Author: UllalaVani

Kannada News From Coastal Karnataka

ದೇರಳಕಟ್ಟೆ : ನರೇಗಾ ಕಾಮಗಾರಿ ಅನುಷ್ಠಾನ ಮಾಡುವಲ್ಲಿ ಆರ್ಥಿಕವಾಗಿ ಏನಾದರೂ ಸಮಸ್ಯೆಯಾದಲ್ಲಿ ಎನ್‍ಆರ್‍ಎಲ್‍ಎಮ್ ಒಕ್ಕೂಟದಿಂದ ಸಾಲ ಪಡೆದು ಕಾಮಗಾರಿ ನಡೆಸಬೇಕಿದೆ. ನಂತರ ಅನುದಾನ ಬಿಡುಗಡೆಯಾದ ಕೂಡಲೇ ಮತ್ತೆ ಒಕ್ಕೂಟಕ್ಕೆ ಮರುಪಾವತಿ ಮಾಡಿ. ಅಷ್ಟೇ ಅಲ್ಲ ಈ ಬಾರಿ ಅತೀ ಹೆಚ್ಚು ಕಾಮಗಾರಿ ಬೇಡಿಕೆ ಸಂಗ್ರಹಿಸಿ ತಂದ ಅಭ್ಯರ್ಥಿಗೆ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಉಳ್ಳಾಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ತ್ ಎಮ್.ಎನ್ ಹೇಳಿದ್ದಾರೆ.ಅವರು ಉಳ್ಳಾಲ ತಾಲೂಕು ಪಂಚಾಯತ್ ವ್ಯಾಪ್ತಿಯ ಕೃಷಿ ಸಖಿ- ಪಶು ಸಖಿಯರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಲೂಕು ಮಟ್ಟದ ಮಾಹಿತಿ ಕಾರ್ಯಗಾರಕ್ಕೆ ಇಂದು ಉಳ್ಳಾಲ ತಾಲೂಕು ಪಂಚಾಯತ್ ನ ಬೆಳ್ಮ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಕೃಷಿ ಸಖಿ -ಪಶು ಸಖಿಯರು ಹೋಗಿ ಮಾಹಿತಿ ನೀಡಿದಾಗ ಜನ ಉತ್ತಮವಾಗಿ ಸ್ಪಂಧಿಸುತ್ತಾರೆ. ಎಲ್ಲದಕ್ಕೂ ಮೊದಲು ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಾಗಬೇಕು. ಆಗ ಮಾತ್ರ ಯೋಜನೆಗಳ ಬಗ್ಗೆ ಇತರರಿಗೆ ತಿಳಿಸಲು ಸಾಧ್ಯ ಎಂದ ಅವರು, ಮುಂದಿನ…

Read More

ತೊಕ್ಕೊಟ್ಟು: ಕಳೆದ 30 ಕ್ಕೂ ಅಧಿಕ ವರ್ಷಗಳಿಂದ ಸಿಟಿ ಬಸ್‌ ನಲ್ಲಿ ಚಾಲಕರಾಗಿ ಇದೀಗ ಕೆಲ ವರ್ಷಗಳಿಂದ ಟೂರಿಸ್ಟ್‌ ಬಸ್ಸಿನಲ್ಲಿ ದುಡಿಯುತ್ತಿದ್ದ ಎಲ್ಲರಿಗೂ ಚಿರಪರಿಚಿತ ನೇರ ಮಾತುಗಳನ್ನಾಡುತ್ತಿದ್ದ ಪ್ರಯಾಣಿಕರ ಅಚ್ಚುಮೆಚ್ಚಿನ , ಸ್ಟೇಟ್‌ ಬ್ಯಾಂಕ್‌ -ಕೊಣಾಜೆ ನಡುವೆ ಸಂಚರಿಸುತ್ತಿದ್ದ ಸುಷ್ಮಿತಾ ಟ್ರಾವೆಲ್ಸ್‌ ಸಿಟಿ ಬಸ್‌ ನ ಚಾಲಕ ಹೆರಾಲ್ಡ್‌ ಡಿಸೋಜ (ಹ್ಯಾರಿ ಮಾಮ)(56) ಇಂದು ನಿಧನ ಹೊಂದಿದ್ದಾರೆ.ಶುಕ್ರವಾರದವರೆಗೂ ಕರ್ತವ್ಯ ನಿರ್ವಹಿಸಿದ್ದ ಹ್ಯಾರಿ ಅವರು ಅಸೌಖ್ಯದಿಂದಾಗಿ ಇಂದು ನಿಧನಹೊಂದಿದ್ದಾರೆ. ಸ್ಟೇಟ್‌ ಬ್ಯಾಂಕ್‌ -ಕೊಣಾಜೆ ಚಲಿಸುತ್ತಿದ್ದ 51 ನಂಬರಿನ ನವಭಾರತ್‌, ಕ್ರಿಸ್ತರಾಜ್‌, ಫ್ರೀಡಾ ಟ್ರಾವೆಲ್ಸ್‌ ನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಸುಷ್ಮಿತಾ ಟ್ರಾವೆಲ್ಸ್‌ ಬಸ್ಸಿನಲ್ಲಿ ಸುದೀರ್ಘವಾಗಿ 20 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಬಸ್ಸಿನಲ್ಲಿ ಬರುವ ಬಹುತೇಕ ಪ್ರಯಾಣಿಕರ ಪರಿಚಯವಿದ್ದ ಅವರು ನೇರ ಮಾತುಗಳಿಂದ ಎಲ್ಲರ ಗಮನಸೆಳೆದಿದ್ದರು. ಸುಷ್ಮಿತಾ ಟ್ರಾವೆಲ್ಸ್‌ ನಲ್ಲಿ ಚಾಲಕರಾಗಿ ಹೆರಾಲ್ಡ್‌ ಅವರಿದ್ದರೆ ನಿರ್ವಾಹಕರಾಗಿ ನಾರಾಯಣನ್ನ ನಿರಂತರವಾಗಿರುತ್ತಿದ್ದರು. ಇಬ್ಬರ ಜೋಡಿಯ ಪರಿಚಯವಿಲ್ಲದ ಕೊಣಾಜೆ-ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1995 ರಿಂದ…

