Author: UllalaVani

Kannada News From Coastal Karnataka

ಬಂಟ್ವಾಳ : ವಾಯುಭಾರ ಕುಸಿತ ದ.ಕ. ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು,ಹಲವೆಡೆ ಹಾನಿಯಾಗಿದೆ. ಈ ನಡುವೆ ಬಂಟ್ವಾಳ ಮೂಡ ನಡುಗೋಡು ಗ್ರಾಮದ ದಂಡೆ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ಎಂಬವರ ಮನೆ ಮಳೆಯಿಂದ ತೀವ್ರ ಹಾನಿಯಾಗಿದೆ. ಸದ್ಯ ಅವರು ಸದ್ಯ ಪಕ್ಕದಲ್ಲೇ ಇರುವ ಸಹೋದರನ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಅಮ್ಟಾಡಿ ಗ್ರಾಮದ ಪೆದಮಲೆ ಎಂಬಲ್ಲಿ ಬಂಟ್ವಾಳ- ಸಿದ್ದಕಟ್ಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬದಿಯಲ್ಲಿ ಮಣ್ಣು ಕುಸಿದಿದೆ. ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ ಕಂದಾಯ ಅಧಿಕಾರಿಗಳು ಮಾಹಿತಿ ರವಾನೆ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿವೀಕ್ಷಿಸಿ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.

Read More

ಕಾಸರಗೋಡು : ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ. ಗೋಪಿ (58) , ಪತ್ನಿ ಇಂದಿರಾ (54) ,ಪುತ್ರ ರಂಜೇಶ್ (34) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ (27) ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕ ಮುಗ್ಗಟ್ಟು ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ. ಸಂಬಂಧಿಕರೋರ್ವರ ಮೊಬೈಲ್‌ಗೆ ಕರೆ ಬಂದಿದ್ದು, ತಮ್ಮನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದನೆನ್ನಲಾಗಿದೆ ರಂಜೇಶ್ ಈ ಕರೆ ಮಾಡಿದ್ದನೆನ್ನಲಾಗಿದೆ. ಸಂಬಂಧಿಕರು ಹಾಗೂ ನಾಗರಿಕರು ತಲುಪಿ ಆಸ್ಪತ್ರೆಗೆ ತಲಪಿಸಿದರೂ ಮೂವರೂ ಮೃತಪಟ್ಟಿದ್ದರು. ರಂಜೇಶ್ ಹಾಗೂ ರಾಕೇಶ್ ಈ ಹಿಂದೆ ದುಬೈಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದು, ಉದ್ಯಮ ನಡೆಸುತ್ತಿದ್ದರು. ಇದು ಯಶಸ್ವಿ ಯಾಗಲಿಲ್ಲ. ಇದರಿಂದ ಸಾಲದ ಹೊರೆ ಹೆಚ್ಚಿತ್ತು ಎನ್ನಲಾಗಿದೆ. ಉದ್ಯಮ ನಿಲ್ಲಿಸಿ ಕೂಲಿ ಕೆಲಸಕ್ಕೆ…

