ನವದೆಹಲಿ, ಜುಲೈ 13: ಪೌರತ್ವ ನಿರ್ಧಾರವು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಅದು ವ್ಯಕ್ತಿಯ ಮೂಲಭೂತ ಹಕ್ಕುಗಳು, ಘನತೆ ಮತ್ತು ಸಂವಿಧಾನಾತ್ಮಕ ರಕ್ಷಣೆಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಪುನರುಚ್ಚರಿಸಿದೆ. ಅಸ್ಸಾಂನಲ್ಲಿ 27 ಮಂದಿಯನ್ನು ವಿದೇಶಿಯರೆಂದು ಘೋಷಿಸಿದ್ದ ಗೌಹಾಟಿ ಹೈಕೋರ್ಟ್ ತೀರ್ಪುಗಳನ್ನು ಸೋಮವಾರ ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಪೌರತ್ವ ಮತ್ತು ವಿದೇಶಿ ಸ್ಥಿತಮಾನದ ಪ್ರಶ್ನೆಗಳನ್ನು ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹತಾ ಅವರನ್ನೊಳಗೊಂಡ ಪೀಠವು 27 ಅಪೀಲುಗಳನ್ನು ಅಂಗೀಕರಿಸಿ, ಸಂಬಂಧಿತ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ವಿದೇಶಿಯರ ನ್ಯಾಯಮಂಡಳಿಗಳಿಗೆ ಹಿಂದಿರುಗಿಸಿದೆ. ಮರುಪರಿಶೀಲನೆ ವೇಳೆ ನ್ಯಾಯಮಂಡಳಿಗಳು ಹಿಂದಿನ ತೀರ್ಪುಗಳು ಅಥವಾ ಹೈಕೋರ್ಟ್‌ನ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ, ಪ್ರತಿಯೊಂದು ಪ್ರಕರಣವನ್ನು ಸ್ವತಂತ್ರವಾಗಿ ಹಾಗೂ ಹೊಸದಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ತೀರ್ಪಿನಲ್ಲಿ, ಪೌರತ್ವ ಮತ್ತು ವಿದೇಶಿ ಸ್ಥಿತಮಾನವು ಅತ್ಯುನ್ನತ ಸಾಂವಿಧಾನಿಕ ಹಾಗೂ ಕಾನೂನು ಮಹತ್ವ…
Author: UllalaVani
ಬಂಟ್ವಾಳ: ಗ್ರಾಮಾತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಂಗೀಪೇಟೆ ಎಂಬಲ್ಲಿ ಮೆಂಜಿಸ್ ಪ್ಲಾಜ ಕಾಂಪ್ಲೆಕ್ಷ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕಿನ ಪರಂಗೀಪೇಟೆ ಬ್ರಾಂಚ್ ನಲ್ಲಿ ಜು.12 ರಂದು ರಾತ್ರಿ ವೇಳೆ ಯಾರೋ ಕಳ್ಳರು ಕಳ್ಳತನಕ್ಕೆ ಯತ್ನಿಸಿರುತ್ತಾರೆ. ಇಂದು ಬೆಳಿಗ್ಗೆ ಬ್ಯಾಂಕಿನ ಸಿಬ್ಬಂದಿಗಳು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದ್ದು, ಬ್ಯಾಂಕಿನ ಮೇಲ್ಛಾವಣಿಯನ್ನು ತುಂಡರಿಸಿ ಕಳ್ಳರು ಬ್ಯಾಂಕ್ ಒಳಗೆ ಪ್ರವೇಶಿಸಿರುವುದಾಗಿದೆ. ಪ್ರಸ್ತುತ ಸ್ಥಳಕ್ಕೆ ಬಂಟ್ವಾಳ ಗ್ರಾಮಾತರ ಪೊಲೀಸ್ ಠಾಣಾ ಪೊಲೀಸರು, ಬೆರಳಚ್ಚುತಂಡ, ಸೋಕೋ ತಂಡ ಗಳು ಭೇಟಿ ನೀಡಿದ್ದು, ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಯುತ್ತಿದೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಮಾದಕ ದ್ರವ್ಯಗಳ ದುರುಪಯೋಗ’ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಇರಾ ಗ್ರಾಮದ ಬಾಳೆಪುಣಿ ನಿವಾಸಿ ಹಾಗೂ ಪ್ರಸ್ತುತ ಕುಂಬ್ರದಲ್ಲಿ ಇಮಾಮರಾಗಿ ಸೇವೆ ಸಲ್ಲಿಸುತ್ತಿರುವ ಉಸ್ತಾದ್ ತ್ವಯ್ಯಿಬ್ ಮಳ್‌ಹರಿ ಅವರು ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಉಸ್ತಾದ್ ತ್ವಯ್ಯಿಬ್ ಮಳ್‌ಹರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಸಮಾಜದಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಅವರ ಪ್ರಬಂಧ ಅತ್ಯುತ್ತಮವೆಂದು ಆಯ್ಕೆಯಾಯಿತು.
