ಸುಳ್ಯ : ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಸುಶ್ಮಿತಾ ಎಂ.ಎ ಗಡಿ ಭಾರತೀಯ ಭದ್ರತಾ ಪಡೆಗೆ ಆಯ್ಕೆಗೊಂಡಿದ್ದಾರೆ ಹಾಗೂ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಸ್.ಎಸ್.ಸಿ ಜಿ.ಡಿ ಪರೀಕ್ಷೆಯಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ. ಇವರು ಅರಂತೋಡು ಗ್ರಾಮದ ಅಡ್ತಲೆ ದಿ.ನಾಗಪ್ಪ ಗೌಡ ಎಂ.ಎಂ ಮತ್ತು ಜಾನಕಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ, ಪಿ.ಯು.ಸಿಯನ್ನು ಎನ್.ಎಂ.ಪಿ.ಯು ಅರಂತೋಡಿನಲ್ಲಿ ಪೂರೈಸಿ , ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪುತ್ತೂರಿನ ತರಬೇತಿ ಅಕಾಡೆಮಿಯೊಂದರಲ್ಲಿ ಬಿ.ಎಸ್.ಎಫ್ ಪರೀಕ್ಷೆಯ ಕೋಚಿಂಗ್ ಪಡೆದಿದ್ದಾರೆ.
Author: UllalaVani
ಮಂಗಳೂರು : ಮೆರ್ಸಿನ್ ಮಾತೆಯ ಹಳೆ ಚರ್ಚ್ ವಟಾರದಲ್ಲಿ ಭಾನುವಾರ ಬೆಳಿಗ್ಗೆ ಪರಿಸರ ದಿನಾಚರಣೆ – ಲಾವ್ದಾತೊ ಸಿ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಪರಿಸರ ಆಯೋಗ ಹಾಗೂ ಕೃಷಿ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು. ವಂ. ಫಾ. ವಿಕ್ಟರ್ ಡಿ ಮೆಲ್ಲೋ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚರ್ಚ್ ಗುರುಗಳು ದೇವರ ಆಶೀರ್ವಾದ ಬೇಡಿ, ಹಣ್ಣು ಹಂಪಲು ಗಿಡಗಳನ್ನು ಹಂಚಿ ಸಂದೇಶ ನೀಡಿದರು. ಕ.ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ ಕ್ರೈಸ್ತ ಒಕ್ಕೂಟ ರಾಜಧ್ಯಕ್ಷ, ಅಲ್ವಿನ್ ಡಿಸೋಜರು ಗಿಡ ನೆಡುವ ಮಹತ್ವ ಹಾಗೂ ಅದರ ಪಾಲನೆ ಕುರಿತು ಮಾಹಿತಿ ನೀಡಿದರು. ವನಮಹೋತ್ಸವವನ್ನು ವಂ. ಫಾ. ವಿಕ್ಟರ್ ಡಿ ಮೆಲ್ಲೋ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಉಪಾಧ್ಯಕ್ಷ ಸರಿಟಾ ಡಿಸೋಜ, ಕಾರ್ಯದರ್ಶಿ ಗ್ರೆಟ್ಟ ಡಿಕುನ್ಹ, 21 ಆಯೋಗದ ಸಂಯೋಜಕ ರೊನಾಲ್ಡ್ ಡಿಸೋಜ, ಕ್ರೈಸ್ತ ಒಕ್ಕೂಟ ರಾಜ್ಯಾಧ್ಯಕ್ಷ, ಹಾಗೂ…
