು ಟಯರಿಗೆ ಚುಚ್ಚಿರುವುದು ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿ -66ರ ಅವ್ಯವಸ್ಥೆಯಿಂದಾಗಿ ಕಾರಿನಲ್ಲಿದ್ದವರು ತೊಂದರೆಗೀಡಾಗುವಂತಾಯಿತು. ಈ ಕುರಿತು ವೀಡಿಯೋ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾರು ಮಾಲೀಕರು ಎಲ್ಲಾ ವಾಹನ ಸವಾರರು ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದು, ಸ್ವಲ್ಪ ತಪ್ಪಿದರೂ ಅಪಘಾತವೇ ನಡೆಯುತಿತ್ತು ಎಂದು ನೋವನ್ನು ಹಂಚಿಕೊಂಡಿದ್ದಾರೆ. ಸುಂಕ ವಸೂಲಾತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸುಂಕ ಪಡೆಯುತ್ತಿರುವ ಹೆದ್ದಾರಿ ನಿರ್ವಹಣೆ ವಹಿಸಿಕೊಂಡಿರುವ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಇಲಾಖಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬಂದಿದೆ.

Read More

ಕೊಲ್ಯ: ಸೋಮೇಶ್ವರ ಕೊಲ್ಯ ಇಲ್ಲಿನ ಶ್ರೀ ರಾಮ ಭಜನಾ ಮಂದಿರದ 74 ನೇ ವಾರ್ಷಿಕೋತ್ಸವಕ್ಕೆ ಶಶಿಪ್ರಭಾ ಮತ್ತು ತಾರನಾಥ ಗಟ್ಟಿ ಕುತ್ತಾರು ದಂಪತಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಮಂದಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಗಟ್ಟಿ ದ್ವಾರಕಾನಗರ, ಪ್ರಧಾನ ಕಾರ‍್ಯದರ್ಶಿ ಪ್ರೀತಂ ಕುಮಾರ್ ಕೊಲ್ಯ, ಕೋಶಾಧಿಕಾರಿ ದಿನೇಶ್ ಪರ್ಯತ್ತೂರು, ಗೌರವ ಸಲಹೆಗಾರರಾದ ಶೇಖರ್ ಕನೀರುತೋಟ, ಈಶ್ವರ್ ಸುವರ್ಣ ಕನೀರುತೋಟ, ಜಯಂತ್ ಪರ್ಯತ್ತೂರು, ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ವಿಶ್ವಾಸ್ ಕುಲಾಲ್, ಉಪಾಧ್ಯಕ್ಷ ಚೇತನ್ ಕುಲಾಲ್, ಕಾರ‍್ಯದರ್ಶಿ ಜಿತೇಶ್ ಮಾಡೂರು, ಮಹಿಳಾ ಮಂಡಲದ ಅಧ್ಯಕ್ಷೆ ಚಂಚಲಾಕ್ಷಿ ಕೊಲ್ಯ, ಶಾರದಾ ಕೊಲ್ಯ, ಕುಸುಮ ಕಾಸಿಂಬೆಟ್ಟು, ದೇವಕಿ ಕೊಲ್ಯ, ದೇವಕಿ ಕಾಸಿಂಬೆಟ್ಟು, ಜಯಶ್ರೀ , ಸುಂದರಿ, ಪ್ರವೀಣ್ ಕೊಲ್ಯ ಮುಂತಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ: ಪೂಜ್ಯನೀಯ ಕುದ್ಮುಲ್ ರಂಗರಾವ್ ತತ್ವ ಆದರ್ಶದಡಿ ಸ್ಥಾಪಿತವಾದ ಉಳ್ಳಾಲ ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿಇವರ 50 ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಡಿ.15 ರಿಂದ 22 ರ ವರೆಗೆ ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಂಟು ದಿನಗಳ ಕಾಲ ವಿಜೃಂಭಣೆಯಿAದ ಜರುಗಲಿದ್ದು, ರಾಜ್ಯ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಗಣ್ಯರು ಸುವರ್ಣ ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ, ಶ್ರೀ ಸತ್ಯನಾರಾಯಣ ಮಂದಿರದಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಸುರೇಶ್ ಭಟ್ನಗರ ಹೇಳಿದರು. ಶುಕ್ರವಾರ ತೊಕ್ಕೊಟ್ಟು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ಅದ್ಧೂರಿಯಾಗಿ ಜರಗುವ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾಧಿಗಳು ಭಾಗವಹಿಸುವಂತೆ ಕೋರಿದರು. ಒಟ್ಟು 8 ದಿನಗಳ ಕಾರ್ಯಕ್ರಮದ ವಿವರ ನೀಡಿದ ಗೌರವ ಸಲಹೆಗಾರರಾದ ರೋಹಿತ್ ಉಳ್ಳಾಲ್ ಮಾತನಾಡಿ, ಡಿಸೆಂಬರ್ 15 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ…