ಬೆಂಗಳೂರು, ಜು.13; ಕರ್ನಾಟಕ ಲೋಕ ಸೇವಾ ಆಯೋಗದ (KPSC) 75 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಯೋಗದ ಅಧ್ಯಕ್ಷರನ್ನು ಅಮಾನತುಗೊಳಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ. ಕೆಪಿಎಸ್ಸಿ ಅಧ್ಯಕ್ಷರಾದ ಶ್ರೀ ಶಿವಶಂಕರಪ್ಪ ಎಸ್. ಸಾವುಕಾರ್ ಅವರ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಶ್ರೀ ಶಿವಶಂಕರಪ್ಪ ಎಸ್. ಸಾವುಕಾರ್ ಅವರು ತಮ್ಮ ಇಬ್ಬರು ಪುತ್ರಿಯರನ್ನು ಕೈಗಾರಿಕಾ ವಿಸ್ತರಣಾ ಅಧಿಕಾರಿ (Industrial Extension Officer) ಹುದ್ದೆಗಳಿಗೆ ಅಕ್ರಮವಾಗಿ ಆಯ್ಕೆ ಮಾಡಿಸಲು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರ ಪುತ್ರಿಯರು ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಾಗಿದ್ದರೂ, ಅಧ್ಯಕ್ಷರು ಆ ಆಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿಯದೆ ಅಂತಿಮ ಹಂತದ ಸಭೆಗಳಲ್ಲಿ ಭಾಗವಹಿಸಿ ಸಹಿ ಮಾಡಿರುವುದು…
ಇತ್ತೀಚೆಗೆ ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಇರ್ಫಾನ್ ಎಂಬಾತ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿದ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಅವರು ಖಾಸಗಿ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲದೆ, ಅವರು ಖಾಯಂ ಒಂದೇ ಖಾಸಗಿ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದವರೂ ಅಲ್ಲ. ಈ ಘಟನೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ನಡೆದಿರುವುದಲ್ಲ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಕೃತ್ಯ ಯಾರೇ ಮಾಡಿದ್ದರೂ ಅಂತಹ ಅಸಭ್ಯ ಹಾಗೂ ಸಮಾಜ ವಿರೋಧಿ ವರ್ತನೆಯನ್ನು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ, ಮಂಗಳೂರು ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕರ ಸುರಕ್ಷತೆ, ಮಹಿಳೆಯರ ಗೌರವ ಮತ್ತು ಪ್ರಯಾಣಿಕರ ವಿಶ್ವಾಸಕ್ಕೆ ಧಕ್ಕೆ ತರುವ ಯಾವುದೇ ಕೃತ್ಯಕ್ಕೆ ನಮ್ಮ ಸಂಘದಲ್ಲಿ ಯಾವುದೇ ರೀತಿಯ ಬೆಂಬಲವಿಲ್ಲ. ಒಬ್ಬ ವ್ಯಕ್ತಿಯ ವೈಯಕ್ತಿಕ ಕೃತ್ಯವನ್ನು ಇಡೀ ಖಾಸಗಿ ಬಸ್ ವಲಯಕ್ಕೆ ಸಂಬಂಧಿಸಿದಂತೆ ಬಿಂಬಿಸುವುದು ಸರಿಯಲ್ಲ. ಈ…
ಉಳ್ಳಾಲ ಬೈದರಪಾಲ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ‘ವೃಕ್ಷಾಂಕುರ ರಕ್ಷಾ–2026’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅವರು, ಪ್ರತಿಷ್ಠಾನದ ದಶಮ ಸಂಭ್ರಮದ ಅಂಗವಾಗಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವೃಕ್ಷಾಂಕುರ ರಕ್ಷಾ’ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪ್ರಕೃತಿಯನ್ನು