ಉಳ್ಳಾಲ : ಯಾವುದೇ ಉನ್ನತ ವ್ಯಾಸಾಂಗ ಮಾಡುವುದಾದರೂ ಊಟ ಅನಿವಾರ್ಯ. ಹಾಗಾಗಿ ಅಕ್ಕಿಯ ಬೆಳೆಸುವ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ತಳಮಟ್ಟದ ಕಾರ್ಯವಾದರೂ ಕೃಷಿ ಕಾಯಕದ ಕುರಿತು ಸ್ವಲ್ಪವಾದರೂ ತಿಳಿದಿರಬೇಕು. ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೃಷಿ ಹೇಗೆ ಆಗುತ್ತದೆ ಅನ್ನುವುದರ ಅರಿವು ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಬೇಕು ಎಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಂಜೀವ ಪಿಲಾರ್ ಹೇಳಿದರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಾಧ್ಯಮ ಕೇಂದ್ರ ಉಳ್ಳಾಲ, ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು, ದ. ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಜಂಟಿ ಆಶ್ರಯದಲ್ಲಿ ವಿಧಾನಸಭಾಧ್ಯಕ್ಷರು ಹಾಗೂ ಕೃಷಿ ಸಚಿವರ ಭಾಗವಹಿಸುವಿಕೆಯಲ್ಲಿ ಆ. 30 ರಂದು ನಡೆಯುವ 4 ಎಕರೆ ಹಡಿಲು ಭೂಮಿ ಕೃಷಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಉಳ್ಳಾಲದ ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ…
ದೇರಳಕಟ್ಟೆ : ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ ಮದ್ರಸ ವಿದ್ಯಾರ್ಥಿನಿಯರ ಮೀಲಾದುನ್ನಬಿ ಪ್ರಯುಕ್ತ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮದ್ರಸ ಹಾಲ್ ನಲ್ಲಿ ಸೋಮವಾರ ನಡೆಯಿತು. ಇಲ್ಯಾಸ್ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿ ಮೀಲಾದ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೂಡ ಮೇಲುಗೈ ಸಾಧಿಸಬೇಕು ಎಂದು ಕರೆ ನೀಡಿದರು. ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು , ಪತ್ರಕರ್ತ ಬಶೀರ್ ಕಲ್ಕಟ್ಟ ಮಾತನಾಡಿದರು. ಸದ್ ರ್ ಉಸ್ತಾದ್ ಶರೀಫ್ ಸ ಅದಿ ಸ್ವಾಗತಿಸಿದರು. ಮುಅಲ್ಲಿಂ ರಝಾಕ್ ಸ ಅದಿ, ಹಸನ್ ಸ ಅದಿ ಕಾರ್ಯಕ್ರಮ ನಿರೂಪಿಸಿದರು. ಇಸಾಕ್ ಸಅದಿ ಧನ್ಯವಾದ ಸಮರ್ಪಿಸಿದರು.
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಯಕ್ಷಶಿಕ್ಷಣ ಅಭಿಯಾನದ ಅಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಸಹಕಾರದೊಂದಿಗೆ ಮಂಗಳೂರಿನ ಪಿವಿಎಸ್ ನ ಡಾ.ಬಿ.