Author: UllalaVani

Kannada News From Coastal Karnataka

ಉಳ್ಳಾಲ:ಸೆ -15ಸೌದಿ ಅರೇಬಿಯಾದಲ್ಲಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ಯುವಕನೋರ್ವನು ದಾರುಣ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್ ರವರ ಪುತ್ರ ಅಬ್ದುಲ್ ರಾಝಿಕ್ (27) ಮೃತಪಟ್ಟ ಯುವಕ.ಸೌದಿ ಅರೇಬಿಯಾದಲ್ಲಿದ್ದ ರಾಝಿಕ್ ನಿನ್ನೆ (ಭಾನುವಾರ) ಸಂಜೆ,ರಾತ್ರಿ ಪಾಳಿ ಕೆಲಸಕ್ಕೆಂದು ತೆರಳುತ್ತಿದ್ದಾಗ ರಾಝಿಕ್ ಪ್ರಯಾಣಿಸುತ್ತಿದ್ದ ಬಸ್ ಗೆ ಮತ್ತೊಂದು ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೊಹಮ್ಮದ್ ಅವರ ಕೊನೆಯ ಪುತ್ರನಾಗಿರುವ ರಾಝಿಕ್ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ವಿದೇಶಕ್ಕೆ ತೆರಳಿದ್ದರು.ಜುಬೈಲ್ ನಲ್ಲಿ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅವರು ಕಳೆದ ಜುಲೈ 11 ರಂದು ಊರಿಗೆ ಬಂದಿದ್ದರು.ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15 ರಂದು ಎರಡನೇ ಬಾರಿ ಮತ್ತೆ ವಿದೇಶಕ್ಕೆ ತೆರಳಿದ್ದರು.ರಾಝಿಕ್ ಅವರ ಸಹೋದರ, ಹಾಗೂ ಸಹೋದರಿ ಅನಾರೋಗ್ಯದಿಂದ ಈ ಹಿಂದೆ ಮೃತಪಟ್ಟಿದ್ದರು. ಮೃತ ರಾಝಿಕ್ ತಂದೆ ತಾಯಿ,ಮೂವರು ಸಹೋದರಿಯರು,ಓರ್ವ ಸಹೋದರನನ್ನ ಅಗಲಿದ್ದಾರೆ.

Read More

ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ ಅರಾನ್ಹಾ, ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್ ಅವರು ಗೌರವ ಅತಿಥಿಗಳಾಗಿದ್ದರು.ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಅವರು, ಹೊಸದಾಗಿ ಸ್ಥಾಪನೆಯಾದ, ಬೆಳ್ಮಣ್ ಶಾಖೆಯು ಕೇವಲ ಆರು ತಿಂಗಳಲ್ಲಿ ₹ 6 ಕೋಟಿಗೂ ಮೀರಿದ ವಹಿವಾಟು ಸಾಧಿಸಿದೆ ಎಂದು ಹೇಳಿ, ಇದು ಸ್ಥಳೀಯ ಸಮುದಾಯದ ಬಲವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ದೂರದೃಷ್ಟಿಯ ಮಹತ್ವವನ್ನು ಒತ್ತಿ ಹೇಳಿದ…

Read More

ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 12 ನೇ ಎಟಿಎಂ ಅನ್ನು ಸೆಪ್ಟೆಂಬರ್ 13, ರಂದು ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು.ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿಂಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ಸ್ನ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಅವರು ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಸಿಕ್ವೇರಾ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಎನ್‌ಅರ್‌ಐ, ಕಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ಹಾಗೂ ವಿನ್ಸೆಂಟ್ ಡಿ ಪಾಲ್ ಲೆಕ್ಕಪರಿಶೋಧಕ ಜೆರೋಮ್ ಡಿ’ಅಲ್ಮೇಡಾ ಮತ್ತು ಕಿನ್ನಿಗೋಳಿಯ ಮೆಸ್ಸರ್ಸ್ ಚೈತನ್ಯ ಮೆಡಿಕಲ್ಸ್ ಮತ್ತು ಸಾಗರಿಕಾ ಅರೇಂಜರ್ಸ್ನ ಮಾಲೀಕ ಧನಂಜಯ ಪಿ. ಶೆಟ್ಟಿಗಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತು ಶಾಖಾ ವ್ಯವಸ್ಥಾಪಕ ಅನಿಲ್ ಆರ್.…