Read More

ತೊಕ್ಕೊಟ್ಟು : ಶನಿವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ರೆಹಮತ್‌ (೪೭) ಎಂಬವರು ಸಾವನ್ನಪ್ಪಿ ಉದ್ರಿಕ್ತರು ಹಾಗೂ ಡಿವೈಎಫ್‌ ಐ ಪ್ರತಿಭಟಿಸಿದ ಬೆನ್ನಲ್ಲೇ ರಾತ್ರೋರಾತ್ರಿ ಲೋಕೋಪಯೋಗಿ ಇಲಾಖೆ ರಸ್ತೆಯ ಹೊಂಡಗಳನ್ನು ಮುಚ್ಚುವ ದುರ್ಸತಿ ಕಾರ್ಯಕ್ಕೆ ಕೈಹಾಕಿದೆ. ತೊಕ್ಕೊಟ್ಟು ಚೆಂಬುಗುಡ್ಡೆವರೆಗಿನ ರಸ್ತೆಯ ಹೊಂಡಗಳನ್ನು ಮುಚ್ಚಲಾಗುತ್ತಿದೆ. ಒಂದು ಜೆಸಿಬಿ ಹಾಗೂ ಐವರು ಕಾರ್ಮಿಕರು ಅಪಘಾತ ನಡೆದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದ ಹೊಂಡಗಳನ್ನು ಮರುಡಾಮರೀಕರಣ ನಡೆಸಿ ಮುಚ್ಚುತ್ತಿದ್ದಾರೆ. ರಸ್ತೆ ದುರಸ್ತಿ ನಡೆಸಲು ಮಹಿಳೆಯೊಬ್ಬರ ಜೀವ ಬಲಿಬೇಕಾಯಿತು ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈಗಾಗಲೇ ತೊಕ್ಕೊಟ್ಟು-ಚೆಂಬುಗುಡ್ಡೆ ರಸ್ತೆ ಚತುಷ್ಪಥ ಕಾಮಗಾರಿಯೂ ಆರಂಭಗೊಂಡಿದ್ದು, ಚೆಂಬುಗುಡ್ಡೆ ಭಾಗದಲ್ಲಿ ಗುಡ್ಡವನ್ನು ಅಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಮಗಾರಿ ವೇಳೆ ಪರ್ಯಾಯ ರಸ್ತೆಯಾಗಿ ಇರುವ ಚೆಂಬುಗುಡ್ಡೆ ಸ್ಮಶಾನ ರಸ್ತೆಯ ಅಭಿವೃದ್ಧಿಯೂ ನಡೆಯುತ್ತಿದೆ.

