Author: UllalaVani

Kannada News From Coastal Karnataka

ನವದೆಹಲಿ : ಚೀನಾ ದೇಶದಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದೆ. ಅದರ ಪರಿಣಾಮ ಬ್ಯಾಡ್ಮಿಂಟನ್ ಕ್ರೀಡೆಯ ಮೇಲಾಗುತ್ತಿದೆ.  ಹೌದು; ಚೀನಾದಲ್ಲಿ ಹಂದಿ ಮಾಂಸ ಖಾದ್ಯಗಳ ಸೇವನೆ ಹೆಚ್ಚುತ್ತಿದ್ದು, ಬಾತುಕೋಳಿಗಳ ಖಾದ್ಯಗಳ ಬೇಡಿಕೆ ಕುಸಿದಿದೆ. ಇದರಿಂದಾಗಿ ಬಾತುಕೋಳಿಗಳ ಪುಕ್ಕಗಳ ಲಭ್ಯತೆ ಗಣನೀಯವಾಗಿ ಕುಸಿದಿದ್ದು, ಬ್ಯಾಡ್ಮಿಂಟನ್ ಆಟದಲ್ಲಿ ಬಳಸಲಾಗುವ ಶಟಲ್ ಕಾಕ್‌ಗಳ ತಯಾರಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಫ್ರೆಂಚ್ ಸುದ್ದಿ ಪತ್ರಿಕೆ ‘ಲಾ ಎಕ್ವಿಪ್’ ಈಚೆಗೆ ವರದಿ ಮಾಡಿದೆ. ಬಾತುಕೋಳಿ ಅಥವಾ ಇನ್ನಿತರ ಪ್ರಾಣಿ, ಪಕ್ಷಿಗಳಿಂದ ಶಟಲ್ ತಯಾರಿಕೆಯ ಕಚ್ಚಾವಸ್ತುಗಳ ಮೇಲೆ ಅವಲಂಬಿತರಾಗುವುದನ್ನು ಬಿಡುವ ಕಾಲ ಇದು. ಅದಕ್ಕಾಗಿ ಈಗ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಭಾರತದ ಶಟಲ್ ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ‘ಈಗ ಅಥವಾ ಮುಂದಿನ ದಿನಗಳಲ್ಲಿ ಪುಕ್ಕಗಳ ಬಳಕೆಯನ್ನು ಬಿಟ್ಟು ಬೇರೆ ಮಾರ್ಗದತ್ತ ನಾವು ಸಾಗಬೇಕಿದೆ. ನಮ್ಮ ಕ್ರೀಡೆಯು ಅಗಾಧವಾಗಿ ಬೆಳೆದಿದೆ. ಚೀನಾ, ಇಂಡೊನೇಷ್ಯಾ ಮತ್ತು ಭಾರತ ದೇಶಗಳು ಶಟಲ್‌ಗಳ ಬಳಕೆಯಲ್ಲಿ ಸಿಂಹಪಾಲು ಹೊಂದಿವೆ’ ಎಂದು ಭಾರತದ ರಾಷ್ಟ್ರೀಯ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.’ಶಟಲ್‌ಗಳ ಕೊರತೆಗೆ…

Read More

ಮಂಗಳೂರು: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಗ್ರಹಣ ಸಮಾರಂಭ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ‌ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ ನಗರ ಅಧ್ಯಕ್ಷೆಯಾಗಿ ಮಾಜಿ ಕಾರ್ಪೊರೇಟರ್ ಕುಮಾರಿ ಅಪ್ಪಿ ಹಾಗೂ ಗ್ರಾಮಾಂತರ ಅಧ್ಯಕ್ಷೆಯಾಗಿ ಉಷಾ ಅಂಚನ್ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು. ರಾಜ್ಯ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಮಿತಾ ಡಿ ರಾವ್ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಝೀನತ್ ಅವರನ್ನು ನೇಮಕ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾಜಿ ಸಚಿವ ರಮಾನಾಥ.ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ,‌ ಪದ್ಮರಾಜ್ ಪೂಜಾರಿ, ಸದಾಶಿವ ಉಳ್ಳಾಲ್ ಮಮತಾ ಗಟ್ಟಿ, ಶಾಲೆಟ್ ಪಿಂಟೊ, ಮಂಜುಳ ನಾಯಕ್, ಶಕುಂತಲಾ ಕಾಮತ್, ನಮಿತಾ.ಡಿ.ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read More

