ಪುತ್ತೂರು, ನ. 04: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಸಮೀಪ ನಾಲ್ಕು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟ ಒಂದು ತಿಂಗಳೊಳಗೆ ಗಾಯಾಳು ತಂದೆಯೂ ನ.3ರಂದು ಸಾವನ್ನಪ್ಪಿದ್ದಾರೆ. ಮೇ 27 ರಂದು ಖಾಸಗಿ ಬಸ್ ಮತ್ತು ಕಾರಿನ ನಡುವೆ ಈ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಅಂಡೆಪುಣಿ ಈಶ್ವರ ಭಟ್ ಅವರ ಮಗಳು ಅಪೂರ್ವಾ (35) ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಕ್ಟೋಬರ್ 7 ರಂದು ನಿಧನರಾಗಿದ್ದರು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಅವರ ತಂದೆ, ಈಶ್ವರ ಭಟ್ (75), ಅವರು ಕೂಡ ನವೆಂಬರ್ 3 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸಿದ ದಿನ, ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಪುತ್ತೂರು ಪಟ್ಟಣದಿಂದ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ, ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುರ ಸಮೀಪ ಅವರ ಕಾರಿಗೆ…
Author: UllalaVani
ಬೆಂಗಳೂರು,ನ.04: : ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಟಿ ಅವರು ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ಕಾಪು,ನ.04: ಸಮಾಜದಲ್ಲಿ ಉನ್ನತ ವಿದ್ಯಾಭ್ಯಾಸ ನೀಡುವ ವಿದ್ಯಾ ಕೇಂದರೆಗಳು ಬೆಳೆದು ಬರಬೇಕು. ಎಲ್ಲಾ ತರಹದ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಬೇಕು. ಉನ್ನತ ವಿದ್ಯಾಭ್ಯಾಸದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಝಕರಿಯಾ ಜೋಕಟ್ಟೆಯವರು ಅಭಿಪ್ರಾಯಪಟ್ಟಿದ್ದಾರೆ. ಡಿಕೆಎಸ್ಸಿ ಅಧೀನದಲ್ಲಿ ಅಲ್ ಇಹ್ಸಾನ್ ವಿದ್ಯಾ ಸಮುಚ್ಚಯ ನೀಡಿದ ಭವ್ಯ ಸ್ವಾಗತ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಎಂ.ಎ.ಗಫೂರ್ ಮೂಳೂರು ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಹು ಅಬೂಬಕ್ಕರ್ ಹಾಜಿ ನೇಜಾರ್ ಅವರನ್ನು ಡಿಕೆಎಸ್ಸಿ ವತಿಯಿಂದ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಸಭೆಯನ್ನು ಉದ್ದೇಶಿಸಿ ಡಿಕೆಎಸ್ಸಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮೂಳೂರು, ಸಂಸ್ಥೆಯ ಜನರಲ್ ಮ್ಯಾನೇಜರ್ ಯು.ಕೆ. ಮುಸ್ತಫಾ ಸಅದಿ, ಆಡಳಿತಾಧಿಕಾರಿ ಪ್ರೊ.ಯೂಸುಫ್ ಸುಳ್ಯ ಮಾತಾನಾಡಿದರು.…
ಮಂಗಳೂರು,ನ.04: ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭಾಂಶ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್ ಬುಕ್ ನೋಡುತ್ತಿರುವ ಸಂದರ್ಭದಲ್ಲಿ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಅದನ್ನು ಎಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದ ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗದಗ, ನ.04; ರಾಜ್ಯದಲ್ಲಿ ಮೊದಲ ಬಾರಿಗೆ ಯುವತಿಯರು ಮತ್ತು ಮಹಿಳೆಯರಿಗಾಗಿ ನಗರದ ತ್ರೀಕೂಟೇಶ್ವರ ದೇವಸ್ಥಾನ ಆವರಣದಲ್ಲಿ ಲಾಠಿ ಶೌರ್ಯ ತರಬೇತಿ ಆಯೋಜಿಸಲಾಗಿತ್ತು. ಕ್ರಾಂತಿ ಸೇನಾ, ಹಿಂದೂ ಜನ ಜಾಗೃತಿ, ರಾಜರಾಜೇಶ್ವರಿ ಮಹಿಳಾ ಮಂಡಳದಿAದ ಆಯೋಜಿಸಿದ್ದ ಈ ತರಬೇತಿಯಲ್ಲಿ ನೂರಾರು ಯುವತಿಯರು, ಮಹಿಳೆಯರು ಭಾಗಿಯಾಗಿದ್ದಾರೆ.
