ತೊಕ್ಕೊಟ್ಟು,ಅ.24; ಆರೋಗ್ಯಯುತ ಪ್ರಜೆಗಳಿದ್ದಾಗ ದೇಶವೂ ಆರೋಗ್ಯದಿಂದ ಇರುತ್ತದೆ. ಜಾತಿ, ಮತ, ಭಾಷೆಯ ಭೇದವಿಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಕ್ರೀಡೆಗೆ ಇದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.



ತೊಕ್ಕೊಟ್ಟು ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮತ್ತು ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಇವರ ಸಹಕಾರದೊಂದಿಗೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಮೂರು ದಿನ ನಡೆಯಲಿರುವ ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಮಾಸ್ಟರ್ಸ್ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ‘ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025’ ದಿ.ಶೇಖರ್ ಬಂಗೇರ ವೇದಿಕೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕ್ರೀಡಾಪಟುಗಳ ಆರೋಗ್ಯ ಸದಾ ಸದೃಢವಾಗಿರುತ್ತದೆ. ಮಕ್ಕಳಿಗೆ ಬದುಕಿನಲ್ಲಿ ಶಿಸ್ತು ಬರಬೇಕಾದರೆ ಶೈಕ್ಷಣಿಕ ಜೀವನದಲ್ಲೇ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು.
ರಾಜ್ಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025ರ ಗೌರವಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್ ಮಾತನಾಡಿ, ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಹೆಸರು ರಾಜ್ಯಮಟ್ಟದಲ್ಲೇ ಹೆಸರುವಾಸಿಯಾಗಿದೆ. ಯಂತ್ರಗಳು ಇಲ್ಲದೆ ಕೇವಲ ತಮ್ಮ ಶಕ್ತಿಯಿಂದಲೇ 50ವರ್ಷಗಳ ಹಿಂದೆ ದಿ.ಶೇಖರ್ ಬಂಗೇರ ಅವರು ಸ್ಥಾಪಿಸಿದ ಸಣ್ಣ ವ್ಯಾಯಾಮ ಶಾಲೆ ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ ಅಂತ ಹೇಳಿದ್ದಾರೆ.

ರಾಜ್ಯ ಮಟ್ಟದ ‘ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025’ರ ಸ್ಪರ್ಧಾಕೂಟಕ್ಕೆ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ಹೊಳ್ಳ ಚಾಲನೆ ನೀಡಿದರು. ರಾಜ್ಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಗೌರವಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್ ಅಧ್ಯಕ್ಷತೆ ವಹಿಸಿದರು. ಇನ್ನು ಚಿಕಿತ್ಸಾ ವಿಭಾಗವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದ್ರು. ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಹರೀಶ್ ಉಳ್ಳಾಲಬೈಲ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್‌ನಗರ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪವರ್ ಲಿಫ್ಟಿಂಗ್ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ನಗರಸಭೆಯ ಅಧ್ಯಕ್ಷೆ ಕೆ.ಶಶಿಕಲಾ, ಪ್ರಗತಿಪರ ಕೃಷಿಕ ಸುರೇಶ್ ಚೌಟ, ಕರ್ನಾಟಕ ಪವರ್ ಅಸೋಸಿಯೇಷನ್ ಉಪಾಧ್ಯಕ್ಷ ಪುರಂದರ ದಾಸ್ ಕೂಳೂರು, ದ.ಕ.ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ ,ಉಪಾಧ್ಯಕ್ಷರಾದ ಸುದೇಶ್ ಮರೋಳಿ, ವಿನೋದ್ ದುಬೈ, ಪ್ರಧಾನ ಸಂಚಾಲಕ ಹೇಮಚಂದ್ರ ಬಬ್ಬುಕಟ್ಟೆ, ಸಹ ಸಂಚಾಲಕರಾದ ದಿನಕರ ಉಳ್ಳಾಲಬೈಲ್, ದಾಮೋದರ ಆಚಾರ್ಯ ಪಿಲಾರ್, ಪ್ರ ಕಾರ್ಯದರ್ಶಿ ಕುಶಾಲ್ ರಾಜ್, ಕೋಶಾಧಿಕಾರಿ ಅಮಿತ್ ಉಳ್ಳಾಲಬೈಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರಾಜ್ಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಸುಲಾಯ ವಂದಿಸಿದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.