ಕಾಸರಗೋಡು : ಬೇಕಲ ಸಮೀಪದ ಕೋಟಿಕುಳಂ ಎಂಬಲ್ಲಿನ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ಭಾರೀ ಪ್ರಮಾಣದ ಪ್ರಾಚ್ಯ ವಸ್ತು ಪತ್ತೆಯಾಗಿದೆ. ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆ , ಖಡ್ಗ ಗಳು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ. ಕೆಲ ಸಾಮಾಗ್ರಿಗಳಲ್ಲಿ ಅರಬಿ ಅಕ್ಷರಗಳನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಿದ್ದು, ತನಿಖೆಯ ಬಳಿಕ ನೈಜ ಸ್ಥಿತಿ ಅರಿವಾಗಲಿದೆ. ಮನೆಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.

Read More

ಕಡಬ : ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ 30 ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ ಸಾಧನೆ ಮಾಡಿದ್ದಾರೆ. ಕುರಾನ್ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಅವರು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿದ್ದಾರೆ. ಆಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದಿಸಲಾಗಿದೆ. ಈ ಕೃತಿಯು ಸುಮಾರು 14 ಕೆ.ಜಿ. ತೂಕ ಇದೆ. “ಒಂದು ಪುಟ ಬರೆಯಲು ನನಗೆ ಸುಮಾರು ನಾಲ್ಕು ಗಂಟೆ ಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ…

Read More

ಮಂಗಳೂರು : “ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಐಟಿಐನಲ್ಲಿದ್ದಾರೆ. ಅಂದರೆ ಇದರರ್ಥ ನೀವು ಜೀವನದಲ್ಲಿ ವಿಫಲರಾಗಿದ್ದೀರಿ ಎಂದಲ್ಲ. ಒಂದು ವಿಷಯದಲ್ಲಿ ಮಾತ್ರ ವಿಫಲರಾಗಿದ್ದೀರಿ ಎಂದಷ್ಟೇ ಅರ್ಥ. ನಿಮ್ಮ ಆಸಕ್ತಿಯನ್ನು ಅನುಸರಿಸಿ, ಆಗ ನೀವು ಯಶಸ್ಸನ್ನು ಕಂಡುಕೊಳ್ಳುತ್ತೀರಿ. ನಾವು ಯಾರನ್ನೂ ಕಡಿಮೆ ಎಂದು ಅಂದಾಜು ಮಾಡಬಾರದು. ಪಠ್ಯಕ್ರಮಕ್ಕೆ ಅಂತ್ಯವಿರಬಹುದು, ಆದರೆ ಜೀವನದಲ್ಲಿ ಕಲಿಕೆಗೆ ಅಂತ್ಯವಿಲ್ಲ. ನಿಮ್ಮ ಕೌಶಲ್ಯವನ್ನು ಯಶಸ್ಸಿನತ್ತ ನಿಮ್ಮ ಇಚ್ಛಾಶಕ್ತಿಯೊಂದಿಗೆ ಸಂಯೋಜಿಸಿದರೆ, ನೀವು ಯಶಸ್ವಿ ವ್ಯಕ್ತಿಯಾಗುತ್ತೀರಿ” ಎಂದು ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು. ಸೇಂಟ್ ಅಲೋಶಿಯಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಸೋಮವಾರ ನಡೆದ 2025-26ರ ಹೊಸ ಶೈಕ್ಷಣಿಕ ವರ್ಷ ಮತ್ತು ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಸೇಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ…