Read More

ಮಂಗಳೂರು : ತುಳುನಾಡಿನ ಕೃಷಿ ಪರಂಪರೆ ಪ್ರಕೃತಿ ಆರಾಧನೆ, ಸೌಹಾರ್ದ ಹಾಗೂ ಸಮೃದ್ಧ ಬದುಕಿನ ಆಶಯವನ್ನು ಪೋಷಿಸಿಕೊಂಡಿದೆ. ಮನೆ ತುಂಬಿಸುವ ಹಿನ್ನೆಲೆಯಲ್ಲಿ ಭತ್ತದ ತೆನೆಯನ್ನು ಕಟ್ಟುವ ಸಂಪ್ರದಾಯ ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆಸುವ ಆಚರಣೆಯಾಗಿ ಮುಂದುವರಿದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. ಕುಲಶೇಖರದ ಕನ್ನಗುಡ್ಡೆಯ ಕೊರಗತನಿಯ ಕ್ಷೇತ್ರದಲ್ಲಿ ನಡೆದ ತೆನೆ ಹಾಗೂ ಕಬ್ಬು ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಜೆ.ಆರ್. ಲೋಬೋ ಅವರು, “ಕೃಷಿ ಬದುಕು ಎಲ್ಲರನ್ನು ಒಂದಾಗಿಸುವ ಪರಂಪರೆಯನ್ನು ಹೊಂದಿದೆ. ಕ್ರೈಸ್ತರು ಆಚರಿಸುವ ತೆನೆ ಹಬ್ಬವು ತುಳುನಾಡಿನಲ್ಲಿ ಕುರಲ್ ಪರ್ಬ ಎಂದು ಜನಾನುರಾಗಿಯಾಗಿದ್ದು, ಇದು ಸಾಮರಸ್ಯದ ಪ್ರತೀಕವಾಗಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿ-ಫೋರ್ ಟಿವಿ ವಾಹಿನಿಯ ಮುಖ್ಯಸ್ಥ ಲಕ್ಷ್ಮಣ್ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಘಟಕ ಡೆನಿಸ್ ಡಿಸಿಲ್ವಾ, ಮಾಜಿ ಕಾರ್ಪೊರೇಟರ್ ಪ್ರಕಾಶ್, ಕೆಎಸ್ಆರ್‌ಟಿಸಿ ಮಾಜಿ ನಿರ್ದೇಶಕ ಟಿ.ಕೆ. ಸುಧೀರ್, ಶೇಖರ್…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಲ್ಲಾಪುವಿನ ಪೀಸ್ ಪಬ್ಲಿಕ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯಾವಳಿಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಪೀಸ್ ಪಬ್ಲಿಕ್ ಸ್ಕೂಲ್ ತಂಡ ಆರು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿ ಪ್ರಶಸ್ತಿ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಮೂಡುಬಿದಿರೆಯ ಅಲ್ ಪುರ್ಖಾನ್ ಪ್ರಾಥಮಿಕ ಶಾಲಾ ತಂಡವನ್ನು 1-0 ಅಂತರದ ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪೀಸ್ ಪಬ್ಲಿಕ್ ಸ್ಕೂಲ್ ತಂಡಕ್ಕೆ ಕೋಚ್ ಎನ್.ಉಸ್ಮಾನ್ ಮುಸ್ತಫ ತರಬೇತಿ ನೀಡಿದ್ದರೆ, ಸ್ಕೂಲ್ ಫಿಟ್ನೆಸ್ ಟ್ರೈನರ್ ಅಂತಾರಾಷ್ಟ್ರೀಯ ಖ್ಯಾತಿಯ ಅತ್ಲೀಟ್ ಅಬ್ದುಲ್ ರಹ್ಮಾನ್ ಫಿಟ್ನೆಸ್ ಸಲಹೆ ನೀಡಿದ್ದಾರೆ. ವಿಜೇತ ತಂಡವನ್ನು ಸ್ಕೂಲ್ ಆಡಳಿತ ಸಮಿತಿಯ ಮುಖ್ಯಸ್ಥ ಅಬ್ದುಲ್ ರಹಿಮಾನ್(ಬಾಶಾ) ಅಭಿನಂದಿಸಿದ್ದಾರೆ.

