Author: UllalaVani

Kannada News From Coastal Karnataka

;ಉಳ್ಳಾಲ; ರಾಜ್ಯದಲ್ಲಿರುವ 2-3 ಅತ್ಯುತ್ತಮ ಪ್ಯಾಲಿಟಿವ್ ಕೇರ್ ಕೇಂದ್ರಗಳಲ್ಲಿ ತಪಸ್ಯಾ ಫೌಂಡೇಶನ್ ಒಂದು ಅತ್ಯುನ್ನತ ಮಟ್ಟದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಮಾನವೀಯತೆ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಬದ್ಧತೆಯೊಂದಿಗೆ ಈ ಸಂಸ್ಥೆ ಜನರ ಮನಗಳಲ್ಲಿ ಒಂದು ವಿಶೇಷ ಸ್ಥಾನ ಗಳಿಸಿದೆ ಎಂದು ವಿಧಾನಸಭಾ ಅಧ್ಯಕ್ಷ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅವರು ತಪಸ್ಯಾ ಫೌಂಡೇಶನ್ , ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಶನ್ , ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ಕುರ್ನಾಡು ಇನ್ಫೋಸಿಸ್ ಪಕ್ಕದ ಮುಡಿಪು ಮಿತ್ತಕೋಡಿ ಸಮೀಪ ನಿರ್ಮಿಸಲಾದ ಲಯನ್ಸ್ ಮಕ್ಕಳ ಕ್ಯಾನ್ಸರ್ ಕೇರ್ ಯುನಿಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಲು, ಸಮಾಜದ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಎಲ್ಲರ ಸಹಕಾರ ದೊರೆತರೆ, ತಪಸ್ಯಾ ಫೌಂಡೇಶನ್ ದೇಶದಾದ್ಯಂತ ಮಾದರಿಯಾದ ಪ್ಯಾಲಿಟಿವ್ ಕೇರ್ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಕರಾವಳಿ ಕರ್ನಾಟಕದ ಮಣ್ಣಿನಲ್ಲಿ ಸಂತೋಷ, ಪ್ರೀತಿ ಮತ್ತು ತನ್ನತನ…

Read More

ಉಳ್ಳಾಲ: ಮೊಗವೀರಪಟ್ನ ಕೋಟೆಪುರ ಪ್ರದೇಶದ ರಸ್ತೆ ಸಮಸ್ಯೆಗೆ ಸ್ಪೀಕರ್ ಯು.ಟಿ. ಖಾದರ್ ತಕ್ಷಣ ಸ್ಪಂದಿಸಿ, ಅಬ್ಬಕ್ಕ ಸರ್ಕಲ್‌ದಿಂದ ಕೋಟೆಪುರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಕೋಟಿ ಮಂಜೂರು ಮಾಡಿದ್ದು, ಟೆಂಡರ್ ಹಂತದಲ್ಲಿರುವುದಾಗಿ ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ. ಉಲ್ಲಾಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪೀಕರ್ ಅವರನ್ನು ಮೊಗವೀರಪಟ್ಟಣ ನಿವಾಸಿಗಳು ಭೇಟಿ ನೀಡಿ ರಸ್ತೆ ಅವ್ಯವಸ್ಥೆ ಕುರಿತು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಪಂದಿಸಿದ್ದಾರೆ.ಈ ಹಿನ್ನೆಲೆಯಲ್ಲಿ ನಾಳೆಯಿಂದ ಪ್ಯಾಚ್‌ ವರ್ಕ್‌ ಕಾರ್ಯಾರಂಭವಾಗಲಿದೆ. ರಸ್ತೆ ಮರುಡಾಮರೀಕರಣ ಕಾರ್ಯಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದ ಕಾಮಗಾರಿ ಆರಂಭವಾಗಲಿದೆ. ಅಲ್ಲಿಯವರೆಗೆ ನಾಳೆಯಿಂದಲೇ ಪ್ಯಾಚ್ ವರ್ಕ್ ಆರಂಭಗೊಳ್ಳಲಿದೆ ಎಂದಿದ್ದಾರೆ.ಸ್ಥಳೀಯ ನಿವಾಸಿಗಳ ಮನವಿಗೆ ಸ್ಪೀಕರ್ ಖಾದರ್ ಸ್ಪಂದಿಸಿದ್ದು, ಉಳ್ಳಾಲದ ರಂಜಿತಾ ಉಳ್ಳಾಲ, ನಿಶಾ, ಕಾವ್ಯಶ್ರೀ ಹಾಗೂ ವೀಣಾ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ ಉಳ್ಳಾಲ ಉಪಸ್ಥಿತರಿದ್ದರು