ಆರ್. ಅಂಬೇಡ್ಕರ್ ಕುದ್ಮುಲ್ ರಂಗರಾವ್ ಪ್ರೀ ಮೆಟ್ರಿಕ್ ಗರ್ಲ್ಸ್ ಹಾಸ್ಟೆಲ್ ನಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನಾ ಸಮಾರಂಭ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಇವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ತಾರಾನಾಥ್ ಶೆಟ್ಟಿ ಬೋಳಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕೃಷ್ಣ ಶೆಟ್ಟಿ ತಾರೆಮಾರ್, ಗೋಪಿನಾಥ್ ಶೆಟ್ಟಿ, ಪೂರ್ಣಿಮಾ ಶಾಸ್ತ್ರಿ ಸಂತೋಷ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಳ್ಳಾಲ : ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಡಿದ ವ್ಯಕ್ತಿಯ ಸಾವಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.ಅಂಕೋಲಾದ ಮಾಲ್ಗಾಂ ನಿವಾಸಿ ದಿ| ಸುಬ್ರಾಯ ವೆಂಕಟರಾಮ್ ಭಟ್ (49) ಎಂಬವರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ ದಾನ ಪ್ರಕ್ರಿಯೆಗಳು ನಡೆದಿದೆ. ಸುಬ್ರಾಯ ವೆಂಕಟರಾಮ್ ಭಟ್ ಇವರು ಮೆದುಳಿನ ರಕ್ತಸ್ರಾವದಿಂದಾಗಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.24 ರಂದು ಆಸ್ಪತ್ರೆ ವೈದ್ಯರು ಬ್ರೈನ್ ಡೆತ್ ಘೋಷಿಸಿದ್ದರು. ಈ ಕುರಿತು ಕುಟುಂಬಸ್ಥರು ವೆಂಕಟರಾಮ್ ಭಟ್ ಅವರ ಸಾವಿನಲ್ಲಿ ಸಾರ್ಥಕತೆ ಮೆರೆಯಬೇಕೆಂಬ ಸದುದ್ದೇಶದೊಂದಿಗೆ ಎಲ್ಲಾ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಶೆಟ್ಟಿ, ಚಿಕಿತ್ಸೆ ನೀಡಿದ ಡಾ. ಸುಧೀಂದ್ರ ಯು, ಡಾ. ಸುರೇಶ್ ಜಿ, ಹಾಗೂ ಕಸಿ ಸಂಯೋಜಕಿ ಅಕ್ಷತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜೀವಸಾರ್ಥಕ ತಂಡ ಮತ್ತು ವಿವಿಧ ತಜ್ಞರ ಸಹಕಾರದಿಂದ ಅಂಗಾಂಗ ಬೇರ್ಪಡಿಸುವ ಕಾರ್ಯ ನಡೆಯಿತು.ಎರಡು ಮೂತ್ರಪಿಂಡಗಳು ಮತ್ತು ಕಣ್ಣುಗಳನ್ನು ಹೊರತೆಗೆದು ಕಸಿ…
ಕುತ್ತಾರು: ಶ್ರೀ ಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಜರಗಲಿರುವ 39ನೇ ವರ್ಷದ ಸಾರ್ವಜನಿಕ ಕುತ್ತಾರು ಗಣೇಶೋತ್ಸವದ ಪ್ರಯುಕ್ತ ಮಕ್ಕಳಿಗಾಗಿ ಕ್ರೀಡಾಕೂಟ ಸ್ಪರ್ಧೆ ಕ್ಷೇತ್ರದ ವಠಾರದಲ್ಲಿ ಭಾನುವಾರ ನಡೆಯಿತು.