Read More

ತೊಕ್ಕೊಟ್ಟು: ತೊಕ್ಕೊಟ್ಟು-ಕೊಣಾಜೆ ರಸ್ತೆಯ ಸೇವಾಸೌಧದೆದುರು ನಡೆದ ಅಪಘಾತ ಬೆನ್ನಲ್ಲೇ ತಡರಾತ್ರಿ 9ರ ಸುಮಾರಿಗೆ ಡಿವೈಎಫ್ ಐ ಕಾರ‍್ಯಕರ್ತರು ಘಟನಾ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ. ಈ ನಡುವೆ ಕ್ಷೇಮ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಕೇಂದ್ರ ಸಚಿವರ ಕಾರನ್ನು ಸ್ಪೀಕರ್ ಯು.ಟಿ.ಖಾದರ್ ಕಾರೆಂದು ತಪ್ಪಾಗಿ ಗ್ರಹಿಸಿ ಡಿವೈಎಫ್ ಐ ಕಾರ‍್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ತಕ್ಷಣವೇ ಎಸ್ಕಾಟ್ ð ಮತ್ತು ಠಾಣಾ ಪೊಲೀಸರು ರಸ್ತೆ ತೆರವುಗೊಳಿಸಿ ಸಚಿವರ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಂಡರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ನಿತಿನ್ ಕುತ್ತಾರ್ ಇಲ್ಲಿನ ಶಾಸಕರಾದ ಯು.ಟಿ.ಖಾದರ್ ಈ ರಸ್ತೆಯನ್ನು ಟೋಲ್ ಮುಕ್ತ ರಸ್ತೆ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ, ಇವತ್ತು ಇಲ್ಲಿ ಅಪಘಾತ ಸಂಭವಿಸಿ ಒಂದು ಮಹಿಳೆಯ ಪ್ರಾಣವೇ ಹೋಗಿದೆ. ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದ ಇವರು ಯಾವ ಸೀಮೆಯ ಅಭಿವೃದ್ದಿಯ ಹರಿಕಾರ ಎಂದು ಹರಿಹಾಯ್ದರು.ಇನ್ನೊಂದು ವಾರದಲ್ಲಿ ಈ ರಸ್ತೆಯನ್ನು ಸರಿಪಡಿಸದೇ ಇದ್ದಲ್ಲಿ ಶಾಸಕರ ಕಛೇರಿಗೆ…

Read More

ತೊಕ್ಕೊಟ್ಟು: ತನ್ನ ಸಹೋದರಿಯ ಪುತ್ರಿ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವದಂಪತಿ ಸೌದಿ ಅರೆಬಿಯಾ ತೆರಳುವವರಿದ್ದರು. ಅವರ ಬೀಳ್ಕೊಡುಗೆಗಾಗಿ ಚಿಕ್ಕಮ್ಮ ರೆಹಮತ್ (47) ಪತಿ ರಶೀದ್ ಜೊತೆಗೆ ಸ್ಕೂಟರಿನಲ್ಲಿ ತೆರಳುವ ಸಂದರ್ಭ ಯಮರೂಪಿಯಾದ ತೊಕ್ಕೊಟ್ಟು-ಕೊಣಾಜೆ ರಸ್ತೆಯ ಸೇವಾಸೌಧ ಎದುರುಗಡೆಯ ಹೊಂಡ ರೆಹಮತ್ ಅವರನ್ನೇ ಬಲಿಪಡೆದುಕೊಂಡಿದೆ. ತೊಕ್ಕೊಟ್ಟು ವಿನಲ್ಲಿ ಟ್ಯಾಂಕರ್ ಅಡಿಗೆ ಬಿದ್ದು ಸಾವನ್ನಪ್ಪಿದ ರೆಹಮತ್ ಅವರ ಸಹೋದರಿಯ ಪುತ್ರಿಗೆ ಆರು ತಿಂಗಳ ಹಿಂದೆ ವಿವಾಹವಾಗಿತ್ತು. ಇಂದು ಸಂಜೆ ವಿಮಾನದಲ್ಲಿ ನವದಂಪತಿ ಸೌದಿ ಅರೆಬಿಯಾ ತೆರಳುವವರಿದ್ದರು. ಅದಕ್ಕಾಗಿ ರಶೀದ್-ರೆಹಮತ್ ದಂಪತಿ ನವದಂಪತಿ ಬೀಳ್ಕೊಡುಗೆಗಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭ ಮಾರ್ಗಮಧ್ಯೆ ದುರಂತ ಸಂಭವಿಸಿದೆ. ದೇರಳಕಟ್ಟೆ ಕಡೆಯಿಂದ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಅವರ ಮೇಲೆ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. 108…

Read More

ತೊಕ್ಕೊಟ್ಟು: ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ಎದುರಿನ ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ. ರಸ್ತೆ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು  ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಸಿಬ್ಬಂದಿ ರಶೀದ್ ಎಂಬವರ ಪತ್ನಿ ರೆಹಮತ್ (47) ಮೃತರು. ದೇರಳಕಟ್ಟೆ ಕಡೆಯಿಂದ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಅವರ ಮೇಲೆ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಘಟನೆ ನಡೆದಿರುವುದಾಗಿ ಆರೋಪಿಸಿದ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದೆ. ಇದರಿಂದಾಗಿ…

Read More

ಕೆ.ಸಿ.ರೋಡ್ : ಇತ್ತೀಚೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಉಳ್ಳಾಲದ ವಿಶ್ವ ಹಿಂದು ಪರಿಷತ್ ಮುಖಂಡ ಅರ್ಜುನ್ ಮಾಡೂರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಕೇರಳ ಮೂಲದ ಆರೋಪಿಯಿದ್ದ ಕಾರೊಂದರ ಮೇಲೆ ಹೆಲ್ಮೆಟ್ ಧರಿಸಿದ ಎಂಟು ಮಂದಿ ದುಷ್ಕರ್ಮಿಗಳ ತಂಡ ರಾಷ್ಟ್ರೀಯ ಹೆದ್ದಾರಿ 66 ರ ಕೆ.ಸಿ.ರೋಡ್- ಉಚ್ಚಿಲ ಜಿಯೋ ಪೆಟ್ರೋಲ್ ಪಂಪ್ ಎದುರುಗಡೆ ದಾಳಿಗೆ ಯತ್ನಿಸಿದ ಘಟನೆ ತಡರಾತ್ರಿ ವೇಳೆ ಸಂಭವಿಸಿದೆ.ಅ.17 ರಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಶರತ್ ಕುಂಪಲ ಎಂಬವರ ಪರವಾಗಿ ಉಳ್ಳಾಲದ ಹಿಂದೂ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ತೆರಳಿದ್ದರು. ಈ ಸಂದರ್ಭ ಅಪಘಾತದ ಪ್ರಕರಣದಲ್ಲಿ ಶರತ್ ಅವರ ಎದುರಾಳಿಯಾಗಿದ್ದ ಕೇರಳ ಹೊಸಂಗಡಿ ನಿವಾಸಿ ಆಸೀಫ್ ಜೊತೆ ಮಾತಿಗೆ ಮಾತು ಬೆಳೆದು ಅರ್ಜುನ್ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಸಂಬಂಧ ರಾತ್ರೋರಾತ್ರಿ ಹಿಂದು ಸಂಘಟನೆ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು.…

Read More

ಕೋಟೆಕಾರು: ಬೆಳ್ಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಕಟ್ಟಡದ ತ್ಯಾಜ್ಯ ನೀರನ್ನು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹರಿಯಬಿಡುತ್ತಿರುವ ವಿರುದ್ಧ ಕೋಟೆಕಾರು ಪಟ್ಟಣ ಪಂಚಾಯತ್ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂಧನೆ ಸಿಗದ ಹಿನ್ನೆಲೆಯಲ್ಲಿ ಬೆಳ್ಮ ಪಂ. ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಪರಿಸರ ಅಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ.2022 ರ ಸೆ.26 ಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮೊದಲ ಪತ್ರವನ್ನು ಕಳುಹಿಸಲಾಗಿತ್ತು.2022ರ, ಅ.14 ರಂದು ಎರಡನೇ ಬಾರಿ ಪತ್ರವನ್ನು ಬರೆಯಲಾಗಿತ್ತು. ಆದರೂ ಸ್ಪಂದನೆ ಸಿಗಲಿಲ್ಲದ ಹಿನ್ನೆಲೆಯಲ್ಲಿ ಮತ್ತೆ ಮೂರನೇ ಬಾರಿಯಾಗಿ ನ.2 ರಂದು ಮತ್ತೊಮ್ಮೆ ಮನವಿ ಸಲ್ಲಿಸಲಾಯಿತು. ಅದಕ್ಕೂ ಏನೂ ಪ್ರತಿಕ್ರಿಯೆ ಸಿಗದೇ ಇದ್ದಾಗ 2022 ರ ಡಿ.8 ರಂದು ಕೊನೇಯ ಪತ್ರ ಬರೆದ ನಂತರ ಡಿ.13 ರಂದು ಜಿಲ್ಲಾ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಲಾಯಿತು. ಬೆನ್ನು ಬೆನ್ನಿಗೇ ಪತ್ರಗಳನ್ನು ಬರೆದರೂ ಬೆಳ್ಮ ಗ್ರಾಮ ಪಂಚಾಯತ್ ಆಡಳಿತವಾಗಲಿ, ಅಧಿಕಾರಿ ವರ್ಗವಾಗಲಿ ಪ್ರತಿಕ್ರಿಯೆನೇ ನಡೆಸಲಿಲ್ಲ.ಇದೀಗ ಕೋಟೆಕಾರು ಪಟ್ಟಣ…