Read More

ಉಡುಪಿ : ಬ್ರಹ್ಮಾವರದ ಮುಂಕಿಂಜಡ್ಡು ಮೂಲದ ಯುವ ಹಾಗೂ ಬಹುಮುಖ ಪ್ರತಿಭೆಯ ವಿದುಷಿ ದೀಕ್ಷಾ ವಿ ಅವರು 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರನ್ನು ದಾಖಲಿಸಲು ಸಜ್ಜಾಗಿದ್ದಾರೆ. ‘ನವರಸ ದೀಕ್ಷಾ ವೈಭವಂ’ ಶೀರ್ಷಿಕೆಯ ಈ ಒಂಬತ್ತು ದಿನಗಳ ಸಾಧನೆಯು ಆಗಸ್ಟ್ 21ರಿಂದ ಆಗಸ್ಟ್ 30ರವರೆಗೆ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಕಾಲೇಜಿನ ಪಿಜಿ ಆಡಿಟೋರಿಯಂನಲ್ಲಿ ನಡೆಯಲಿದೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದುಷಿ ದೀಕ್ಷಾ, “ಮೊದಲಿಗೆ ಏನು ಮಾಡಬೇಕೆಂದು ನನಗೆ ಗೊಂದಲವಿತ್ತು, ಆದರೆ ನನ್ನ ಗುರುಗಳು ಮೊದಲು ವಿದ್ವತ್ ಮುಗಿಸಿ ನಂತರ ಈ ಗುರಿಯನ್ನು ಬೆನ್ನಟ್ಟುವಂತೆ ಸಲಹೆ ನೀಡಿದರು. ನಂತರ ವಿದ್ವಾನ್ ಯಶ್ವಂತ್ ಎಂ.ಜಿ. ಅವರು 24 ಗಂಟೆಗಳ ಕಾಲ ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದಾಗ, ನಾನೂ ಕೂಡ ಒಂದು ದಾಖಲೆ ಮಾಡಲು ಪ್ರೇರೇಪಿತನಾದೆ. ಅವರ ಮಾರ್ಗದರ್ಶನದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದೆ. ನನ್ನ ವಿದ್ವತ್…

Read More

ಮಂಗಳೂರು : ನಗರದ ವಿವಿಧ ಭಾಗಗಳಿಗೆ 28 ಹೊಸ ರೂಟ್‌ಗಳಲ್ಲಿ ಸರಕಾರಿ ಬಸ್‌ಗಳ ಸಂಚಾರಕ್ಕೆ ಪರವಾನಿಗೆ (ಪರ್ಮಿಟ್) ನೀಡುವ ಕುರಿತಂತೆ ಪರ – ವಿರೋಧ ವಾದಗಳಿಗೆ ಸೋಮವಾರ ನಡೆದ ಆರ್‌ಟಿಎ ಸಭೆ ಸಾಕ್ಷಿಯಾಯಿತು. ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ ಸಲ್ಲಿಕೆಯಾಗಿರುವ ನೂತನ ರೂಟ್‌ಗಳಲ್ಲಿ ಬಸ್‌ಗಳ ಅಗತ್ಯವಿದೆಯೇ ಎಂಬ ಬಗ್ಗೆ ಜಂಟಿ ಸಮೀಕ್ಷೆಯ ನಡೆಸಿದ ಬಳಿಕವೇ ಪರವಾನಿಗೆ ನಿರ್ಧಾರ ಕೈಗೊಳ್ಳಬೇಕು ಎಂದು ಖಾಸಗಿ ಬಸ್ಸು ಮಾಲಕರ ಪರ ವಕೀಲರಾದ ಎಂ.ವಿ. ನಾಗೇಶ್, ಪರಸರ ಕುಮಾರ್ ವಾದಿಸಿದರು. ಕೆಎಸ್‌ಆರ್‌ಟಿಸಿ ಪರವಾಗಿ ವಾದಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ, ಸಾರ್ವಜನಿಕರಿಂದ ಹಲವು ರೂಟ್‌ಗಳಿಗೆ ಬಸ್‌ಗಳ ಬೇಡಿಕೆ ಬಂದಲ್ಲಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಖಾಸಗಿ ಬಸ್ಸುಗಳು ಇರುವಲ್ಲಿಯೂ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಸರಕಾರದಿಂದ ನಗರಕ್ಕೆ ನಗರಕ್ಕೆ 100 ಇಲೆಕ್ಟ್ರಿಕ್…