Read More

ಕೊಣಾಜೆ : ಅಸೈಗೋಳಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್ ಪೊಲೀಸ್ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆಗಸ್ಟ್ 25ರಂದು ರಾತ್ರಿ ಸಂಭವಿಸಿದೆ. ಬಾಗಲಕೋಟೆಯ ಸಂಜೀವ ರಾಥೋಡ್ (38) ಮೃತರು. ಅವರ ಪತ್ನಿ ಮತ್ತು 3 ಮಕ್ಕಳು ರವಿವಾರ ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಕುಟುಂಬ ಸದಸ್ಯರೊಂದಿಗೆ ಊರಿಗೆ ಹೋಗಲು ರಜೆ ಸಿಗದೆ ನೊಂದು ಆತ್ಮಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಅವರ ನಿಕಟವರ್ತಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಮಂಗಳೂರು : ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅದ್ಧೂರಿ ಮಂಗಳೂರು ದಸರಾ ಆಚರಣೆಗಳು ನಡೆಯಲಿವೆ ಎಂದು ದೇವಸ್ಥಾನದ ಖಜಾಂಚಿ ಪದ್ಮರಾಜ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಈ ವರ್ಷದ ದಸರಾದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ ಎಂದು ಪದ್ಮರಾಜ್ ದೃಢಪಡಿಸಿದರು. ನವದುರ್ಗಾ ಮತ್ತು ಶಾರದಾ ದೇವಿಯ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗುವುದು, ದೇವಾಲಯದ ಆವರಣದೊಳಗೆ ಶಾರದಾ ದೇವಿಯ ವಿಗ್ರಹವನ್ನು ಸಾಧಾರಣ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುವುದು. ಗಮನಾರ್ಹ ನಡೆಯಲ್ಲಿ, ಈ ವರ್ಷ ಹೊಸ ಸಾಂಸ್ಕೃತಿಕ ತಂಡಗಳಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ. 700 ರಿಂದ 800 ಕಲಾವಿದರನ್ನು ಒಳಗೊಂಡ ಒಟ್ಟು 31 ತಂಡಗಳು ಭಾಗವಹಿಸಲಿವೆ. ಈ ಉತ್ಸವದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಮಹಿಳಾ ಸಾಧಕಿಯರು ಮತ್ತು ಸಂಸ್ಥೆಗಳಿಗೆ ಸನ್ಮಾನಗಳು ಸಹ ನಡೆಯಲಿವೆ. ಉತ್ಸವದ ಭಾಗವಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ, ಅವುಗಳೆಂದರೆ : ಚಿತ್ರ ಬಿಡಿಸುವ ಸ್ಪರ್ಧೆ, ಕಿನ್ನಿ ಪಿಲಿ ಸ್ಪರ್ಧೆ (ಎರಡು ವಯೋಮಾನದವರಿಗೆ:…

Read More

ದೇರಳಕಟ್ಟೆ : ಮಹಿಳೆಯರ ಆರೋಗ್ಯ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯವಿಲ್ಲದೆ ದೇಹ ಸದೃಢವಾಗಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾದರೆ, ಅದರ ಪರಿಣಾಮ ಸಂಪೂರ್ಣ ಕುಟುಂಬದ ಮೇಲೆ ಬೀಳುತ್ತದೆ ಎಂದು ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ಆಡಳಿತ ನಿರ್ದೇಶಕ ಫಾ.ಫಾಸ್ಟಿನ್ ಲೂಕಸ್ ಲೋಬೊ ಅಭಿಪ್ರಾಯಪಟ್ಟರು. ‌ ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸ್ತ್ರೀ ಆಯೋಗ ಹಾಗೂ ಕೆಥೋಲಿಕಾ ಸ್ತ್ರೀ ಸಂಘಟನೆ , ದಕ್ಷಿಣ ವಲಯ , ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ , ಹಳೆಯ ವಿದ್ಯಾರ್ಥಿಗಳ ಅಸೋಸಿಯೇಶನ್ , ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಸಹಯೋಗದೊಂದಿಗೆ ದೇರಳಕಟ್ಟೆಯ ಫಾದರ್ ಮುಲ್ಲರ್ ಆಡಿಟೋರಿಯಂನಲ್ಲಿ ಜರಗಿದ ಬೃಹತ್ ಮಹಿಳಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಆರೋಗ್ಯಕ್ಕೆ ಗಮನಕೊಟ್ಟಾಗ ಮಾತ್ರ, ಇಡೀ ಸಮಾಜ ಆರೋಗ್ಯವಾಗಿರಲು ಸಾಧ್ಯ. ಆದುದರಿಂದ ಮಹಿಳೆಯರ ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡೋಣ. ಈ ನಿಟ್ಟಿನಲ್ಲಿ ಸಂಸ್ಥೆ ಹಾಗೂ…