ಉಳಿಸುವುದು ನಮ್ಮ ಬದುಕನ್ನು ರಕ್ಷಿಸುವಂತೆಯೇ ಆಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಸೇವೆಯನ್ನು ಮಾದರಿಯಾಗಿ ತೆಗೆದುಕೊಂಡು ಪರಿಸರ ಕಾಳಜಿ ಬೆಳೆಸಬೇಕು ಎಂದು ಕರೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ಸತೀಶ್ ಭಟ್ ಅವರು ಶುಭ ಹಾರೈಸಿ ಮಾತನಾಡಿದರು. ಅರ್ಚಕ ಉಮೇಶ್ ಭಟ್, ಕ್ಷೇತ್ರದ ಉಪಾಧ್ಯಕ್ಷ ಹರಿಶ್ಚಂದ್ರ, ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷ ಮಾಧವ ಉಳ್ಳಾಲ, ದಾಮೋದರ ನಡಾರ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ‘ವೃಕ್ಷಾಂಕುರ ರಕ್ಷಾ’ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು,…
ಬೆಂಗಳೂರು, ಜು. 13: ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಪ್ರಾಮಾಣಿಕ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಅಕ್ರಮಗಳನ್ನು ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವ ಪ್ರವೃತ್ತಿ ಮುಂದುವರಿದರೆ, ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಕುಗ್ಗುವ ಅಪಾಯವಿದೆ. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಹಿರಿಯ ಕೆಎಎಸ್ ಅಧಿಕಾರಿ ಆಶಾ ಪರ್ವಿನ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಆಸ್ಪತ್ರೆಯಲ್ಲಿನ ಅಕ್ರಮಗಳು, ಆಡಳಿತಾತ್ಮಕ ಅವ್ಯವಸ್ಥೆಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಸಾಕ್ಷ್ಯಾಧಾರಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೂ ಮುನ್ನ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದಲ್ಲಿನ ಅವ್ಯವಹಾರಗಳ ಬಗ್ಗೆ ವರದಿ ನೀಡಿದ ಬಳಿಕವೂ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆ, ಅಕ್ರಮಗಳನ್ನು ಬಯಲಿಗೆಳೆಯುವ ಅಧಿಕಾರಿಗಳಿಗೆ ರಕ್ಷಣೆ ಸಿಗುತ್ತಿದೆಯೇ ಅಥವಾ ಶಿಕ್ಷೆ ಸಿಗುತ್ತಿದೆಯೇ ಎಂಬ…
ಉಳ್ಳಾಲ: SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಮಾಡೂರು ಶಾಲೆಯಲ್ಲಿ ಭಾನುವಾರ ಸಂಭವಿಸಿದೆ. ಮೃತರನ್ನು ಕೊಲ್ಯ ನಿವಾಸಿ ಹರೀಶ್ ಗಟ್ಟಿ ಎಂದು ಗುರುತಿಸಲಾಗಿದೆ.SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಮಾಡೂರು ಶಾಲೆಯಲ್ಲಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಹುಡುಕುತ್ತಿದ್ದ ಸಂದರ್ಭ ಹರೀಶ್ ಗಟ್ಟಿ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ನೆರವು ನೀಡಲು ಪ್ರಯತ್ನಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಕೌನ್ಸಿಲರ್ ಸುಜಿತ್ ಮಾಡೂರು, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು,ಜು. 