ಬಾಗಲಕೋಟೆ, ನ.04; ಬಾಗಲಕೋಟೆಯಲ್ಲಿ ಆನ್ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಸಿಲುಕಿದ ವ್ಯಾಪಾರಿಯೊಬ್ಬರು ಬರೋಬ್ಬರಿ 1.09 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಾ ಟ್ರೇಡ್ 903 ಸ್ಟ್ರಾಟಜಿ ಹಬ್ ಎಂಬ ಹೆಸರಿನ ನಕಲಿ ಆನ್ಲೈನ್ ಗ್ರೂಪ್ ಮೂಲಕ ಅಂತಾರಾಜ್ಯ ಆನಲೈನ್ ಖದೀಮರು ವ್ಯಾಪಾರಿಯ ವಿಶ್ವಾಸ ಗಳಿಸಿದ್ದಾರೆ. ಆಮೇಲೆ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಆಮಿಷವೊಡ್ಡಿ ಹೆಸರಿನಲ್ಲಿ ಹಣ ಎಗರಿಸಿದ್ದಾರೆ.ಆಗಸ್ಟ್ 12 ರಂದು ನಕಲಿ ಇನ್ವೆಸ್ಟ್ಮೆಂಟ್ ಮಾರ್ಕೆಟ್ ಮೂಲಕ ಬಾಗಲಕೋಟೆ ಮೂಲದ ವ್ಯಾಪಾರಿಗೆ ಗಾಳ ಹಾಕಿದ್ದ ಆನ್‌ಲೈನ್ ವಂಚಕರು, ಮೊದಲು ಗ್ರೂಪ್‌ಗೆ ಸೇರಿಸಿಕೊಂಡಿದ್ದರು. ಬಳಿಕ ಚಿಕ್ಕ ಮೊತ್ತದ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಆನಂತರ ಲಾಭ ತೋರಿಸಿ ಹಂತ ಹಂತವಾಗಿ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಮಾಡಿಸಿಕೊಂಡು ದೋಖಾ ಮಾಡಿದ್ದಾರೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 27ರವರೆಗೆ ನಡೆದ ವಹಿವಾಟಿನಲ್ಲಿ ವ್ಯಾಪಾರಿಯಿಂದ 1,09,05,800 ರೂಪಾಯಿ ವಂಚಿಸಿರುವ ಆರೋಪ ಇದೆ. ಈ ಪೈಕಿ ಕೇವಲ 5 ಲಕ್ಷ ರೂ. ಮಾತ್ರ ಹಿಂದಿರುಗಿಸಿ,…
ಮೂಡುಬಿದಿರೆ,ನ.04: ಪ್ರೇರಣಾ ಸೇವಾ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ನೂತನ ಪ್ರೇರಣಾ ಕಾರ್ಯಾಲಯದ ಭೂಮಿಪೂಜೆ ಮತ್ತು ಸಭಾಕಾರ್ಯಕ್ರಮದಲ್ಲಿ ಮುಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಭಾಗವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ – ಮಧ್ಯ ಕ್ಷೇತ್ರದ ಮಾನ್ಯ ಕ್ಷೇತ್ರಿಯ ಸಂಘಚಾಲಕರಾದ ಡಾ.ವಾಮನ್ ಶೆಣೈ ಅವರು ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡ ಹಾಗೂ ಪ್ರೇರಣಾ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ವಿವೇಕಾನಂದ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಳ್ಯ.ನ.4: ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ರಫೀಕ್ ಸಿ.