Read More

ಮಂಗಳೂರು,ನ.03; ನಿಟ್ಟೆ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವವು ನ.7 ಮತ್ತು 8ರಂದು ಮಂಗಳೂರಿನ ದೇರಳಕಟ್ಟೆ ಕ್ಷೇಮ ಕ್ಯಾಂಪಸ್ ಹಾಗೂ ಕಾರ್ಕಳದ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯ ಉಪಕುಲಪತಿ ಫ್ರೋ.ಎಂಎಸ್.ಮೂಡಿತ್ತಾಯ ಹೇಳಿದ್ದಾರೆ. ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟಿಕೋತ್ಸವದಲ್ಲಿ 1999 ಪದವೀಧರರರಿಗೆ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಪೈಕಿ 28 ಡಾಕ್ಟರೇಟ್ , 959 ಸ್ನಾತಕೋತ್ತರ ಪದವೀಧರರಿಗೆ, 1054 ಪದವೀಧರರಿಗೆ, 5ಫೆಲೋಶಿಫ್, 2ಪಿ.ಜಿ.ಡಿಪ್ಲೋಮಾ ಪದವೀಧರರಿಗೆ ಪದವಿ ನೀಡಲಾಗುವುದು.ದಿ. ಡಾ.ಮಧುಕರ ಶಾಂತರಾಮ ಕೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಗುವುದು. ಕುಲಾಧಿಪತಿ ಎನ್‌ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಹೊಸದಿಲ್ಲಿ ಏಮ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ಎರಡನೇ ಕಾರ್ಯಕ್ರಮವು ನ.8ರಂದು ನಿಟ್ಟೆ ವಿ.ವಿ. ಆವರಣದಲ್ಲಿ ನಡೆಯಲಿದ್ದು, ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿದ್ದು ಪಿ.ಅಲಗೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾಂಗ ನಿಯಂತ್ರಕ ಪ್ರಸಾದ್…

Read More

ನವದೆಹಲಿ, ನ. 03 : ಪೂನಾದ ಹೊಸ ಬಿಷಪ್ ಆಗಿ ಫಾದರ್ ಸೈಮನ್ ಅಲ್ಮೇಡಾ(65) ಅವರನ್ನು ಪೋಪ್ ಲಿಯೋ XIV ಅವರು ನೇಮಿಸಿದ್ದಾರೆ. 2024ರ ನವೆಂಬರ್ 30 ರಂದು ಬಿಷಪ್ ಜಾನ್ ರೊಡ್ರಿಗಸ್ ಅವರನ್ನು ಬಾಂಬೆಯ ಕೋಡ್ಜುಟರ್ ಆರ್ಚ್ಬಿಷಪ್ ಆಗಿ ನೇಮಿಸಿದ ನಂತರ ತೆರವಾದ ಸ್ಥಾನಕ್ಕೆ ಫಾದರ್ ಸೈಮನ್ ಅಲ್ಮೇಡಾ ಅವರನ್ನು ನೇಮಿಸಲಾಗಿದೆ. ಫಾ. ಅಲ್ಮೇಡಾ ಅವರು ಪ್ರಸ್ತುತ ವೆಸ್ಟರ್ನ್ ರೀಜನಲ್ ಬಿಷಪ್ಸ್ ಕೌನ್ಸಿಲ್‌ನ ಉಪ ಕಾರ್ಯದರ್ಶಿಯಾಗಿ ಮತ್ತು ಪುಣೆಯ ಘೋರ್ಪುರಿಯ ಸೇಂಟ್ ಜೋಸೆಫ್ ಚರ್ಚ್‌ನ ಪ್ಯಾರಿಷ್ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.1960ರ ನವೆಂಬರ್ 4 ರಂದು ಗಾಸ್, ಭಟೋರಿಯಲ್ಲಿ ಜನಿಸಿದ ಫಾ. ಅಲ್ಮೇಡಾ ಅವರು ಸೇಂಟ್ ಗೊನ್ಸಾಲೋ ಗಾರ್ಸಿಯಾ ಪ್ರಾಥಮಿಕ ಶಾಲೆ ಮತ್ತು ಹೋಲಿ ಕ್ರಾಸ್ ಪ್ರೌಢಶಾಲೆ, ನಿರ್ಮಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1978 ರಲ್ಲಿ, ಅವರು ಪುಣೆಯಲ್ಲಿ ಪ್ರಕಾಶ್ ಭವನ್ ಮೈನರ್ ಸೆಮಿನರಿ ಸೇರಿದರು. ನಂತರ ಮುಂಬೈನ ಸೇಂಟ್ ಪಿಯಸ್ X ಕಾಲೇಜಿನಲ್ಲಿ ಫಿಲೋಸಾಫಿಕಲ್ ಮತ್ತು ಥಿಯೋಲಾಜಿಕಲ್ ಅಧ್ಯಯನ ಮಾಡಿದರು. 1990ರ ಏಪ್ರಿಲ್ 1 ರಂದು,…