11 : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2026 ರ ಮೊದಲ ಆರು ತಿಂಗಳಲ್ಲಿ, ಜನವರಿಯಿಂದ ಜೂನ್ 30 ರವರೆಗೆ, ಒಟ್ಟು 136 ಜನರು ನಾಪತ್ತೆಯಾಗಿದ್ದಾರೆ. ಅವರಲ್ಲಿ 106 ಜನರನ್ನು ಪತ್ತೆಹಚ್ಚಲಾಗಿದ್ದು, ಇನ್ನು 30 ಜನರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ . ನಾಪತ್ತೆ ವರದಿಯಾದ 64 ಪುರುಷರಲ್ಲಿ 44 ಜನರನ್ನು ಪತ್ತೆಹಚ್ಚಲಾಗಿದೆ, ಆದರೆ 20 ಜನರು ಇನ್ನೂ ಪತ್ತೆಯಾಗಿಲ್ಲ. ಇನ್ನು 44 ಮಹಿಳೆಯರಲ್ಲಿ 38 ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ಆರು ಜನರು ಪತ್ತೆಯಾಗಿಲ್ಲ. ಎಲ್ಲಾ ಐದು ಹುಡುಗರು ಪತ್ತೆಯಾಗಿದ್ದಾರೆ, ನಾಪತ್ತೆಯಾದ 23 ಹುಡುಗಿಯರಲ್ಲಿ 19 ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ನಾಲ್ವರು ಇನ್ನೂ ಪತ್ತೆಯಾಗಿಲ್ಲ.ಪ್ರೀತಿ ಸಂಬಂಧ, ಅಪ್ರಬುದ್ಧತೆ, ಉದ್ಯೋಗ, ಅಕ್ರಮ ಸಂಬಂಧ, ಕುಟುಂಬ ಕಲಹ, ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ, ಲೈಂಗಿಕ ಶೋಷಣೆ, ಅನಾರೋಗ್ಯ ಸಮಸ್ಯೆಗಳು ನಾಪತ್ತೆಯ ಪ್ರಮುಖ ಕಾರಣವಾಗಿವೆ ಎನ್ನುವುದು ಪೊಲೀಸ್ ವಿಚಾರಣೆ, ದಾಖಲಾದ ಪ್ರಕರಣಗಳ ಮಾಹಿತಿಯಲ್ಲಿ ಸ್ಪಷ್ಟವಾಗಿದೆ.ನಾಪತ್ತೆಯಾದ ಪ್ರಕರಣಗಳಲ್ಲಿ ಹೊರಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಟ್ಟಡ, ಮನೆ ಕೆಲಸ,…
ಮುಡಿಪು :ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶ ಹಾಗೂ ಸಭಾಂಗಣ ಇತ್ಯಾದಿಗಳ ನಿರ್ಮಾಣದಲ್ಲಿ ನಾನಿಲ್ತಡಿ ತಿಮ್ಮಪ್ಪ ರೈ ಯವರ ಪಾತ್ರ ಹಿರಿದಾಗಿದೆ.ಧಾರ್ಮಿಕ ಕರ‍್ಯಗಳಲ್ಲಿ ಅಪಾರ ಶ್ರದ್ದೆಯಿದ್ದ ಅವರು ಹಲವಾರು ದಾನಿಗಳನ್ನು ಜೋಡಿಸಿಕೊಂಡು ರಾತ್ರಿ ಹಗಲೆನ್ನದೆ ದುಡಿದು ಪ್ರತಿಫಲವಾಗಿ ಇಂತಹ ಸುಂದರ ದೇವಸ್ಥಾನ ನಿರ್ಮಾಣವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಎನ್ ಭಟ್ ಹೇಳಿದ್ದಾರೆ. ಅವರು ಇತ್ತೀಚೆಗೆ ನಿಧನರಾದ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಟಿ.ರೈ ಯವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು. ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ ಟೀಕೆಗಳನ್ನು ಮೂಟೆಕಟ್ಟಿ ಅದರ ಮೇಲೆ ನಿಂತು ತಮ್ಮ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂಬುದಕ್ಕೆ ಎನ್ ಟಿ ರೈ ಸದಾ ಮಾದರಿಯಾಗಿದ್ದರು ಎಂದರು.ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಎನ್ ಆರ್ ಐ ಮಲ್ಲಿಕಾ ಆರ್ ಚೌಟ ಅವರ ಸಂದೇಶ ವಾಚಿಸಲಾಯಿತು.ಆಡಳಿತ ಮೊಕ್ತೇಸರರಾದ ಕೃಷ್ಣನಾಯ್ಕ ಸೊಡಂಕೂರು, ರಾಮ ನೋಂಡ, ಜಯಂತ ಗಾಂಭೀರ್ ಪಾವೂರುಗುತ್ತು. ಮಹಾಲಿಂಗ…