Read More

ಕೈರಂಗಳ: ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಮಹಾಸಂಸ್ಥಾನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರ ಕಾರಿನ ಮೇಲೆ ನಡೆದ ದಾಳಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಗುರುರಾಜ್ ಭಟ್ ಕೈರಂಗಳ ತೀವ್ರವಾಗಿ ಖಂಡಿಸಿದ್ದಾರೆ.ಪ್ರಸಿದ್ಧ ಶಂಕರಾಚಾರ್ಯ ಪರಂಪರೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ವಾಹನದಲ್ಲಿರುವ ಸಂದರ್ಭದಲ್ಲಿ ನಡೆದಿರುವ ದಾಳಿ ಅತ್ಯಂತ ಖಂಡನೀಯ..ಯಕ್ಷಗಾನ ಕಲೆ ಸಾಹಿತ್ಯ ಸಾಮಾಜಿಕ ಚಟುವಟಿಕೆಗಳಿಗೆ ಅಗತ್ಯ ಪ್ರಾಶಸ್ತ್ಯ ನೀಡಿ ಸಮಾಜಕ್ಕೋಸ್ಕರ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟಿರುವ ಸ್ವಾಮೀಜಿಯವರ ಮೇಲಿನ ದಾಳಿಯನ್ನು ಖಂಡಿಸುತ್ತಾ ಇದರ ಕುರಿತು ಉನ್ನತ ಮಟ್ಟದ ತನಿಖೆ ಮಾಡಬೇಕು ಹಾಗೂ ಸ್ವಾಮಿಗಳಿಗೆ ಮತ್ತು ಮಠಕ್ಕೆ ಹೆಚ್ಚಿನ ಭದ್ರತೆಯನ್ನು ಕೇರಳ ಸರಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Read More

ಉಳ್ಳಾಲ : ಉಳ್ಳಾಲ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಸಿಕ ಸಭೆ ಹಾಗೂ ಸೌಹಾರ್ದ ದೀಪಾವಳಿ ಆಚರಣೆ ತೊಕ್ಕೊಟ್ಟು ಕಲ್ಲಾಪುವಿನ ಕಾರುಣ್ಯ ಸದನದಲ್ಲಿ ವಿಶಿಷ್ಟವಾಗಿ ನಡೆಯಿತು.ಮಂಡಲದ ಪ್ರತಿಯೋರ್ವ ಸದಸ್ಯರು ಹಬ್ಬದ ಆಚರಣೆ ಪ್ರಯುಕ್ತ ಮನೆಯಿಂದ ತಯಾರಿಸಲಾದ, ಸಿಹಿತಿಂಡಿಗಳನ್ನು ತಂದು ಸಹಭೋಜನ ನಡೆಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.ಉಳ್ಳಾಲ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಂಕೇತವಾದ ದೀಪಾವಳಿ, ಎಲ್ಲರ ಮನಗಳನ್ನು ಬೆಳಗಲಿ. ಈ ಮೂಲಕ ಎಲ್ಲರೊಂದಿಗೆ ಬೆರೆಯುವ ಮನಸ್ಸುಗಳು ಉದಯವಾಗಲಿ. ಒಟ್ಟು ಹಬ್ಬದ ಆಚರಣೆ ಎಲ್ಲರನ್ನು ಆರೋಗ್ಯ, ಸುಖ, ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಿದರು.ಮಹಿಳಾ ಮಂಡಲಗಳ ಒಕ್ಕೂಟದ ಕಮಲ ಗೌಡ, ಕಾರ್ಯದರ್ಶಿ ಜೆಸಿಂತ , ಜೊತೆ ಕಾರ್ಯದರ್ಶಿ ತುಳಸಿ ಗಟ್ಟಿ, ಸದ್ಯಸರಾದ ಝೀನತ್ ,ಸಾಹಿತಿ ಸಿಹಾನ, ಪ್ರೇಮ, ಮೀರಾ, ಮೈಮುನಾ, ರಮ್ಲತ್ ಮೊದಲಾದವರು ಉಪಸ್ಥಿತರಿದ್ದರು.

Read More