Read More

ಮಂಗಳೂರು: ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳಕ್ಕೆ ‘ನವ’ ವಿನೂತನ ಕಾರ್ಯಕ್ರಮಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಡಿ.27ರಂದು ನಡೆಯಲಿರುವ ಮಂಗಳೂರು ಕಂಬಳದ ಕುರಿತಂತೆ ನಗರದ ಪತ್ತುಮುಡಿ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಯುವಕರೆಲ್ಲ ಸೇರಿಕೊಂಡು ಆರಂಭಿಸಿದ್ದ ಮಂಗಳೂರು ಕಂಬಳಕ್ಕೆ ಈ ಬಾರಿ 9ನೇ ವರ್ಷದ ಸಂಭ್ರಮವಾಗಿರುವುದು ಅತ್ಯಂತ ಖುಷಿಯ ವಿಚಾರ. ಈ ನಿಟ್ಟಿನಲ್ಲಿ ಒಂಬತ್ತು ರೀತಿಯ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಚನೆ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ನಿಷೇಧವಾಗುತ್ತದೆ ಎಂದಾಗ ಅದರ ವಿರುದ್ಧ ಮಂಗಳೂರಿನಲ್ಲಿ ಪಕ್ಷ-ಬೇಧವಿಲ್ಲದೆ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಮಂಗಳೂರು ನಗರದಲ್ಲಿ ಕಂಬಳ ಆರಂಭಗೊಳ್ಳಲು ಆ ದಿನವೇ ನಿರ್ಧರಿಸಲಾಗಿತ್ತು. ಅದೇ ಹುಮ್ಮಸ್ಸಿನಲ್ಲಿ…

Read More

ಉಳ್ಳಾಲ : ಬೀಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಏರಿಕೆಯಾದ ತುಟ್ಟಿಭತ್ಯೆ ಕನಿಷ್ಠ ಕೂಲಿ ಪಾವತಿಯ ಬೇಡಿಕೆ ಇಟ್ಟು ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನ ಕೊಲ್ಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗಲು ಒಂದು ಸೆಸ್ ನ್ನು ಬೀಡಿ ಮಾಲೀಕರು ಸರ್ಕಾರಕ್ಕೆ ಕೊಡಬೇಕು. ಈಗ ಸೆಸ್ ನೀಡುವುದನ್ನು ಮಾಲೀಕರು ನಿಲ್ಲಿಸಿದ್ದಾರೆ. ಈ ಕಾರಣದಿಂದ ಕಾರ್ಮಿಕರಿಗೆ ಕೆಲಸ ,ಕೂಲಿ ಸಿಗುತ್ತಿಲ್ಲ . ಈ ಬೀಡಿ ಕಾರ್ಮಿಕರಿಗೆ ಪರ್ಯಾಯ ಜೀವನವನ್ನು ಮಾಲೀಕರು ರೂಪಿಸಬೇಕು ಎಂದರು. ಬೆರಳೆಣಿಕೆಯಷ್ಟು ಬಂಡವಾಳ ಶಾಹಿ ಗಳ ಕೈಯಲ್ಲಿ ಈ ದೇಶದ ಸಂಪತ್ತು ಸೇರಿಕೊಂಡಿದೆ. ಬಹುಪಾಲು ಸಂಖ್ಯೆಯಲ್ಲಿ ಬಡವರು ಇಲ್ಲಿದ್ದಾರೆ. ಹೀಗೆ ಮುಂದುವರೆದರೆ ಅಭಿವೃದ್ಧಿ ಕಾಣದು ಎಂದರು.ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಬಂದಿಲ್ಲ. ಆದರೆ ಏನು ಕೊಡದ ಕೇಂದ್ರ ಸರ್ಕಾರಕ್ಕೆ ಸಂಕಷ್ಟ ಬಂದಿದೆ.ಕರ್ನಾಟಕ…