ನಿವೃತ್ತ ಯೋಧ ಪ್ರಸಾದ್ ಕೆ. ಎಸ್, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನಮಿತಾ ಪ್ರಸಾದ್, ಸಾರ್ವಜನಿಕ ಕುತ್ತಾರು ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಅತ್ತವರ, ಗೌರವಧ್ಯಕ್ಷ ಚಂದ್ರಹಾಸ ಕೊಟ್ಟಾರಿ, ಉಪಾಧ್ಯಕ್ಷರು ಜಗನ್ನಾಥ್ ಸಾಲಿಯಾನ್, ಪ್ರದಾನ ಕಾರ್ಯದರ್ಶಿ ಪವಿತ್ರ ಕುಮಾರ್ ಗಟ್ಟಿ, ಕಾರ್ಯದರ್ಶಿ ಮಾಧವ ಬಂಗೇರ, ಪ್ರಧಾನ ಅರ್ಚಕ ವಿಜಯ ನಾವಡ, ಜೆ. ಕೆ ರೈ, ವಾಸು ಕೊಟ್ಟಾರಿ, ಕ್ರೀಡಾ ಸಂಚಾಲಕ ಕಿಶೋರ್ ಸಂತೋಷನಗರ, ಸುನೀತಾ ಗಟ್ಟಿ, ಶಶಿಕಲಾ ಗಟ್ಟಿ , ಆಶಾಲತಾ ಕುಶಾಲಪ್ಪ, ಕವಿತಾ ಕುತ್ತಾರು, ವೇದ ಪವಿತ್ರ ಕುಮಾರ್ ಗಟ್ಟಿ, ಸುರೀಶ್ ಗಟ್ಟಿ ಮುಂಡೋಳಿ, ಧನುಷ್ ಗಟ್ಟಿ ಕುತ್ತಾರ್ , ಗೌತಮ್ ಪೂಜಾರಿ, ಅಮರನಾಥ್ ಬಬ್ಬುಕಟ್ಟೆ, ಸುಹಾಸ್ ಗಟ್ಟಿ ಕುತ್ತಾರ್, ತಂಗಮ್ಮ ಪಂಡಿತ್‌ಹೌಸ್, ಅಭಿಷೇಕ್ ಸಾಲ್ಯಾನ್, ರವಿ…
ಉಳ್ಳಾಲ :ಬಡ ವರ್ಗ ಹಾಗೂ ವಾಹನ ಚಾಲಕರ ಕಷ್ಟಗಳನ್ನು ಮನಗಂಡು 1975ರಲ್ಲಿ ಫಾದರ್ ಫ್ರೆಡ್ ವಿ. ಪಿರೇರಾ ಅವರ ಮುಂದಾಳತ್ವದಲ್ಲಿ ಆರಂಭಗೊಡ ಮ್ಯಾಕೋ ಸಹಕಾರಿ ಸಂಘವು ಯಶಸ್ವಿಯಾಗಿ ತನ್ನ ಸುವರ್ಣ ಮಹೋತ್ಸವ ವರ್ಷವನ್ನು ಪೂರೈಸಿದೆ. ಮಂಗಳೂರಿನ ಮೊದಲ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮ್ಯಾಕೋ, ಕಳೆದ ಐದು ದಶಕಗಳಿಂದ ಸಮಾಜದ ಬಡ ವರ್ಗದವರಿಗೆ ಆರ್ಥಿಕ ಬಲವಾಗಿ ಪರಿಣಮಿಸಿದೆ. ಇದೀಗ ಉಳ್ಳಾಲದ ಹೃದಯಭಾಗ ತೊಕ್ಕೊಟ್ಟುವಿನಲ್ಲಿ ಕಾರ‍್ಯಾರಂಭಿಸುವ ಮೂಲಕ ಈ ಭಾಗದ ರಿಕ್ಷಾ ಚಾಲಕರು ಹಾಗೂ ಬಡ ವರ್ಗದವರಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯರು ಹಾಗೂ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಅಧ್ಯಕ್ಷ ಐವನ್ ಡಿಸೋಜ ಅಭಿಪ್ರಾಯಪಟ್ಟರು.ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ ಇದರ ತೊಕ್ಕೊಟ್ಟು ಪೆರ್ಮನ್ನೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ವಾಹನ ಚಾಲಕರಿಗೆ ಆರ್ಥಿಕ ನೆರವು ಹಾಗೂ ಭದ್ರತೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಘ ಇಂದು ಸಾವಿರಾರು…
ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಬಾಹಿರ ಸುತ್ತೋಲೆಗಳನ್ನು ಹೊರಡಿಸಿ, ಕಾನೂನುಬದ್ಧವಾಗಿ ನಿಯಮಗಳನ್ನು ಅನುಷ್ಠಾನಗೊಳಿಸದೆ ಕ್ವಾರಿ ಮತ್ತು ಕ್ರಷರ್ ಓನರ್ಸ್ , ಲಾರಿ ಮಾಲೀಕರ ಮೇಲೆ ಕೋಟ್ಯಂತರ ದಂಡ ವಿಧಿಸಿರುವುದರ ವಿರುದ್ಧ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರು ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ಇವರ ಮುಖಂಡತ್ವದಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಹೂಡಿರುವ ದಾವೆ ಹಿನ್ನೆಲೆಯಲ್ಲಿ ಸರಕಾರಕ್ಕೆ ನೋಟೀಸ್ ಜಾರಿ ಮಾಡುವ ಮೂಲಕ ಪ್ರಾರಂಭಿಕ ಜಯ ದೊರೆತಿದೆ.ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಿಲ್ಲ. ಸರ್ಕಾರಿ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಯಾವ ರೀತಿ ರಾಜಧನವನ್ನು ಎಲ್ಲಿ ಪಾವತಿಸಬೇಕೆಂದು ಕೇಂದ್ರ MMDR-1957 ಮತ್ತು ರಾಜ್ಯ KMMCR- 1994 ನಿಯಮಗಳಲ್ಲಿ ಸ್ಪಷ್ಟತೆ ಇದ್ದರೂ ಕೂಡಾ ಅದನ್ನು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಬಾಹಿರ ಸುತ್ತೋಲೆಗಳನ್ನು ಹೊರಡಿಸಿ ಈ ಸುತ್ತೋಲೆಗೆ ಅನುಗುಣವಾಗಿ WEDA’s (Work Executive Department…
ಮಂಗಳೂರು : ಯುನಿಸೆಕ್ಸ್ ಬ್ಯೂಟಿಪಾರ್ಲರ್, ಆಯುರ್ವೇದಿಕ್ ಸೆಂಟರ್ ಸೇರಿದಂತೆ ಕೆಲವೆಡೆ ಮಸಾಜ್ ಹೆಸರಿನಲ್ಲಿ ನಡೆಯುವ ಅನೈತಿಕ ದಂಧೆಗೆ ಕಡಿವಾಣ ಹಾಕಲು ಕೇರಳ ಮಾದರಿಯ ಕಾನೂನು ಜಾರಿಗೊಳಿಸಬೇಕು ಎಂದು ನ್ಯಾಯವಾದಿ ಮನೋರಾಜ್ ರಾಜೀವ ಒತ್ತಾಯಿಸಿದ್ದಾರೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ವಿಪಕ್ಷ ನಾಯಕರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತಿದ್ದು, ಜನಪ್ರತಿನಿಧಿಗಳು ಅಧಿವೇಶ ನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.ಯುನಿಸೆಕ್ಸ್ ಬ್ಯೂಟಿ ಪಾರ್ಲರ್‌ಗಳಲ್ಲಿ ಯುವತಿಯರಿಂದ ಯುವಕರಿಗೆ ಮಸಾಜ್ ನೆಪದಲ್ಲಿ ಅನೈತಿಕ ದಂಧೆ ನಡೆಸಲಾಗುತ್ತಿರುವ ದೂರುಗಳಿವೆ. ಆಯುರ್ವೇದಿಕ್ ಸೆಂಟರ್‌ಗಳಲ್ಲಿಯೂ ಯಾವ ರೀತಿಯಲ್ಲಿ ಮಸಾಜ್ ಮಾಡಬೇಕು, ಅನುಸರಿಸಬೇಕಾದ ನಿಯಮಗಳು, ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಯಾವುದೇ ಕಾನೂನು ದೇಶದ ಕೇರಳ ರಾಜ್ಯದಲ್ಲಿ ಹೊರತು ಪಡಿಸಿ ಎಲ್ಲಿಯೂ ಇಲ್ಲ. ಹಾಗಾಗಿ ಕೆಲವೊಂದು ಯುನಿಸೆಕ್ಸ್ ಬ್ಯೂಟಿಪಾರ್ಲರ್ ಗಳಲ್ಲಿ ಯುವತಿಯರಿಂದ ಯುವಕರಿಗೆ ಸೇವೆಯನ್ನು ಒದಗಿಸುವ ನೆಪದಲ್ಲಿ ಪೊಲೀಸರಿಂದ ದಾಳಿ ನಡೆಸಿ ತೊಂದರೆ ನೀಡುವ ಪ್ರಕ್ರಿಯೆಯೂ ನಡೆಯುತ್ತದೆ. ಇದರಿಂದ ಅಲ್ಲಿ…