Read More

ಕೈರಂಗಳ : ಹದಿಹರೆಯ ಅನ್ನುವುದು ಅತ್ಯಂತ ಪ್ರಾಮುಖ್ಯವಾದ ಘಟ್ಟ, ವ್ಯಕ್ತಿತ್ವ ವಿಕಸನದ ಕಾಲಘಟ್ಟ. ಈ ವೇಳೆ ಉಂಟಾಗುವ ಸಮಸ್ಯೆಗಳು ಜೀವನದುದ್ದಕ್ಕೂ ತೊಂದರೆಗಳನ್ನು ತಂದೊಡ್ಡಬಹುದು. ಅದನ್ನು ಸರಿಯಾದ ವೈದ್ಯರ ಸಲಹೆಗಳಂತೆ ಸೂಕ್ತ ಮಾರ್ಗದರ್ಶನಗಳನ್ನು ಪಡೆದುಕೊಂಡು ಜೀವನದಲ್ಲಿ ಅನ್ವಯಿಸುವ ಮುಖೇನ ಸದೃಢ ಆರೋಗ್ಯವನ್ನು ನಮ್ಮದಾಗಿಸಬಹುದು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ವಿವಿಧ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಆರೋಗ್ಯ ಶಿಬಿರ ಶ್ಲಾಘನಾರ್ಹ ಎಂದು ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಅಭಿಪ್ರಾಯಪಟ್ಟರು.ಲೈಫ್ ನೆಸ್ಟ್ ಟ್ರಸ್ಟ್ , ಮಂಗಳೂರು, ಉಳ್ಳಾಲವಾಣಿ ಕನ್ನಡಪತ್ರಿಕೆ, ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಶಾರದಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹದಿಹರೆಯದಲ್ಲಿ ಸಹಜವಾದ ಪ್ರಕ್ರಿಯೆಗಳು ನಡೆಯುವ ವೇಳೆ ಹಲವು ಸಮಸ್ಯೆಗಳು ಎದುರಾಗಬಹುದು. ಅದನ್ನು ಮುಕ್ತವಾಗಿ ವೈದ್ಯರ ಜತೆಗೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಜೀವನವನ್ನು ಆರೋಗ್ಯಯುತಗೊಳಿಸಬಹುದು. ಇಂತಹ ಉತ್ತಮ ಕಾರ್ಯಕ್ಕೆ ಎಂದರು.ಮುಖ್ಯ ಅತಿಥಿಗಳಾಗಿ…