Read More

ಉಳ್ಳಾಲ :  ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ  ಮೀನುಗಾರಿಕಾ ಟ್ರಾಲರ್‌ ಬೋಟ್‌  ಆಳಸಮುದ್ರದಲ್ಲಿ ಎಂಜಿನ್‌ ವೈಫಲ್ಯದಿಂದ ಕೆಟ್ಟು ನಿಂತಿದ್ದು, ಪವಾಡಸದೃಶವಾಗಿ  ಸಮುದ್ರದ ಅಲೆಗಳಿಂದಾಗಿ  ತೇಲುತ್ತಾ  ಉಳ್ಳಾಲದ ಸೀಗ್ರೌಂಡ್‌ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟಿನಲ್ಲಿದ್ದ 13 ಮಂದಿ ಮೀನುಗಾರರು ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್‌ ಅಶ್ಫಾಕ್‌ ಎಂಬವರಿಗೆ ಸೇರಿದ ಬುರಾಕ್‌ ಟ್ರೋಲರ್‌ ಬೋಟ್‌ ಕೆಟ್ಟು ನಿಂತಿದೆ. ಮಂಗಳೂರಿನ ಧಕ್ಕೆಯಿಂದ ಕೇರಳ ಭಾಗಕ್ಕೆ ನಿನ್ನೆ ರಾತ್ರಿ ಆಳಸಮುದ್ರ ಮೀನುಗಾರಿಕೆಗೆಂದು ಬೋಟ್‌ ತೆರಳುತ್ತಿತ್ತು. ಈ ನಡುವೆ ಆಳಸಮುದ್ರದಲ್ಲಿ  ಬೋಟ್‌ ಎಂಜಿನ್‌ ವೈಫಲ್ಯ ಉಂಟಾಗಿದ್ದು, ಮುಂದೆ ಸಾಗಲು ಅಸಾಧ್ಯವಾಗಿತ್ತು. ಮಧ್ಯರಾತ್ರಿಯಲ್ಲಿ ಬೋಟ್‌ ಕೆಟ್ಟು ನಿಂತ ಕುರಿತು ಉಳಿದ ಮೀನುಗಾರಿಗಾ ಬೋಟಿನವರ ಗಮನಕ್ಕೆ ಬಾರದೇ 13 ಮಂದಿ ಮೀನುಗಾರರು ಜೀವ ಕೈಯಲ್ಲಿಟ್ಟುಕೊಂಡು ಬೋಟಿನೊಳಕ್ಕೆ ಉಳಿದಿದ್ದರು. ಅಲೆಗಳಿಂದಾಗಿ ತೇಲುತ್ತಾ ಬಂದ  ಬೋಟ್‌ ಇಂದು ನಸುಕಿನ ಜಾವ ಸೀಗ್ರೌಂಡ್‌ ಸಮುದ್ರತೀರಕ್ಕೆ ಬಂದು ಅಪ್ಪಳಿಸಿದೆ.ಘಟನೆಯಿಂದಾಗಿ ಬೋಟ್‌ ಮಾಲೀಕರಿಗೆ ಲಕ್ಷಾಂತರ ನಷ್ಟವುಂಟಾಗಿದೆ. ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಹಂಪನಕಟ್ಟ ಶಾಖೆ ಮತ್ತು ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರ ಜಂಟಿ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣಾ ಶಿಬಿರವು ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಜರುಗಿತು.ಈ ಕಾರ್ಯಕ್ರಮವನ್ನು ನಿವೃತ್ತ ಸಹಕಾರಿ ಸಂಘಗಳ ಉಪ ನಿಬಂಧಕರಾದ ಚಂದ್ರಶೇಖರ್ ಸುವರ್ಣ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಲಯನ್ಸ್ ಕ್ಲಬ್ ಮಂಗಳೂರು, ಆದಿತ್ಯ ಇದರ ಅಧ್ಯಕ್ಷರಾದ ಲಯನ್ ನರಸಿಂಹ ಪೈ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಮುಂದಾಳತ್ವದಲ್ಲಿ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು…

Read More

ಹಾಸನ : ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಶುಕ್ರವಾರ ನಡೆದ ಟ್ರಕ್ ದುರಂತಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಸಳೆಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ 25 ವರ್ಷಗಳಿಂದ ಗ್ರಾಮಸ್ತರು ಗಣಪತಿ ಕೂರಿಸುತ್ತಿದ್ದಾರೆ. ಈ ಹಿನ್ನೆಲೆ ಶುಕ್ರವಾರ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೆಸ್ಟ್ರಾ ಬಳಿಗೆ ಸಾವಿರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಟ್ರಕ್ ಹರಿದು ಈ ಅವಘಡ ನಡೆದಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಈವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 20 ಮಂದಿ ಗಾಯಾಳುಗಳ ಪೈಕಿ ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಮಹಾರಾಷ್ಟ್ರಕ್ಕೆ ಸೇರಿದ…