Read More

ಮಂಗಳೂರು : ದೀಪಾವಳಿ ಹಬ್ಬ ಹಾಗೂ ತುಳಸಿ ಪೂಜೆ ಪ್ರಯುಕ್ತ ಮೈದಾನದಲ್ಲಿ ಅಥವಾ ತೆರೆದ ಪ್ರದೇಶ ದಲ್ಲಿ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಯನ್ನು ಕೋರಿ (ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿ ಯವರ ಕಚೇರಿಗೆ ಅಕ್ಟೋಬರ್ 10ರೊಳಗಾಗಿ ಸಲ್ಲಿಸಬಹುದು. ಅರ್ಜಿಯನ್ನು ನಿಗದಿತ ನಮೂನೆ ಎಇ-5 ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ (ರಸ್ತೆ, ಕಟ್ಟಡ ಇತ್ಯಾದಿ ವಿವರ) ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100 ರೂ ಸ್ಟಾಂಪ್ ಪೇಪರ್ ), ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೂ.200ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ ರೂ 500 ಲೈಸೆನ್ಸ್ ಶುಲ್ಕವನ್ನು ಪಾವತಿಸಬೇಕು. ಅರ್ಜಿದಾರರು ಈ ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ…

Read More

ಮಂಗಳೂರು : ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಿ.ಸಿರೋಡ್ ಸಮೀಪದ ತಲಪಾಡಿ ಜೋಡು ಮಾರ್ಗ ನಿವಾಸಿ ನಿಜಾಮ್ (33) ಬಂಧಿತ ಆರೋಪಿ. ಈತನ ಮೇಲೆ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 01/2023 ಕಲಂ 489 (ಬಿ) ಮತ್ತು (ಸಿ) ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿದ್ದು, ನ್ಯಾಯಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಮಧ್ಯೆ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಬಳಿಕ, ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ. ನ್ಯಾಯಾಲಯವು ಈತನ ಮೇಲೆ 8 ಬಾರಿ ಬಂಧನ ವಾರಂಟ್ ಹೊರಡಿಸಿದ್ದರೂ ತಲೆಮರೆಸಿಕೊಂಡಿದ್ದ ಈತನನ್ನು, ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ವಾರಂಟ್ ಜಾರಿ ಸಿಬ್ಬಂದಿಗಳು ಆ. 25 ಸೋಮವಾರ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ…

Read More

ಬೆಳ್ತಂಗಡಿ : ಚಿಕ್ಕಮಗಳೂರು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ರಾತ್ರಿ ವೇಳೆ ಚೆಕ್‌ಪೋಸ್ಟ್ ಮೂಲಕ ಸಾಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಸಂಚರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ. ಘಾಟಿಯಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ರಾತ್ರಿ ವೇಳೆ ವಾಹನಗಳು ಕೊಟ್ಟಿಗೆಹಾರ ಚೆಕ್‌ಪೋಸ್ಟ್ ದಾಟಬೇಕಾದರೆ ಸಂಪೂರ್ಣ ತಪಾಸಣೆಗೊಂಡು ಐದು ವಾಹನಗಳು ಒಟ್ಟಾಗಿ ತೆರಳುವಂತೆ ನಿಯಮ ರೂಪಿಸಲಾಗಿದೆ.  ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಾಗಿ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಿ ರಾತ್ರಿ ವೇಳೆ ಓರ್ವ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಒಂದೂವರೆ ಕಿ.ಮೀ. ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುತ್ತಿದ್ದರು ಎನ್ನುವ ದೂರುಗಳಿದ್ದವು. ಅಲ್ಲಿ ಕೆಲವು ಮನೆಗಳಿದ್ದು, ಸ್ಥಳೀಯರ…

Read More