Read More

ಉಳ್ಳಾಲ: ಸೋಮೇಶ್ವರದ ,ಸೋಮನಾಥ ಕ್ಷೇತ್ರದ ಬಳಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು ರಾಜ್ಯ ಸರಕಾರವು ಇದರ ಬಗ್ಗೆ ವಿಶೇಷ ಗಮನ ನೀಡಬೇಕಿದೆ.ಶಾಸಕ ಯು.ಟಿ.ಖಾದರ್ ಅವರು ವಿದಾನಸಭೆಯ ಸಭಾಧ್ಯಕ್ಷರಾಗಿರುವುದರಿಂದ ಅವರಿಗೆ ಈಗ ವಿಶೇಷ ಶಕ್ತಿಯಿದ್ದು ಸೋಮೇಶ್ವರವನ್ನ ಪ್ರವಾಸೋದ್ಯಮ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆಯೆಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಉಳ್ಳಾಲ ತಾಲೂಕಿನ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ಭಕ್ತರ ಬಳಕೆಗಾಗಿ ಸಂಸದರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಶೌಚಾಲಯಕ್ಕೆ ಭಾನುವಾರದಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸೋಮನಾಥ ಕ್ಷೇತ್ರವು ಧಾರ್ಮಿಕ ಶ್ರದ್ಧಾ ಕೇಂದ್ರ ಮಾತ್ರವಲ್ಲದೆ ಈ ಪ್ರದೇಶವನ್ನ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಕಲ್ಪನೆ ಇದೆ.ಸೋಮನಾಥ ಕ್ಷೇತ್ರದ ಆಡಳಿತ ಸಮಿತಿಯವರು ಅಭಿವೃದ್ಧಿಯ ಕುರಿತಂತೆ ಉತ್ತಮವಾದ ಮಾಸ್ಟರ್ ಪ್ಲ್ಯಾನ್ ಮಾಡಿ ಕೊಡಿ.ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಅನುದಾನಗಳನ್ನ ಹೊಂದಿಸಿಕೊAಡು ಅಭಿವೃದ್ಧಿ ಯೋಜನೆಯನ್ನ ಕಾರ್ಯಗತಗೊಳಿಸುವ ಅವಕಾಶ ಇದೆ ಎಂದರು. ಸೋಮೇಶ್ವರ ಪುರಸಭಾ ಅಧ್ಯಕ್ಷರಾದ ಕಮಲ ನೂತನ ಶೌಚಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಕಾರ್ಯದರ್ಶಿ…

Read More

ಉಳ್ಳಾಲ:ರಾಜ್ಯ ಸರಕಾರ ಅನುಷ್ಟಾನಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳಿಂದ‌ ಇಂದು ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.ಕುಟುಂಬವನ್ನ‌ ನಿರ್ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ.ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನ ಭವಿಷ್ಯದ ಉತ್ತಮ‌ ಪ್ರಜೆಗಳನ್ನಾಗಿ ರೂಪಿಸಬೇಕಿದೆ.ತೊಟ್ಟಿಲನ್ನ ತೂಗೋ ಕೈಗಳು ದೇಶವನ್ನ ಆಳಬಹುದೆಂದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತೋರಿಸಿಕೊಟ್ಟಿದ್ದು ಅವರ ಧೈರ್ಯ,ತತ್ವಾದರ್ಶಗಳನ್ನ‌ ನಾವು ಮೈಗೂಡಿಸಬೇಕಿದೆಯೆಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರಿಯದರ್ಶಿನಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಅಂಬಿಕಾರೋಡ್‌ ಗಟ್ಟಿ ಸಮಾಜ ಭವನದಲ್ಲಿ ಶನಿವಾರ ‘ನಮ್ಮ ಕಥೆ, ನಮ್ಮ ಶಕ್ತಿ, ನಮ್ಮ ಯಶಸ್ಸು, ಬನ್ನಿ ಮಹಿಳಾ ಸಮಾವೇಶದಲ್ಲಿ’ ಎಂಬ ಘೋಷಣೆಯಡಿ ನಡೆದ ‘ಪರಿವರ್ತನಾ’ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಈ ಮಹಿಳಾ ಸಮಾವೇಶವು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ.ಪ್ರತಿ ತಾಲೂಕು ಜಿಲ್ಲೆಗಳಲ್ಲೂ ಇಂತಹ ಮಹಿಳಾ ಸಮಾವೇಶ ನಡೆಯುವಂತಾಗಬೇಕೆಂದರು. ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಫಲಾನುಭವಿಗಳು ವೇದಿಕೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ…