Read More

ಹರೇಕಳ : ಆಧುನಿಕತೆಯ ಭರಾಟೆಯಲ್ಲಿ ಪ್ರತಿಯೊಬ್ಬರು ತಮ್ಮ ಕೆಲಸ ಕಾರ್ಯಗಳಲ್ಲಿ ಪ್ರತಿದಿನ ಒತ್ತಡದಿಂದ ಕಾಲ ಕಳೆಯುತ್ತಾರೆ. ಆದರೆ ದೈಹಿಕವಾಗಿ ನಾವು ಸಶಕ್ತನಾಗಿದ್ದರೆ ಮಾತ್ರ ಜೀವನದಲ್ಲಿ ಯಾವುದನ್ನು ಕೂಡ ಅನುಭವಿಸಲು ಸಾಧ್ಯ. ಆರೋಗ್ಯವೇ ಹದಗೆಟ್ಟರೇ ನಿತ್ಯ ಕರ್ಮಗಳನ್ನು ಕೂಡ ನಮ್ಮಿಂದ ನಿರ್ವಹಿಸಲು ಅಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗಿಗಳಾಗುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಸಾಮಾಜಿಕ ಧಾರ್ಮಿಕ ಮುಂದಾಳು ಚಿತ್ರಂಜನ್ ಮಾಡ ಅಭಿಪ್ರಾಯ ಪಟ್ಟರು.ಅವರು ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾವೂರು ಹರೇಕಳ ಇವುಗಳ ಸಂಯುಕ್ತ ಆಶಯದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ – ಕ್ರೀಡಾ ಚಿಲುಮೆಯನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡಾಕೂಟದ ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಅವರು ಹರೇಕಳ ವಿದ್ಯಾ ಸಂಸ್ಥೆಯು ಉಳ್ಳಾಲ ಭಾಗದಲ್ಲಿ ಹಲವು ವರ್ಷಗಳ ಇತಿಹಾಸವನ್ನು ಹೊಂದಿದ ಕನ್ನಡ ಮಾಧ್ಯಮ ಶಾಲೆಯಾಗಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಾಗಿ,ವೈದ್ಯಾಧಿ ಕಾರಿಗಳಾಗಿ, ನ್ಯಾಯಧೀಶರಾಗಿ,…

Read More

ತೊಕ್ಕೊಟ್ಟು: ಕಳೆದ ಲಕ್ಷಾಂತರ ವರ್ಷಗಳಿಂದ ಬೆಳಕಿನ ಜ್ಞಾನದ ಆರಾಧನೆ ಇಲ್ಲಿ ನಡೆಯಿತು. ಯುಗಗಳ ಕಲ್ಪನೆ ತೆಗೆದುಕೊಂಡರೆ ಕಲಿಯುಗ ಪ್ರಾರಂಭವಾಗಿ 5126ನೇ ವರ್ಷ ನಡೆಯುತ್ತಿದೆ. ಜ್ಞಾನದ ಆರಾಧನೆಯಾಗುವಂತದ್ದು ಎಲ್ಲವೂ ವೇದಗಳ ಕಾಲವೇ ಆಗಿದೆ ಎಂದು ಗೋ ಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ವನ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮಂಗಳೂರು ಇಲ್ಲಿ “ನಾರಿಶಕ್ತಿ” ಎಂಬ ಪರಿಕಲ್ಪನೆಯೊಂದಿಗೆ ಜರಗಿದ ರಾಷ್ಟ್ರೋತ್ಸವ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ನಾಲ್ಕು ಯುಗಗಳ ಲೆಕ್ಕಾಚಾರವನ್ನು ಸಂಖ್ಯೆಸಹಿತ ಸಭಿಕರಿಗೆ ಕೆಲವು ಉದಾಹರಣೆಗಳ ಮೂಲಕ ವಿವರಿಸಿದ ಅವರು “ಗೋವು ಮತ್ತು ಗುರುಕುಲ ಜೊತೆ ಜೊತೆಗೆ ಇತ್ತು. ಗೋವು ಎಂದರೆ ಜ್ಞಾನ. ಶಿಕ್ಷಣ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾದದ್ದಲ್ಲ. ಜಗತ್ತಿನ ಆತ್ಯಂತ ಶ್ರೇಷ್ಟ ವೃತ್ತಿ ಏನೆಂದರೆ ಅದು ‘ಗೋಪಾಲನೆ’, ಜಗತ್ತಿನ ಅತ್ಯಂತ ಶ್ರೇಷ್ಟ ಗ್ರಂಥ ‘ಭಗವದ್ಗೀತೆ’ ಅದನ್ನು ಕೃಷ್ಣ ಕೊಟ್ಟಿರುವುದು ಗೋ ಪಾಲನೆ ಮಾಡಿರುವುದರಿಂದ, ಗುರುಕುಲ ಶಿಕ್ಷಣ ಗೋವಿನ ಜೊತೆ ಜೊತೆಗೆ ವಿಕಾಸವಾಯಿತು” ಎಂಬ…

Read More