ಎಂ. ಐವತ್ತೊಕ್ಲು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪುತ್ತೂರು, ನ. 04 ;ಪುತ್ತೂರು ನಗರದಲ್ಲೊಂದು ಭೀಕರ ಅಪಘಾತ ನಡೆದ ಪರಿಣಾಮ ಆಟೋ ರಿಕ್ಷಾ ನಜ್ಜುಗುಜ್ಜಾಗಿ ರಿಕ್ಷಾದಲ್ಲಿದ್ದ 6 ಜನ ಗಂಭೀರವಾಗಿ ಗಾಯಗೊಂಡಿದ್ದರು. ಒಂದು ಮಗು ಸ್ಥಳದಲ್ಲೇ ಪ್ರಾಣಕಳೆದುಕೊಂಡ್ರೆ ಮತ್ತೊಂದು ಹಿರಿಜೀವ ಆಸ್ಪತ್ರೆಯಲ್ಲಿ ಬದುಕಿಗಾಗಿ ಹೋರಾಡಿ ಇಹಲೋಕ ತ್ಯಜಿಸಿತ್ತು. ಇವೆಲ್ಲದರ ನಡುವೆ, ಮಾತೃಹೃದಯದ ಮಹಾತ್ಕಾರ್ಯಕ್ಕೆ ಜನರು ಶಹಬ್ಬಾಸ್ ಎನ್ನುತ್ತಿದ್ದಾರೆ. ಹೌದು ಅದೊಂದು ಭೀಕರ ಅಪಘಾತ. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ ನಜ್ಜುಗುಜ್ಜಾಗಿ ಒಳಗಿದ್ದ ಆರು ಜನ ಗಂಭೀರ ಗಾಯಗೊಂಡಿದ್ದಾರೆ. ತಲೆಗೆ ಏಟಾಗಿದ್ದ ಮೂರು ತಿಂಗಳ ಹಸುಳೆಯ ಮೂಗಿನಿಂದ ರಕ್ತ ಒಸರುತ್ತಿದೆ. ತಾಯಿ ಸ್ವತಃ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ. ಬಂಧುಗಳೆಲ್ಲ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಂಥಹದೊAದು ದುರ್ಭರ ಸನ್ನಿವೇಶದಲ್ಲಿ ಈ ತಾಯಿಯೊಬ್ಬರು ಎಲ್ಲಿಂದಲೋ ಧಾವಿಸಿ ಬಂದು ಹಸುಳೆಯನ್ನು ಎದೆಗವುಚಿಗೊಂಡು ಚಿಕಿತ್ಸೆ ಕೊಡಿಸಲು ಹೊರಟೇ ಬಿಡುತ್ತಾರೆ. ತತ್‌ಕ್ಷಣ ಸ್ಪಂದಿಸಿ ಮಗುವಿನ ಪಾಲಿಗೆ ಮಹಾಮಾತೆಯಾಗುತ್ತಾರೆ. ಮೂರು ಗಂಟೆ ಕಾಲ ಅದು ಯಾರೆಂದು ಅರಿಯದ ಹಸುಳೆಗಾಗಿ ತಾಯಿಯ ಪರದಾಟ ನೋಡುಗರ ಕರುಳು ಹಿಂಡುವAತಿತ್ತು. ಮೂರು ಗಂಟೆ…
ಉಡುಪಿ,ನ.04: ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕುವಂತಿಲ್ಲ…!?ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಬೀದಿ ನಾಯಿಗಳಿಗೆ ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ, ಶಾಲಾ ವಠಾರದಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ನೀಡಬಾರದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ನಗರಸಭೆಯಿಂದ ಪ್ರಾಥಮಿಕ ಹಂತದಲ್ಲಿ ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ದೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ರಾಜ್ ಫಿಶ್ ಮಿಲ್ ಹತ್ತಿರ, ಆದಿಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣನಗರಕ್ಕೆ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ಜಯವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು…