Read More

ಉಳ್ಳಾಲ:ಪತ್ರಕರ್ತ ಮನೋಹರ್ ಪ್ರಸಾದ್ ಅವರೇ ನನ್ನ ಮಾಧ್ಯಮ ವೃತ್ತಿ ಜೀವನಕ್ಕೆ ಪ್ರೇರಣೆಯಾಗಿದ್ದರು.ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು,ಸಿನೆಮಾ ಸೆಲೆಬ್ರಿಟಿಗಳು,ಕ್ರೀಡಾಪಟುಗಳ ಬಗೆಗಿನ ವರದಿಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಾಮಾಜಿಕ ಮಾಧ್ಯಮಗಳನ್ನೂ ಅವರು ಸಮರ್ಪಕವಾಗಿ ಬಳಸಿ ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡಿದ್ದಾರೆ.ಅವರು ಮಾಡಿರುವ ಸಾಧನೆಗಳು ಮತ್ತು ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದು ಖ್ಯಾತ ಜಾನಪದ ಸಂಸ್ಕೃತಿ ಚಿಂತಕರಾದ ಕದ್ರಿ ನವನೀತ್ ಶೆಟ್ಟಿ ಹೇಳಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಮತ್ತು ಅಗಲಿದ ಹಿರಿಯ ಪತ್ರಕರ್ತರಾದ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ,ವಿದ್ಯಾಧರ ಶೆಟ್ಟಿ,ಛಾಯಾಗ್ರಾಹಕ ಅಶೋಕ್ ಉಳ್ಳಾಲ್ ಮತ್ತು ಏಷಿಯನ್ ಕ್ಲಾಸಿಕ್ ಆಂಡ್ ಎಕ್ವಿಪ್ಡ್ ಬೆಂಚ್ ಚಾಂಪಿಯನ್ಶಿಪ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕವನ್ನು ಗಳಿಸಿದ ಉಳ್ಳಾಲ ನಗರಸಭೆಯ…

Read More

ಬೆಂಗಳೂರು, ನವೆಂಬರ್ 3: ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್​ ಸವಾರನೊಬ್ಬ ತನ್ನ ಗಾಡಿಗೆ ಕುದುರೆಯೊಂದನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಈ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ. ಸ್ಕೂಟರ್​ಗೆ ಸವಾರನ ಅನಾಗರಿಕತೆ ಸವಾರನೊಬ್ಬ ತನ್ನ ಸ್ಕೂಟರ್​ಗೆ ಅಸಹಾಯಕ ಕುದುರೆಯನ್ನು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ತನ್ನ ಸುತ್ತ ಮುತ್ತಲೂ ಓಡಾಡುತ್ತಿರುವ ವಾಹನಗಳನ್ನು ನೋಡಿ ಕುದುರೆ ಭಯಭೀತವಾದಂತೆ ಈ ವೀಡಿಯೋದಲ್ಲಿ ಕಂಡುಬಂದಿದೆ. ಸ್ಕೂಟರ್​ಗೆ ಓಡಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸದೆ ಕೈಯಲ್ಲಿ ಫೋನ್ ಹಿಡಿದು ಪುಂಡಾಟ ಮೆರೆದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈತನ ಬೇಜವಾಬ್ದಾರಿತನ ಮತ್ತು ಅನಾಗರಿಕತೆಗೆ ಅಸಹನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತು ಕರ್ನಾಟಕ ಪೋರ್ಟ್​ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಾಣಿಗಳು ಮನರಂಜನಾ ಸಾಧನಗಳಲ್ಲ; ಅವು ನಮ್ಮಂತೆಯೇ ನೋವು, ಭಯ ಮತ್ತು ಆಯಾಸವನ್ನು ಅನುಭವಿಸುತ್ತವೆ. ಅಧಿಕಾರಿಗಳು ಈ  ಕ್ರೌರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವನಂತಹ…

Read More