Read More

ಮಂಗಳೂರು : ದಿವಂಗತ ಕೋರಿಕಾರ ವಸಂತಕುಮಾರ್ ಶೆಟ್ಟಿ ಅವರ ಪತ್ನಿ ನಿಟ್ಟೆ ಶಬರಿ ವಿ. ಶೆಟ್ಟಿ (85) ಮಂಗಳೂರಿನ ಕದ್ರಿಯ ಶಿವಬಾಗ್‌ನ ಸ್ವಗೃಹದಲ್ಲಿ ನಿಧನರಾದರು. ಲಯನ್ಸ್ ಕ್ಲಬ್ ಸೇರಿದಂತೆ ಬಹಳಷ್ಟು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರು. ಮೃತರು ಇಬ್ಬರು ಪುತ್ರರಾದ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಡೆಪ್ಯೂಟಿ ಡೈರೆಕ್ಟರ್ ದೀಪಕ್ ಶೆಟ್ಟಿ ಹಾಗೂ ಶಿರೀಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More

ಮಂಗಳೂರು : ನೂರ ಹದಿಮೂರು ವರ್ಷಗಳ ಸಮರ್ಪಿತ ಸೇವೆಯ ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಎಂಸಿಸಿ ಬ್ಯಾಂಕ್‌ನ ಆಶ್ರಯದಲ್ಲಿ ಎನ್‌ಆರ್‌ಐ ಸಮಾವೇಶ ಮಂಗಳೂರಿನ ಅತ್ತಾವರದಲ್ಲಿರುವ ದಿ ಅವತಾರ್ ಹೋಟೆಲ್‌ನಲ್ಲಿ ರವಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಇತ್ತೀಚಿನ ಆವಿಷ್ಕಾರಗಳು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿವೆ ಮತ್ತು ಬ್ಯಾಂಕಿನ ನಿರಂತರ ಬೆಳವಣಿಗೆಯಲ್ಲಿ ಅನಿವಾಸಿ ಭಾರತೀಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿವೆ ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಕಂಕನಾಡಿಯ ಎಫ್‌ಎಂಸಿಐ ನಿರ್ದೇಶಕ ವಂ. ಫೌಸ್ಟಿನ್ ಲೋಬೊ ಉದ್ಘಾಟಿಸಿ ಮಾತನಾಡಿ ನಿರಂತರವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಮಹತ್ವವನ್ನು ವಿವರಿಸಿದರು. ಎನ್‌ಆರ್‌ಐಗಳು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು. ರಿಲಯೆಬಲ್ ಫೆಬ್ರಿಕೇಟರ್ಸ್ ಎಲ್‌ಎಲ್‌ಸಿ ಮಾಲಕ ಜೇಮ್ಸ್ ಮೆಂಡೋನ್ಸಾ, ಅಬುಧಾಬಿ ಅಮಿಗೋ ಆಟೋಮೊಬೈಲ್ ಸರ್ವೀಸಸ್ ಎಸ್‌ಪಿ ಎಲ್‌ಎಲ್‌ಸಿ ಆಡಳಿತ ನಿರ್ದೇಶಕ ಲಿಯೊ ರೊಡ್ರಿಗಸ್ ಮತ್ತು ಲಿಯೊ ರೊಡ್ರಿಗಸ್ ಪತ್ನಿ ಲವೀನಾ ರೋಡ್ರಿಗಸ್ ,ಡೈಜಿವರ್ಲ್ಡ್ ಮೀಡಿಯಾ…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ನಿವೃತ್ತ ಯೋಧ ನಾಯಕ್ ಜಗದೀಶ್ ಎಮ್. ರವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಸೇನೆಯ ಸೇವೆಯಲ್ಲಿರುವಾಗ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಬಗ್ಗೆ ಪ್ರಸ್ತಾಪಿಸಿದರು. ದೇಶ ಸೇವೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಶ ಸೇವೆಯ ಕಾಯಕದ ಜೊತೆಗೆ ತಮ್ಮ ಭವಿಷ್ಯವನ್ನು ಕೂಡ ಕೆಲಸದ ಭದ್ರತೆಯೊಂದಿಗೆ ಗಟ್ಟಿ ಗೊಳಿಸಬಹುದು. ದೇಶವನ್ನು ಬಲಿಷ್ಟಗೊಳಿಸುವ ಜವಾಬ್ದಾರಿ ಪ್ರಜೆಗಳದ್ದು, ಕರಾವಳಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆಗೈದ ಯೋಧರನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬರುತ್ತಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ನಮ್ಮ ಕರಾವಳಿಯ ಹೆಮ್ಮೆಯ ನಿವೃತ್ತ ಯೋಧ ನಾಯಕ್…

Read More