Read More

ಮಂಗಳೂರು : ಪ್ರತಿಭೆಗಳನ್ನು ಗುರುತಿಸುವಲ್ಲಿ ನಂ.1 ಚಾನೆಲ್ ಆದ ಜೀ಼ ಕನ್ನಡ ವಾಹಿನಿ ಈಗ ಮತ್ತೊಮ್ಮೆ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ 31 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ನೀವು ಮುಂದಿನ ಡ್ಯಾನ್ಸಿಂಗ್ ಅಥವಾ ಕಾಮಿಡಿ ಕಿಂಗ್ ಆಗಬೇಕು ಅಂದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್ ಮಾಡುವವರಾಗಿರಬೇಕು. ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ 60 ವರುಷದ ಒಳಗಿರಬೇಕು ಮತ್ತು ನಿಮ್ಮದೇ ಕಾಮಿಡಿ ಸ್ಕಿಟ್ ಇರಬೇಕು. ರೀಲ್ಸ್ ವಿಡಿಯೋಗಳಿಗೆ ಅವಕಾಶವಿಲ್ಲ. ಸೆಪ್ಟೆಂಬರ್ 15 ಸೋಮವಾರದಂದು ಬೆಳಗ್ಗೆ 9 ಗಂಟೆಗೆ, ಮಂಗಳೂರಿನ ಕೊಡಿಯಾಲಬೈಲ್ ನ ಶಾರದ ವಿದ್ಯಾಲಯ(ಕೇಂದ್ರ ಪಠ್ಯಕ್ರಮ ಆಧಾರಿತ)ದಲ್ಲಿ ಆಡಿಷನ್ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪಾಸ್ಪೋರ್ಟ್…

Read More

ಮಂಗಳೂರು : ದ.ಕ. ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್- 2025ರಲ್ಲಿ 2 ಪದಕಗಳು ದೊರೆತಿವೆ. ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ ದ.ಕ. ಜಿಲ್ಲೆಯ ಟೈಕ್ವಾಂಡೋ ತಂಡವು ಉತ್ತಮ ಪ್ರದರ್ಶನ ನೀಡಿದೆ. ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಹಮ್ಮದ್ ನಿಹಾಲ್ ನಝೀರ್ 69 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಮುಹಮ್ಮದ್ ಅಯಾನ್ 82 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಇಬ್ಬರು ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ – 2025ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಚಿನ್ನದ ಪದಕ ಗೆದ್ದ ಮುಹಮ್ಮದ್ ನಿಹಾಲ್ ನಝೀರ್ ಮಂಗಳೂರಿನ ಯೆನಪೋಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪಿಸಿಎಂಸಿ ವಿಭಾಗದ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ದಿ.ಅಬ್ದುಲ್ ನಝೀರ್…

Read More

ಮಂಗಳೂರು : ಮಂಗಳೂರು ಮಹಾನಗರ ಪಾಲಿಕಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದಲ್ಲಿ ಹಾಗೂ ಮೆಸ್ಕಾಂನವರ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣ ಸೆ.16ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುತ್ತಿದೆ. ಹಾಗಾಗಿ ಸೆ.16ರಂದು ನಗರದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು : ಬಟ್ಟೆ ಅಂಗಡಿ ಹಾಗೂ ಕಲ್ಯಾಣ ಮಂಟಪದಲ್ಲಿ ನಡೆದ ಚಿನ್ನದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ ಒಟ್ಟು 1.80 ಲಕ್ಷ ರೂ. ಮೌಲ್ಯದ 18 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 2 ರಂದು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ರಹಮತ್ ತಮ್ಮ ಮಕ್ಕಳೊಂದಿಗೆ ತೊಕ್ಕೊಟ್ಟಿನಲ್ಲಿರುವ ಸಾಗರ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಹೋಗಿದ್ದರು. ಮಳೆಯ ಕಾರಣ ಅವರು ಸ್ಟ್ರೀಟ್ ಪ್ಯಾಲೇಸ್ ಬೇಕರಿ ಬಳಿ ನಿಂತಿದ್ದರು. ಆ ಸಂದರ್ಭದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಅವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಭಿಸಿದ ಮಾಹಿತಿ ಮೇರೆಗೆ, ಪೊಲೀಸರು ಸೆಪ್ಟೆಂಬರ್ 12 ರಂದು ಮಿನ್ನತ್ ಅವರನ್ನು ಬಂಧಿಸಿ ಕದ್ದ ಸರವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ, ಜುಲೈ 9 ರಂದು ಕೆಎಂಎಸ್ ಕನ್ವೆನ್ಷನ್…

Read More